ಜ್ವರ ಬಂದಾಗ ಹಣೆ ಮೇಲೆ ತಣ್ಣೀರಿನ ಬಟ್ಟೆ ಯಾಕೆ ಹಾಕ್ತಾರೆ? ಇದರಿಂದ ನಿಜವಾಗಿಯೂ ಜ್ವರ ಕಡಿಮೆಯಾಗುತ್ತಾ? ಈ ರೀತಿ ಮಾಡೋದ್ರಿಂದ ಏನು ಉಪಯೋಗ? ಇದರ ಬಗ್ಗೆ ಮಾಹಿತಿ ಮುಂದಿದೆ ಓದಿ.
ಫೀವರ್ ಸಾಮಾನ್ಯವಾಗಿ ಯಾವ ವಯಸ್ಸಿನವರಿಗಾದರು ಬಂದರೆ ತಣ್ಣೀರಿನ ಬಟ್ಟೆಯನ್ನು ಹಣೆ ಮೇಲೆ ಹಾಕುತ್ತಾರೆ ಅದರ ಜೊತೆಗೆ ತಣ್ಣೀರಿನ ಬಟ್ಟೆಯಿಂದ ಮೈ ಒರೆಸುತ್ತಾರೆ ಆದರೆ ಇದರಿಂದ ಜ್ವರ ಕಡಿಮೆಯಾಗಲ್ಲ. ಆದರೆ, ವೈದರು ಕೂಡ ತಣ್ಣೀರಿನ ಬಟ್ಟೆ ಹಾಕುವುದಕ್ಕೆ ಸಲಹೆ ನೀಡಿತ್ತಾರೆ.
ಸಾಮಾನ್ಯವಾಗಿ ಜ್ವರ ಬಂದಾಗ ನಮ್ಮ ದೇಹದಲ್ಲಿ ತುಂಬಾ ಹೀಟ್ ಜನರೇಟ್ ಆಗಿರುತ್ತದೆ. ನಮಗೆ ತಲೆನೋವಿನ ಜೊತೆಗೆ ಮೈಕೈ ನೋವು ಇರುತ್ತದೆ. ಹೀಗಾಗಿ ತಣ್ಣೀರಿನ ಬಟ್ಟೆ ಇಡೋದ್ರಿಂದ ಬಟ್ಟೆಯಲ್ಲಿರುವ ತೇವ ನಮ್ಮ ದೇಹದಲ್ಲಿರುವ ಉಷ್ಣಾಂಶ ಜೊತೆಗೆ ಸೇರಿ ಆವಿಯಾಗುತ್ತದೆ. ಇದರಿಂದ ನಮ್ಮ ದೇಹಕ್ಕೆ ರಿಲ್ಯಾಕ್ಸ್ ಸಿಗುತ್ತದೆ. ಹೀಗಾಗಿ ಜ್ವರ ಬಂದಾಗ ತಣ್ಣೀರಿನ ಒದ್ದೆ ಬಟ್ಟೆಯನ್ನು ಹಣೆ ಮೇಲೆ ಇಡಲಾಗುತ್ತದೆ.
ವಿದ್ಯಾ ಸಿದ್ದರಾಮಯ್ಯ, ಪವರ್ ಟಿವಿ