Monday, December 23, 2024

ನಟಿ ನಗ್ಮಾಗೆ ವಂಚನೆ : ಒಂದೇ ಕ್ಲಿಕ್ ನಲ್ಲಿ 1 ಲಕ್ಷ ಕಳೆದುಕೊಂಡ ‘ಕುರುಬನ ರಾಣಿ’

ಬೆಂಗಳೂರು : ಬಾಲಿವುಡ್‌ ನಟಿ ಹಾಗೂ ರಾಜಕಾರಣಿ, ಕನ್ನಡದಲ್ಲಿ ಕುರುಬನ ರಾಣಿ ಚಿತ್ರದಲ್ಲಿ ನಟಿಸಿದ್ದ ನಟಿ ನಗ್ಮಾ ಮೊರಾರ್ಜಿಗೆ ಸೈಬಲ್‌ ವಂಚನೆ ಆಗಿದೆ.

ಹೌದು, ಕೆವೈಸಿ ವಂಚನೆಯಿಂದಾಗಿ ನಟಿ ನಗ್ಮಾ ಮೊರಾರ್ಜಿ ಅವರು 1 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಕೇವಲ ಒಂದು ಲಕ್ಷ ಕಳೆದುಕೊಂಡಿದ್ದಕ್ಕೆ ಖುಷಿ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ನಟಿ ನಗ್ಮಾ ಫೋನ್ ಗೆ ಥೇಟ್ ಬ್ಯಾಂಕ್ ರೀತಿಯ ಮೆಸೇಜ್ (ಸಂದೇಶ) ಬಂದಿತ್ತು. ತಮ್ಮ ಮೊಬೈಲ್‌ಗೆ ಬಂದ ಸ್ಪಾಮ್‌ ಲಿಂಕ್‌ನ ಮೇಲೆ ಕ್ಲಿಕ್‌ ಮಾಡಿದ್ದರಿಂದ 1 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಧೋನಿ, ಅಭಿಷೇಕ್ ಬಚ್ಚನ್ ಹೆಸರಲ್ಲಿ ನಕಲಿ ಕ್ರೆಡಿಟ್ ಕಾರ್ಡ್

ವಂಚನೆ ಆಗಿದ್ದು ಹೇಗೆ ಗೊತ್ತಾ?

ವರದಿಯ ಪ್ರಕಾರ, ಫೆಬ್ರವರಿ 28 ರಂದು ನಟಿ ನಗ್ಮಾ 99,998 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಬ್ಯಾಂಕ್‌ಗಳು ಕಳಿಸುವಂಥದ್ದೇ ನಂಬರ್‌ನಿಂದ ನಗ್ಮಾ ಅವರು ಸಂದೇಶವನ್ನು ಸ್ವೀಕರಿಸಿದ್ದರು. ಅದಲ್ಲದೆ, ಇದು ಯಾವುದೇ ಪ್ರೈವೇಟ್‌ ನಂಬರ್‌ ಕೂಡ ಆಗಿರಲಿಲ್ಲ ಎಂದು ನಗ್ಮಾ ಹೇಳಿದ್ದಾರೆ.

80 ಸಂತ್ರಸ್ತರಲ್ಲಿ ನಗ್ಮಾ

ಬ್ಯಾಂಕ್ ಖಾತೆ ವಂಚನೆಯ ಮೂಲಕ ಕೆಲವೇ ದಿನಗಳಲ್ಲಿ ಹಲವಾರು ಲಕ್ಷ ರೂಪಾಯಿಗಳನ್ನು ವಂಚಿಸಿದ ಇತರ 80 ಸಂತ್ರಸ್ತರಲ್ಲಿ ನಗ್ಮಾ ಕೂಡ ಸೇರಿದ್ದಾರೆ. ಈ ಎಲ್ಲಾ ವ್ಯಕ್ತಿಗಳು ಒಂದೇ ಖಾಸಗಿ ಬ್ಯಾಂಕ್‌ನಲ್ಲಿ ಅಕೌಂಟ್‌ ಹೊಂದಿರುವವರಾಗಿದ್ದಾರೆ. ಅಲ್ಲದೆ, ನಟಿ ನಗ್ಮಾ, ಸೈಬರ್‌ ಮೋಸದ ಮಾಹಿತಿಯನ್ನೂ ಕೂಡ ಹಂವಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES