ಬೆಂಗಳೂರು : ಹೇ.. ಅಲ್ಲಿ ನೋಡು ಅವಳ ಕೂದಲು ಎಷ್ಟು ಉದ್ದನೆಯದ್ದಾಗಿದೆ. ಇವಳ ಕೂದಲು ಎಷ್ಟು ದಟ್ಟವಾಗಿದೆ. ಇವಳ ಕೂದಲು ಎಷ್ಟು ಸುಂದರವಾಗಿದೆ. ಮಹಿಳೆಯರು ಒಂದೆಡೆ ಸೇರಿದಾಗ ಥಟ್ಟನೆ ಬಾಯಿಂದ ಹೊರಬರುವ ಮಾತುಗಳಿವು.
ಹೌದು, ಪ್ರತಿಯೊಬ್ಬ ಮಹಿಳೆಯೂ (ಹೆಣ್ಣು ಮಕ್ಕಳು) ಈ ರೀತಿಯ ಕೂದಲು ಹೊಂದಬೇಕು ಎಂಬ ಬಯಕೆ ಹೊಂದಿರುತ್ತಾರೆ. ಆದರೆ, ಬಿಡುವಿಲ್ಲದ ಜೀವನಶೈಲಿ, ಆಹಾರ ಪದ್ಧತಿ ಸೇರಿದಂತೆ ಇಂದಿನ ಕಲುಷಿತ ವಾತಾವರಣದ ಜೊತೆಗೆ ಇದು ಅಸಾಧ್ಯವೇ ಸರಿ.
ಹಲವು ಸಾಂಕ್ರಾಮಿಕ ರೋಗಗಳ ಉಲ್ಭಣ ಹಾಗೂ ಆರೋಗ್ಯ ಸಂರಕ್ಷಣೆಯ ನಡುವೆ ಕೂದಲನ್ನು ಆರೈಕೆ ಮಾಡುವುದು ತುಸು ಕಷ್ಟ. ಕೂದಲು ಉದುರುವುದು, ತಲೆಹೊಟ್ಟು ಹಾಗೂ ಬಿಳಿಯಾಗುವುದನ್ನು ತಪ್ಪಿಸಲು ಚಿಕಿತ್ಸೆಯ ಮೊರೆ ಹೋಗುವುದನ್ನು ನಾವು ಗಮನಿಸಬಹುದು.
ಇದನ್ನೂ ಓದಿ : ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ಎಷ್ಟು ಉತ್ತಮ ಗೊತ್ತಾ?
ಮಹಿಳೆಯರ ಸೌಂದರ್ಯ ಹೆಚ್ಚಿಸಲು ಚರ್ಮದ ಆರೈಕೆ ಎಷ್ಟು ಮುಖ್ಯವೋ ಅದರ ಜೊತೆಗೆ ಕೂದಲಿನ ಆರೈಕೆಯು ಅಷ್ಟೇ ಮುಖ್ಯ. ಇತ್ತೀಚಿನ ದಿನಗಳಲ್ಲಿನ ಕೂದಲು ಉದುರುವಿಕೆ ಹೆಚ್ಚಾಗುತ್ತದೆ. ಈ ರೀತಿಯ ಸಮಸ್ಯೆ ಇರುವವರು ಮನೆಯಲ್ಲಿ ಸಿಗುವ ಸುಲಭ ವಸ್ತುಗಳನ್ನು ಉಪಯೋಗಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಕೂದಲು ಉದುರುವಿಕೆಗೆ ಲೋಲೆರಸ
ಲೋಲೆರಸ ಎಲ್ಲರಿಗೂ ಗೊತ್ತಿದೆ. ಇದು ನಮ್ಮ ಕೂದಲ ಆರೋಗ್ಯ ಕಾಪಾಡಲು ಸಹಾಯಕವಾಗುತ್ತದೆ. ಕೊಬ್ಬರಿಎಣ್ಣೆಗೆ ಸ್ವಲ್ಪ ಅಲುವಿರಾ ಸೇರಿಸಿ ತಲೆಗೆ ಹಚ್ಚಿ 1 ಗಂಟೆಯ ನಂತರ ಶುಭ್ರಗೊಳಿಸಬೇಕು. ವಾರದಲ್ಲಿ ಎರಡು ಬಾರಿ ಈ ರೀತಿ ಮಾಡಿದರೆ ನಿಮ್ಮ ಕೂದಲು ಉದುರುವ ಸಮಸ್ಯೆ ಕಡಿಮೆ ಯಾಗುತ್ತದೆ.
ಅಗಸೆ ಬೀಜದಿಂದ ಕೂದಲ ಹೊಳಪು
ಮತ್ತೊಂದು ವಿಧಾನವೆಂದರೆ ಅಗಸೆ ಬೀಜವನ್ನು ನೀರಿನಲ್ಲಿ ಕುದಿಸಿ ಜೆಲ್ ತಯಾರಿಸಿಕೊಂಡು ಅದಕ್ಕೆ ಈರುಳ್ಳಿ ರಸ , ಕೊಬ್ಬರಿ ಎಣ್ಣೆ , ಬಾದಾಮಿ ಆಯಿಲ್ ವಿಟಮಿನ್ ಇ ಕ್ಯಾಪ್ಸೂಲ್ ಹಾಕಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚುವುದರಿಂದ ಕೂದಲ ಹೊಳಪು ಹೆಚ್ಚುತ್ತದೆ. ಹಾಗೇ ಕೂದಲು ಆರೋಗ್ಯಯುತವಾಗುತ್ತದೆ. ವಾರದಲ್ಲಿ 2 ರಿಂದ 3 ಬಾರಿ ಈ ರೀತಿ ಮಾಡಿದರೆ ಸಾಕು ನಿಮ್ಮ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ.
- ಸಾಹಿತ್ಯ, ಪವರ್ ಟಿವಿ