Wednesday, January 22, 2025

ನಾಳೆ ‘ಸ್ವಾಭಿಮಾನಿ’ ಸುಮಲತಾ ಮಹತ್ವದ ಸುದ್ದಿಗೋಷ್ಠಿ

ಬೆಂಗಳೂರು : ​ಸ್ವಾಭಿಮಾನಿ ಸುಮಲತಾ.. ರಾಜ್ಯ ರಾಜಕೀಯದಲ್ಲಿ ಹಲ್ ಚಲ್ ಎಬ್ಬಿಸುತ್ತಿರುವ ಪವರ್ ಲೇಡಿ. ರಾಷ್ಟ್ರೀಯ ಪಕ್ಷಗಳಿಗೂ ಸುಮಲತಾ ಮುಂದಿನ ಪ್ಲ್ಯಾನ್ ಏನು ಅಂತಾ ಸಾಸಿವೆಕಾಳಷ್ಟು ಸುಳಿವು ಕೊಡದ ಜಾಣ್ಮೆಯ ರಾಜಕಾರಣಿ. ಆದರೀಗ, ಸ್ವತಃ ಅವರೇ ತಮ್ಮ ಮುಂದಿನ ರಾಜಕೀಯ ಅಧ್ಯಾಯದ ಬಗೆಗಿನ ನಿರ್ಧಾರ ತಿಳಿಸಲು ಮುಂದಾಗಿದ್ದಾರೆ.

ಹೌದು, ಜೆಡಿಎಸ್​ ಶಾಸಕ ಸಿ.ಎಸ್.ಪುಟ್ಟರಾಜು ಅವರು ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ಬಗ್ಗೆ ಮಾತನಾಡುತ್ತಿದ್ದಂತೆ, ನಾಳೆ ಮಂಡ್ಯದಲ್ಲಿ ಮಹತ್ವದ ಸುದ್ದಿಗೋಷ್ಠಿ ಕರೆದಿದ್ದಾರೆ.

ಸಂಸದೆ ಸುಮಲತಾ ಅಂಬರೀಶ್ ಅವರು ಯಾವ ಪಕ್ಷಕ್ಕೆ ಸೇರುತ್ತಾರೆ ಎನ್ನುವ ಕುತೂಹಲ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಸಂಸದೆ ಸುಮಲತಾ ರಾಜಕೀಯ ನಡೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟು ಮಾಡಿದೆ. ಯಾವ ಪಕ್ಷ ಸೇರಬೇಕೆಂದು ಮಂಡ್ಯ ಗೌಡ್ತಿ ತಮ್ಮ ಆಪ್ತರೊಂದಿಗೆ ಚರ್ಚೆ ನಡೆಸಿದ್ದಾರೆ.

ಸುಮಲತಾ ಬಿಜೆಪಿ ಸೇರುತ್ತಾರೆ?

ಈ ಮಧ್ಯೆ ಸುಮಲತಾ ಅಂಬರೀಶ್​ ನಾಳೆ (ಮಾರ್ಚ್ 10) ಬಿಜೆಪಿ ಸೇರ್ತಾರೆ ಎಂದು ಜೆಡಿಎಸ್​ ಶಾಸಕ ಸಿ.ಎಸ್.ಪುಟ್ಟರಾಜು ಹೊಸ ಬಾಂಬ್ ಸಿಡಿಸಿದ್ದಾರೆ. ನಾಳೆ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರುತ್ತಾರೆ ಎಂದು ಜೆಡಿಎಸ್​ ಶಾಸಕ ಹೇಳಿದ್ದಾರೆ. ಮತ್ತೊಂದೆಡೆ ನಾಳೆಯೇ(ಮಾ.10) ಸುಮಲತಾ ಅಂಬರೀಶ್​ ಸುದ್ದಿಗೋಷ್ಠಿ ಕರೆದಿದ್ದು, ಅಧಿಕೃತವಾಗಿ ಬಿಜೆಪಿ ಸೇರ್ಪಡೆ ಬಗ್ಗೆ ಘೋಷಿಸುವ ಸಾಧ್ಯತೆಗಳಿವೆ. ಮಂಡ್ಯದ ತಮ್ಮ ನಿವಾಸದಲ್ಲೇ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಸ್ವಾಭಿಮಾನಿ ಸುಮಲತಾ ‘ಕೈ’ಯಲ್ಲಿ ಕೇಸರಿ ಶಾಲು

ಹೈಕಮಾಂಡ್​ನಿಂದ​ ಗ್ರೀನ್ ಸಿಗ್ನಲ್

ಸುಮಲತಾ ಬಿಜೆಪಿ ಸೇರ್ಪಡೆಗೆ ಹೈಕಮಾಂಡ್​ನಿಂದ​ ಗ್ರೀನ್ ಸಿಗ್ನಲ್​ ನೀಡಿದ್ದರಿಂದ ಸುಮಲತಾ ಅಂಬರೀಶ್​ ದಿಢೀರ್ ಸುದ್ದಿಗೋಷ್ಠಿ ಕರೆದಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಒಟ್ನಲ್ಲಿ, ಸುಮಲತಾ ನಾಳೆ ಎಲ್ಲಾ ಕುತೂಹಲಕ್ಕೆ ತೆರೆ ಎಳೆಯುತ್ತಾ? ಯಾವ ಪಕ್ಷಕ್ಕೆ ಸಿಹಿ ಸುದ್ದಿ ನೀಡುತ್ತಾರೆ? ಅಥವಾ ತಮ್ಮ ಬಗ್ಗೆ ಹೇಳಿಕೆ ಹರಿಬಿಡುತ್ತಿರುವವರಿಗೆ ತಿರುಗೇಟು ನೀಡುತ್ತಾರೆಯೇ ಎಂದು ಕಾದುನೋಡಬೇಕಿದೆ.

RELATED ARTICLES

Related Articles

TRENDING ARTICLES