Wednesday, January 22, 2025

ಯುಗಾದಿಗೆ ಬ್ಯಾಡ್ ಮ್ಯಾನರ್ಸ್ ಸರ್ಪ್ರೈಸ್

ಬೆಂಗಳೂರು : ಇತ್ತೀಚೆಗಷ್ಟೇ ಅಭಿಷೇಕ್ ಅಂಬರೀಶ್ ಸಿನಿಮಾ ಹಾಗೂ ಮದುವೆ ಕುರಿತ ಸುದ್ದಿ ನೋಡಿದ್ದ ಸಿನಿಪ್ರೇಕ್ಷಕರಿಗೆ ಇದೀಗ ಮತ್ತೊಂದು ಅಪ್ಡೇಟ್ಸ್ ಇದು.

ಸುಕ್ಕಾ ಸೂರಿ ಹಾಗೂ ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಕಾಂಬೋ ಚಿತ್ರದ ಟೈಟಲ್ ಸಾಂಗ್ ಸ್ಟಿಲ್ಸ್ ಎಲ್ಲೆಡೆ ಹಂಗಾಮ ಮಾಡುತ್ತಿದೆ. ಕ್ರೇಜಿ ಲುಕ್​​ನಲ್ಲಿ ಕಿಕ್ ಕೊಡುತ್ತಿರುವ ಯಂಗ್ ರೆಬೆಲ್ ಸ್ಟಾರ್ ತನ್ನ ಖದರ್ ಜೊತೆ ತನ್ನ ಅಭಿಮಾನಿಗಳಿಗೆ ಸರ್​​ಪ್ರೈಸ್ ನೀಡಲು ಮುಂದಾಗಿದ್ದಾರೆ.

ಬ್ಯಾಡ್ ಮ್ಯಾನರ್ಸ್​ ಟೈಟಲ್ ಸಾಂಗ್​ಗೆ ಬರೋಬ್ಬರಿ 75 ಲಕ್ಷ ರೂ. ಖರ್ಚು ಮಾಡಿ ಮೂರು ಕಲರ್​ಫುಲ್ ಸೆಟ್​ಗಳಲ್ಲಿ ಚಿತ್ರೀಕರಿಸಲಾಗಿದೆ. ಇದು ಹಳೆ ಕಬರ್. ಇದೀಗ ಅದರ ಸ್ಟಿಲ್ ಫೋಟೋಸ್ ರಿವೀಲ್ ಆಗಿವೆ. ಕಿಕ್ ಕೊಡೋ ಕ್ರೇಜಿ ಲುಕ್​​ನಲ್ಲಿ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಮಿಂಚ್ತಿದ್ದಾರೆ.

ಇದನ್ನೂ ಓದಿ : ‘ಅಣ್ಣಂಗೆ ಲವ್ ಆಗಿದೆ..’ : ಭಾವೀ ಪತ್ನಿಗೆ ಮುತ್ತು ಕೊಟ್ಟ ಅಭಿ

ಸುಕ್ಕಾ ಸೂರಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್ ಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯಾಗಿದ್ದಾರೆ. ಟೀಸರ್ ಈಗಾಗ್ಲೇ ಸಖತ್ ಸದ್ದು ಮಾಡಿದೆ. ಅಂದಹಾಗೆ ಈ ಟೈಟಲ್ ಸಾಂಗ್ ಇದೇ ಯುಗಾದಿ ಹಬ್ಬಕ್ಕೆ ರಿಲೀಸ್ ಆಗ್ತಿದ್ದು, ರೆಬೆಲ್ ಸ್ಟಾರ್ ಅಂಬರೀಶ್ ಬರ್ತ್ ಡೇಗೆ ಸಿನಿಮಾ ಥಿಯೇಟರ್ ಅಂಗಳಕ್ಕೆ ಬರಲಿದೆ ಎನ್ನುವ ಸುದ್ದಿ ತಿಳಿದುಬಂದಿದೆ.

ಅಭಿಷೇಕ್ ರೂಟ್ ಕ್ಲಿಯರ್

ಇನ್ನು ಮಗನಿಗೆ ಮದ್ವೆ ಮಾಡೋ ತಯಾರಿಯಲ್ಲಿರೋ ಸುಮಲತಾ ಅಂಬರೀಶ್, ಸೆಂಟ್ರಲ್​ನಿಂದ ಸ್ಟೇಟ್ ಪಾಲಿಟಿಕ್ಸ್​ಗೆ ಧುಮುಕುವ ಮುನ್ಸೂಚನೆ ನೀಡಿದ್ದಾರೆ. ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲ ನೀಡೋದಾಗಿ ಹೇಳಿದ್ದಾರೆ.

ಬಿಜೆಪಿ ಸೇರ್ಪಡೆಗೆ ಕಾನೂನು ತೊಡಕು ಇರುವುದರಿಂದ ಸದ್ಯಕ್ಕೆ ಆ ಬಗ್ಗೆ ಮಾತನಾಡ ಸುಮಲತಾ, ಚಾಮುಂಡಿ ತಾಯಿ ಆಣೆ ಕುಟುಂಬ ರಾಜಕಾರಣ ಮಾಡಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ನಾನು ಇರೋವರೆಗೂ ಅಭಿಷೇಕ್ ಪಾಲಿಟಿಕ್ಸ್​ಗೆ ಬರಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

RELATED ARTICLES

Related Articles

TRENDING ARTICLES