Thursday, December 26, 2024

ಗಂಡನಿಗೆ ಹಾಲಿನಲ್ಲಿ ಜಾಪಾಳ ಮಾತ್ರೆ ಹಾಕಿ ಕೊಡಿ ಎಂದ ರೇವಣ್ಣ

ಬೆಂಗಳೂರು : ಮದ್ಯಪಾನ ಮಾಡಿ ಮನೆಗೆ ಬಂದು ಪತ್ನಿಯರಿಗೆ ತಂದರೆ ಕೊಡುವ ಗಂಡಂದಿರಿಗೆ ಏನು ಮಾಡಬೇಕು ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸಲಹೆ ನೀಡಿದ್ದಾರೆ.

ಹೌದು, ಹಾಸನದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಕುಡಿದು ಮನೆಗೆ ಬರುವ ನಿಮ್ಮ ಗಂಡಂದಿರಿಗೆ ಹಾಲಿನಲ್ಲಿ ಜಾಪಾಳ ಮಾತ್ರೆ ಹಾಕಿ ಕೊಡಿ. ಮಾತ್ರೆ ಹಾಕಿದ ಹಾಲು ಕುಡಿದು ಒಳಗೆ ಹೊರಗೆ ಓಡಾಡುತ್ತಾರೆ. ಸುಸ್ತಾದ ಬಳಿಕ ಎಲ್ಲೂ ಹೋಗದೆ ಮನೆಯಲ್ಲೇ ಇರುತ್ತಾರೆ ಎಂದು ನಗೆ ಚಟಾಕಿ ಹಾರಿಸಿದ್ದಾರೆ.

ಈ ಹಿಂದೆ ಮದ್ಯದ ದರ ಕಡಿಮೆ ಇತ್ತು. ಈಗ ದುಪ್ಪಟ್ಟು ಹೆಚ್ಚಿದೆ. ಆದರೂ ಪುರುಷರು ತಮ್ಮ ಪತ್ನಿಯರಿಗೆ ಕಾಟ ಕೊಡುವುದನ್ನು ನಿಲ್ಲಿಸಿಲ್ಲ  ಎಂದು ಹೆಚ್.ಡಿ ರೇವಣ್ಣ ಹೇಳಿದ್ದಾರೆ.

4 ವರ್ಷದಲ್ಲಿ 48 ಮದ್ಯದಂಗಡಿ

ಮುಖ್ಯಮಂತ್ರಿಗಳೇ ನಿಮ್ಮ ಬಗ್ಗೆ ಗೌರವ ಇದೆ. ನಿಮ್ಮ ಹುದ್ದೆಯ ಗೌರವ ಹಾಳು ಮಾಡಿಕೊಳ್ಳ ಬೇಡಿ. ಕಳೆದ ನಾಲ್ಕು ವರ್ಷದಲ್ಲಿ ನಾವು 48 ಮದ್ಯದಂಗಡಿ ಮಾಡಿದ್ದೇವೆ. ಜನರು ಸುಖ ನಿದ್ರೆ ಮಾಡಲು ಕೊಡುಗೆ ಕೊಟ್ಟಿದ್ದೇವೆ ಎಂದು ಉದ್ಘಾಟನೆ ಮಾಡಿ. ಹಾಸನ ನಗರ ಜನತೆಗೆ ಇದೆ ನಮ್ಮ‌ಕೊಡುಗೆ ಎಂದು ಅಡಿಗಲ್ಲು ಹಾಕಿ ಎಂದು ಸಿಎಂ ಬೊಮ್ಮಾಯಿ ಅವಿಗೆ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ : ಮಹಿಳೆಯರಿಗೆ ಸೀರೆ, ಬೆಳ್ಳಿ ಗಿಫ್ಟ್!

250 ಎಕರೆ ಹೊಡೆಯೋಕೆ ಹುನ್ನಾರ

ಅಬಕಾರಿ ಸಚಿವರೆ, ಸಿಎಂ ಅವರೇ ನೀವು ಇದನ್ನು ಉದ್ಘಾಟನೆ ಮಾಡಿ. ಡಿಸಿ, ಎಸ್ಪಿ, ಸಿಎಂ, ಉಸ್ತುವಾರಿ ಸಚಿವರೆ ಕೆಲಸ ಆಗದೆ ಯಾಕೆ ಕಲ್ಲು ಹಾಕಿಸಿಕೊಳ್ಳೋಕೆ ಹೋಗಿದ್ದೀರಾ? ರೇವಣ್ಣ, ಕುಮಾರಸ್ವಾಮಿ ಮಾಡಿರೊ ಕೆಲಸಕ್ಕೆ ಅಡಿಗಲ್ಲು ಹಾಕೊಕೆ ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮುಂದುವರಿದು ಮಾತನಾಡಿರುವ ರೇವಣ್ಣ, 2023ಕ್ಕೆ ಬಿಜೆಪಿ ಇರುತ್ತದೊ ಇಲ್ಲವೋ ಗೊತ್ತಿಲ್ಲ. 140 ಸ್ಥಾನ ಗೆಲ್ಲುತ್ತೇವೆ ಎಂದ ಮೇಲೆ ಯಾಕೆ ಹೆದರಬೇಕು. ಇವರು ವಿಮಾನ ನಿಲ್ದಾಣದ ಆವರಣದಲ್ಲಿ 250 ಎಕರೆ ಹೊಡೆಯೋಕೆ ಹೊರಟಿದ್ದಾರೆ ಎಂದು ಆರೋಪ ಮಾಡಿದ್ದಾರೆ.

RELATED ARTICLES

Related Articles

TRENDING ARTICLES