Wednesday, January 22, 2025

RRR ರೀ-ರಿಲೀಸ್ : ಮಾರ್ಚ್ 10ರಿಂದ ಮತ್ತೆ ಬೆಳ್ಳಿತೆರೆ ಮೇಲೆ ಕಮಾಲ್

ಬೆಂಗಳೂರು : ಲಾಸ್ ಏಂಜಲ್ಸ್​​ನಲ್ಲಿ RRR (ತ್ರಿಬಲ್ ಆರ್) ಸಿನಿಮಾ ಆಲ್​ಟೈಂ ರೆಕಾರ್ಡ್​ ಮಾಡೋ ಮನ್ಸೂಚನೆ ನೀಡಿದೆ. ಬರೋಬ್ಬರಿ 342 ದಿನ ಹೌಸ್​ಫಲ್ ಪ್ರದರ್ಶನ ಕಂಡಿರೋ ಸೌತ್ ಮೂವಿ, ಇಂದಿಗೂ ಕಿಲೋಮೀಟರ್​ ಗಟ್ಟಲೆ ಕ್ಯೂನಿಂದ ಮ್ಯಾಜಿಕ್ ಮಾಡ್ತಿದೆ. ಆಸ್ಕರ್ ಅಂಗಳಕ್ಕೆ ಕಾಲಿಟ್ಟಿರೋ ತ್ರಿಬಲ್ ಆರ್, ಇದೀಗ ರೀ- ರಿಲೀಸ್​ ಆಗುತ್ತಿದೆ.

ತ್ರಿಬಲ್ ಆರ್ ಸಿನಿಮಾ ಜಪಾನ್​ನ 114 ಸೆಂಟರ್​ಗಳಲ್ಲಿ ಹಂಡ್ರೆಡ್ ಡೇಸ್ ಯಶಸ್ವಿ ಪ್ರದರ್ಶನ ಕಂಡಿರೋ ಏಕೈಕ ಭಾರತೀಯ ಚಿತ್ರ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜಮೌಳಿಯ ತ್ರಿಬಲ್ ಆರ್ ಸಿನಿಮಾ ಬರೀ ನಮ್ಮ ಇಂಡಿಯನ್ಸ್​ಗಷ್ಟೇ ಅಲ್ಲ, ವಿದೇಶಿಯರಿಗೂ ಇಷ್ಟವಾಗಿದೆ. ರಾಜಮೌಳಿ ಸೃಷ್ಟಿ ಮಾಡಿದ ವಿಶೇಷ ಪ್ರಪಂಚ, ಪಾತ್ರಗಳು ಹಾಗೂ ಹುಬ್ಬೇರಿಸೋ ಅಂತಹ ಮೇಕಿಂಗ್ ಝಲಕ್ ಸಿನಿಪ್ರಿಯರನ್ನು ತನ್ನತ್ತ ಆಕರ್ಷಿಸಿದೆ.

ಅದ್ಧೂರಿ ತಾರಾಗಣದ ಚಿತ್ರ

ನಟ ರಾಮ್ ಚರಣ್ ತೇಜಾ ಹಾಗೂ ಜೂನಿಯರ್ ಎನ್​ಟಿಆರ್ ಅಂತಹ ಗ್ರೇಟ್ ಌಕ್ಟರ್​ಗಳ ಜೊತೆ ಆಲಿಯಾ ಭಟ್, ಅಜಯ್ ದೇವಗನ್ ಸೇರಿ ಅದ್ದೂರಿ ತಾರಾಗಣ ಚಿತ್ರದಲ್ಲಿತ್ತು. ಬ್ರಿಟಿಷರ ಆಳ್ವಿಕೆಯ ಕಾಲಘಟ್ಟದ ಕಥೆಯನ್ನು ನೋಡುಗರಿಗೆ ಕ್ಷಣ ಕ್ಷಣಕ್ಕೂ ರೋಮಾಂಚನಕಾರಿ ಆಗುವ ರೀತಿ ರಾಜಮೌಳಿ ಕಮಾಲ್ ಮಾಡಿದ್ದರು.

ಹೀಗಾಗಿಯೇ, ಅಮೆರಿಕಾದ ಲಾಸ್ ಏಂಜಲ್ಸ್​​ನ ಒಂದು ಮಲ್ಟಿಪ್ಲೆಕ್ಸ್ ಥಿಯೇಟರ್​ನಲ್ಲಿ ಇಂದಿಗೂ ಹೌಸ್​ಫುಲ್ ಪ್ರದರ್ಶನ ಕಾಣ್ತಿದೆ. ತ್ರಿಬಲ್ ಆರ್. ರಿಲೀಸ್ ಆದ ದಿನದಿಂದ ಇಲ್ಲಿಯವರೆಗೆ 342 ದಿನ ಕಳೆದಿದ್ದು, ಇಂದಿಗೂ ಜನ ಕ್ಯೂ ನಿಂತು ಟಿಕೆಟ್ ಖರೀದಿಸಿ, ಮುಗಿಬಿದ್ದು ಸಿನಿಮಾನ ಕಣ್ತುಂಬಿಕೊಳ್ತಿದ್ದಾರೆ. ಇದು ಒಂದು ಸಿನಿಮಾಗಿರೋ ಪವರ್, ಇದು ಒಬ್ಬ ಮೇಕರ್​ಗಿರೋ ಖದರ್.

ತ್ರಿಬಲ್ ಆರ್ ಮುಡಿಗೆ ಹಲವು ಗರಿ

ತ್ರಿಬಲ್ ಆರ್ ಈಗಾಗಲೇ ಗೋಲ್ಡನ್ ಗ್ಲೋಬ್ ಅವಾರ್ಡ್​, ಕ್ರಿಟಿಕ್ಸ್ ಸರ್ಕಲ್, ಹೆಚ್​ಸಿಎ ಅವಾರ್ಡ್ಸ್ ಸೇರಿದಂತೆ ಸಾಲು ಸಾಲು ಹಾಲಿವುಡ್​ನ ಪ್ರತಿಷ್ಠಿತ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಸದ್ಯ ಆಸ್ಕರ್ ಅಂಗಳದಲ್ಲಿದೆ. ನಾಟು ನಾಟು ಹಾಡಿನ ಘಾಟು ಆಸ್ಕರ್​ಗೂ ತಾಕಿದೆ. ಅಫಿಶಿಯಲಿ ಆ ಸಾಂಗ್ ನಾಮಿನೇಟ್ ಆಗಿದ್ದು, ಇದೇ ಮಾರ್ಚ್​ 12ಕ್ಕೆ ನಡೆಯಲಿರೋ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇಂಡಿಯಾಗೆ ಆಸ್ಕರ್ ಬರಲಿದೆ ಎನ್ನುವ ವಿಶ್ವಾಸ ಮೂಡಿದೆ.

ಒಟ್ಟಾರೆ ಆಸ್ಕರ್ ನೆಪದಲ್ಲಿ ಮತ್ತೊಮ್ಮೆ ಬಾಕ್ಸ್ ಆಫೀಸ್​ ದೋಚೋಕೆ ರಾಜಮೌಳಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಇದೇ ಮಾರ್ಚ್​ 10ರಿಂದ ಆಂಧ್ರ ಹಾಗೂ ತೆಲಂಗಾಣದಲ್ಲಿ ತ್ರಿಬಲ್ ಆರ್ ರೀ- ರಿಲೀಸ್ ಆಗಲಿದೆಯಂತೆ. ರೀ ರಿಲೀಸ್ ಆದಮೇಲೆ ಸಿನಿ ಪ್ರೇಕ್ಷಕ ಯಾವ ರೀತಿ ಪ್ರತಿಕ್ರಿಯೆ ಕೊಡುತ್ತಾನೆ ಅಂತಾ ಕಾದುನೋಡಬೇಕಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES