Wednesday, January 22, 2025

ದಾಖಲೆ ಮೊತ್ತಕ್ಕೆ ಕಬ್ಜ ತಮಿಳು ರೈಟ್ಸ್ ಸೇಲ್

ಬೆಂಗಳೂರು : ಕಬ್ಜ ಸಿನಿಮಾ ಹವಾ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ರಿಲೀಸ್ ಡೇಟ್ ಹತ್ತಿರ ಆಗ್ತಿದ್ದಂತೆ ಪ್ಯಾನ್ ಇಂಡಿಯಾ ಕಬ್ಜ ಎಲ್ಲೆಡೆ ಕಮಾಲ್ ಮಾಡುತ್ತಿದೆ. ನಾಳೆ ಮುಂಬೈನಲ್ಲಿ ಇವೆಂಟ್ ನಡೆಯಲಿದ್ದು, ಅದಕ್ಕೂ ಮುನ್ನ ದಾಖಲೆ ಮೊತ್ತಕ್ಕೆ ತಮಿಳು ಡಿಸ್ಟ್ರಿಬ್ಯೂಷನ್ ರೈಟ್ಸ್ ಸೋಲ್ಡ್ ಔಟ್ ಆಗಿದೆ.

ಹೌದು, ಪೀರಿಯಡ್ ಌಕ್ಷನ್ ಡ್ರಾಮಾ ಕಬ್ಜ ರಿಲೀಸ್​ಗೆ ಕೇವಲ 10 ದಿನ ಬಾಕಿ ಇದೆ. ಇದು ಸ್ಯಾಂಡಲ್ ವುಡ್ ನ ಮತ್ತೊಂದು ಬಿಗ್ಗೆಸ್ಟ್ ಸಿನಿಮಾ ಆಗಿದ್ದು, ಕನ್ನಡದ ಕೀರ್ತಿ ಪತಾಕೆಯನ್ನು ಮುಗಿಲೆತ್ತರದಲ್ಲಿ ಹಾರಿಸೋಕೆ ಸಜ್ಜಾಗುತ್ತಿದೆ. ಹಾಲಿವುಡ್ ಶೈಲಿಯ ಮೇಕಿಂಗ್ ಕ್ವಾಲಿಟಿ ಇರೋ ಈ ಸಿನಿಮಾದ ಬಜೆಟ್ ಬರೋಬ್ಬರಿ 120 ಕೋಟಿ ಅನ್ನೋದು ಮತ್ತೊಂದು ವಿಶೇಷ.

ಕಾಸಿಗೆ ತಕ್ಕ ಕಜ್ಜಾಯ ಅನ್ನೋ ಮಾತಿನಂತೆ, ಬಜೆಟ್​ಗೆ ತಕ್ಕ ಬೊಂಬಾಟ್ ಪ್ರಾಡಕ್ಟ್ ಮಾಡಿದ್ದಾರೆ ನಿರ್ದೇಶಕ ಹಾಗೂ  ನಿರ್ಮಾಪಕ ಆರ್ ಚಂದ್ರು. ಇದು ಅವರ ಡ್ರೀಮ್ ಪ್ರಾಜೆಕ್ಟ್ ಆಗಿದ್ದು, ಜೀವಮಾನದ ಅನುಭವಗಳನ್ನೆಲ್ಲಾ ಈ ಸಿನಿಮಾ ಮೇಲೆ ಎಕ್ಸ್​ಪೆರಿಮೆಂಟ್ ಮಾಡಿದ್ದಾರೆ. ಸ್ವತಂತ್ರಪೂರ್ವ ಭಾರತದ ಬ್ಯಾಕ್​ಡ್ರಾಪ್ ಹಾಗೂ ಸ್ವತಂತ್ರ ಭಾರತದ ರೆಟ್ರೋ ಲೊಕೇಷನ್ಸ್​ನ ಕ್ರಿಯೇಟ್ ಮಾಡಿ ಚಿತ್ರೀಕರಣ ಮಾಡಲಾಗಿದೆ.

ಉಪ್ಪಿಗೆ ಶಿವಣ್ಣ, ಕಿಚ್ಚ ಸಾಥ್

ನಟ ಉಪೇಂದ್ರ, ಸುದೀಪ್ ಹಾಗೂ ಶಿವರಾಜ್​ಕುಮಾರ್ ಹೀಗೆ ಕನ್ನಡದ ಮೂವರು ಸೂಪರ್ ಸ್ಟಾರ್​ಗಳು ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ. ನಟ ಶ್ರಿಯಾ ಸರಣ್ ಗ್ಲಾಮರ್ ಕೂಡ ಚಿತ್ರದ ತೂಕ ಹೆಚ್ಚಿಸಿದೆ. ಪರಭಾಷೆಯ ಅದ್ಭುತ ಕಲಾವಿದರ ದೊಡ್ಡದೊಂದು ದಂಡು ಇಲ್ಲಿದೆ. ಟೆಕ್ನಿಕಲಿ ಸಿನಿಮಾ ಸಖತ್ ಸ್ಟ್ರಾಂಗ್ ಇದೆ. ನೋಡುವಗರಿಗೆ ವಿಶ್ಯುವಲ್ ಟ್ರೀಟ್ ಕೊಡೋ ಈ ಮಾಸ್ ವೆಂಚರ್, ಌಕ್ಷನ್ ಜೊತೆ ಎಮೋಷನ್ಸ್​ ಕೂಡ ಒಳಗೊಂಡಿದೆ.

ಅಪ್ಪು ಬರ್ತ್ ಡೇ ದಿನ ಕಬ್ಜ

ಪುನೀತ್ ರಾಜ್​ಕುಮಾರ್ ಬರ್ತ್ ಡೇ ದಿನ ಇದೇ ಮಾರ್ಚ್​ 17ಕ್ಕೆ ಕಬ್ಜ ಸಿನಿಮಾ ತೆರೆಗಪ್ಪಳಿಸಲಿದೆ. ಇಡೀ ದೊಡ್ಮನೆ ಅಭಿಮಾನಿಗಲಿಗೆ ಆರ್.ಚಂದ್ರು ಟ್ರೀಟ್ ಕೊಡುತ್ತಿದ್ದಾರೆ. ಅದ್ರಲ್ಲೂ ಡಾನ್ ಉಪ್ಪಿ, ಪೊಲೀಸ್ ಕಾಪ್ ಕಿಚ್ಚ ಸುದೀಪ್ ಜೊತೆ ಶಿವಣ್ಣನ ಕಿಲ್ಲರ್ ಲುಕ್ ನೋಡುಗರಿಗೆ ನಿರೀಕ್ಷೆಗೂ ಮೀರಿದ ಮಜಾ ಕೊಡಲಿದೆ ಎನ್ನುವುದು ಚಂದನವನದ ಟಾಕ್.

ಇದನ್ನೂ ಓದಿ : ಟಾಲಿವುಡ್ ಗೆ ಹಾರಿದ ನಿರ್ದೇಶಕ ಎ.ಹರ್ಷ ; ಗೋಪಿಚಂದ್ ಗೆ ಆಕ್ಷನ್ ಕಟ್

ಟ್ರೈಲರ್ ನೋಡಿ ಇಡೀ ಭಾರತೀಯ ಚಿತ್ರರಂಗ ಥ್ರಿಲ್ ಆಗಿದೆ. ಬಿಗ್​ಬಿ ಅಮಿತಾಬ್ ಬಚ್ಚನ್, ಅಜಯ್ ದೇವಗನ್, ಅಭಿಷೇಕ್ ಬಚ್ಚನ್ ಹೀಗೆ ಸಾಲು ಸಾಲು ಬಾಲಿವುಡ್ ಌಕ್ಟರ್​ಗಳು ಕಬ್ಜ ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಸಿನಿಮಾನ ತೆಲುಗಿನಲ್ಲಿ ನಟ ನಿತಿನ್ ಅವ್ರ ತಂದೆ ಸುಧಾಕರ್ ರೆಡ್ಡಿ ಹಾಗೂ ಬಾಲಿವುಡ್​ನಲ್ಲಿ ಆನಂದ್ ಪಂಡಿತ್ ಡಿಸ್ಟ್ರಿಬ್ಯೂಟ್ ಮಾಡ್ತಿದ್ದಾರೆ.

ಇದೀಗ ತಮಿಳು ಡಿಸ್ಟ್ರಿಬ್ಯೂಷನ್​ ರೈಟ್ಸ್​ನ ಪ್ರತಿಷ್ಠಿತ ಲೈಕಾ ಪ್ರೊಡಕ್ಷನ್ಸ್ ಬ್ಯಾನರ್​ ದಾಖಲೆ ಮೊತ್ತಕ್ಕೆ ತನ್ನದಾಗಿಸಿಕೊಂಡಿದೆ. ಲೈಕಾ ಪ್ರೊಡಕ್ಷನ್ಸ್ ಭಾರತೀಯ ಚಿತ್ರರಂಗದಲ್ಲಿ ಫಿಲ್ಮ್ ಪ್ರೊಡಕ್ಷನ್ ವಿಚಾರದಲ್ಲಿ ಬಹುದೊಡ್ಡ ಹೆಸರು ಮಾಡಿರೋ ಸಂಸ್ಥೆ. ಕೈದಿ, 2.ಓ, ಪೊನ್ನಿಯಿನ್ ಸೆಲ್ವನ್ ಹಾಗೂ ಇಂಡಿಯನ್ 2 ಅಂತಹ ದೊಡ್ಡ ಸಿನಿಮಾಗಳ ನಿರ್ಮಾಣ ಸಂಸ್ಥೆ ಈ ಲೈಕಾ ಪ್ರೊಡಕ್ಷನ್ಸ್. ಅವ್ರಿಗೆ ಕಬ್ಜದ ಕಂಟೆಂಟ್ ಹಾಗೂ ಮೇಕಿಂಗ್ ಇಷ್ಟವಾಗಿ ಬೃಹತ್ ಮೊತ್ತಕ್ಕೆ ಪಡೆದುಕೊಂಡಿರೋದು ಗಾಂಧಿನಗರದ ಸದ್ಯದ ಸೆನ್ಸೇಶನಲ್ ಟಾಕ್.

ಕೆಜಿಎಫ್, ಕಾಂತಾರ ಸಿನಿಮಾಗಳಂತೆ ಕಬ್ಜ ಕೂಡ ‘ಕ’ ಅಕ್ಷರದಿಂದ ತಯಾರಾಗಿರೋ ಚಿತ್ರ. ಜನರ ನಿರೀಕ್ಷೆ, ಕ್ರಿಯೇಟ್ ಮಾಡಿರೋ ಹೈಪ್ ಎಲ್ಲವನ್ನೂ ನೋಡ್ತಿದ್ರೆ ಬಾಕ್ಸ್ ಆಫೀಸ್​​ನಲ್ಲಿ ನಿರೀಕ್ಷೆಗೂ ಮೀರಿದ ಮೊತ್ತ ಕಲೆ ಹಾಕಲಿದೆ. ಸಾವಿರ ಕೋಟಿ ಲೆಕ್ಕಾಚಾರ ನಡೆಯುತ್ತಿದ್ದು, ಸಿನಿಮಾ ತೆರೆಕಂಡ ಮೇಲೆ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಾ ಅನ್ನೋದನ್ನು ಕಾದುನೋಡಬೇಕಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES