Friday, April 19, 2024

ದುರಾದೃಷ್ಟ : ಶುಲ್ಕ ಕಟ್ಟಿಲ್ಲವೆಂದು 16 ಮಕ್ಕಳನ್ನು ಪರೀಕ್ಷೆಗೆ ಕೂರಿಸದ ಶಾಲೆ!

ಬೆಂಗಳೂರು : ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಯಾವ ಹಂತಕ್ಕೆ ತಲುಪಿದೆ ಎನ್ನುವುದಕ್ಕೆ ಇದು ಸ್ಪಷ್ಟ  ನಿದರ್ಶನ. ಶಾಲ್ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೂರಿಸದೆ ಶಾಲಾ ಆಡಳಿತ ಮಂಡಳಿ ದರ್ಪ ಪ್ರದರ್ಶಿಸಿದೆ.

ಹೌದು, ಇಂಥದೊಂದು ಘಟನೆ ಅರಮನೆನಗರಿ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಖಾಸಗಿ ಶಾಲೆಯಲ್ಲಿ ಹೈ ಡ್ರಾಮ ಸೃಷ್ಟಿಯಾಗಿದೆ. ಶುಲ್ಕ ಕಟ್ಟಿಲ್ಲವೆಂದು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೂರಿಸದ ಆರೋಪ ಕೇಳಿ ಬಂದಿದ್ದು ಮಕ್ಕಳ ಮುಂದೆಯೇ ಪೋಷಕರು ಮತ್ತು ಶಿಕ್ಷಕರ ನಡುವೆ ಮಾರಾಮಾರಿಯೂ ನಡೆದಿದೆ. ಮೈಸೂರಿನನ ರಾಯಲ್ ಕಾನ್ ಕಾರ್ಡ್ ಶಾಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ವಿದ್ಯಾರ್ಥಿಗಳಿಗೆ ಥಳಿಸಿದ ಪ್ರಾಂಶುಪಾಲೆ

ಮೈಸೂರು ನಗರದ ಬೋಗಾದಿ 2ನೇ ಹಂತದಲ್ಲಿರುವ ಈ ಖಾಸಗಿ ಶಾಲೆಯಲ್ಲಿ ಮಕ್ಕಳಿಗೆ ಪರೀಕ್ಷೆಗೆ ಕೂರಿಸದ ಶಾಲೆ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ಶುಲ್ಕ ಕಟ್ಟಿಲ್ಲವೆಂದು 16 ಮಕ್ಕಳನ್ನು ಪರೀಕ್ಷೆಗೆ ಕೂರಿಸಿಲ್ಲ. ಅಲ್ಲದೆ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲೆ ಥಳಿಸಿದ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ : H3N2 : ರಾಜ್ಯಕ್ಕೆ ಹೊಸ ಗೈಡ್ ಲೈನ್ಸ್ : ಇವರಿಗೆ ಮಾತ್ರ ಅನ್ವಯ

ಈ ಹಿನ್ನೆಲೆ ಸುದ್ದಿ ಹಿನ್ನೆಲೆಯಲ್ಲೇ ಪೋಷಕರು ಶಾಲೆಗೆ ಧಾವಿಸಿ ಶಾಲಾ ಆಡಳಿತ ಮಂಡಳಿ ವಿರುದ್ಧ ಕೆಂಡಕಾರಿದ್ದಾರೆ. ಶಾಲೆಯ ಮ್ಯಾನೇಜರ್ ​​ಗೆ ಪೋಷಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಸದ್ಯ ಸ್ಥಳಕ್ಕೆ ಸರಸ್ವತಿಪುರಂ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

1.10 ಲಕ್ಷ ಶುಲ್ಕ ಬಾಕಿ?

ಈ ಖಾಸಗಿ ಶಾಲೆ ವಿದ್ಯಾಶ್ರಮ ಹೆಸರಲ್ಲಿ  ನಡೆಯುತ್ತಿದೆ. ಶುಲ್ಕ ಸಂಬಂಧ 16 ಜನ ವಿದ್ಯಾರ್ಥಿಗಳ ವಿಚಾರದಲ್ಲಿ ಗೊಂದಲವಿದೆ. ಸದ್ಯ ಶುಲ್ಕ ಕಟ್ಟದ 16 ವಿದ್ಯಾರ್ಥಿಗಳು ಶಾಲೆಯ ಹೊರಗೆ ಕುಳಿತಿದ್ದಾರೆ. ಶಾಲೆಯ ಪ್ರಕಾರ 1 ಲಕ್ಷದ 10 ಸಾವಿರ ಕಟ್ಟಬೇಕು ಎಂದು ತಿಳಿದುಬಂದಿದೆ.

ಪೋಷಕರ ಪ್ರಕಾರ 82 ಸಾವಿರ ಶುಲ್ಕ ಕಟ್ಟಬೇಕು ಎಂದು ಹೇಳುತ್ತಿದ್ದಾರೆ. ಹೀಗಾಗಿ, ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೂರಿಸಿಲ್ಲ. ಶಾಲಾ ಆಡಳಿತ ಮಂಡಳಿ ವಿರುದ್ದ ಶಿಕ್ಷಣ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

RELATED ARTICLES

Related Articles

TRENDING ARTICLES