Wednesday, January 22, 2025

ಕಾಂಗ್ರೆಸ್ ‘ಕೈ’ ಆಟ ನಡೆಯೊಲ್ಲ : ಸಿಎಂ ಬೊಮ್ಮಾಯಿ

ಬೆಂಗಳೂರು : ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಾಗೂ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಲಂಚ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ  ಕಾಂಗ್ರೆಸ್ ಬಂದ್ ಗೆ ಕರೆ ನೀಡಿದೆ. ಈ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೈ ಆಟ ನಡೆಯೊಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ಸಂಪೂರ್ಣವಾಗಿ ಭ್ರಷ್ಟಾಚಾರದಿಂದ ಕೂಡಿದ್ದು, ಇವೆಲ್ಲಾ ಆಟ ನಡೆಯೋಲ್ಲ. 2023ರ ಮೇನಲ್ಲಿ ನಡೆಯುವ ಚುನಾವಣಾ ಅಖಾಡದಲ್ಲಿ ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಬಂದ್ ಆಗುವ ಕಾಲ ಬಂದಿದೆ

ಕಾಂಗ್ರೆಸ್ ಮಾಡಿರುವ ಕರ್ಮಕಾಂಡ ಒಂದೆರಡಲ್ಲ. ಕಾಂಗ್ರೆಸ್ ಖುದ್ದು ಬಂದ್ ಆಗುವ ಕಾಲ ಬಂದಿದೆ. ಪ್ರತಿಭಟನೆ, ಬಂದ್ ಮೂಲಕ ತಮ್ಮ ರಾಜಕೀಯ ಭವಿಷ್ಯ ಬರೆಯಬಹುದೆಂದು ಬಂದ್ ಗೆ ಕರೆ ನೀಡಿದ್ದಾರೆ. ಅವರಿಗೆ ಯಾವ ಪ್ರತಿಕ್ರಿಯೆ ದೊರೆಯಿವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಬಿಜೆಪಿ ಸ್ಪೀಡ್ ಗೆ ನಾನು ಬ್ರೇಕ್ ಹಾಕುತ್ತಿದ್ದೇನೆಯೇ ಹೊರತು ಕಾಂಗ್ರೆಸ್ ಅಲ್ಲ : ಎಚ್.ಡಿ ಕುಮಾರಸ್ವಾಮಿ

ದಿಂಬು, ಹಾಸಿಗೆ, ಬಿಸ್ಕತ್ತಿನಲ್ಲೂ ಲಂಚ

ಆಪಾದನೆ ಮಾಡುವವರು ಮೊದಲು ಶುದ್ಧ ಹಸ್ತರಿರಬೇಕು. ಆಗ ಬೆಲೆ ಸಿಗುತ್ತದೆ. ದಿಂಬು, ಹಾಸಿಗೆ, ಬಿಸ್ಕತ್ತು, ಕಾಫಿಯಂಥ ಸಣ್ಣ ವಿಷಯದಿಂದ ಹಿಡಿದು ನೀರಾವರಿಯವರೆಗೆ ಭ್ರಷ್ಟಾಚಾರ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಮಂತ್ರಿಗಳಿಗೆ ಗುರಿ ನೀಡಿದ್ದರು. ಎಂ.ಬಿ.ಪಾಟೀಲ್, ಜಾರ್ಜ್, ಮಹದೇವಪ್ಪ ಅವರನ್ನು ಎಷ್ಟು ಗುರಿ ನೀಡದ್ದರು ಎಂದು  ಕೇಳಬೇಕು ಎಂದು ಕುಟುಕಿದ್ದಾರೆ.

ಡಿಕೆಶಿ ಈಗ ಏನು ಹೇಳ್ತಾರೆ

ಕುಕ್ಕರ್ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯ ಬಂಧನವಾಗಿದ್ದು, ಐ.ಎಸ್.ಐ.ಎಸ್ ಸಂಘಟನೆ ಹೊಣೆ ಹೊತ್ತುಕೊಂಡಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅದೊಂದು ಸಾದಾ ಬಾಂಬ್ ಎಂದಿದ್ದರು. ಈಗ ಏನು ಹೇಳಿತ್ತಾರೆ ಎಂದು ಸಿಎಂ ಬೊಮ್ಮಾಯಿ ಪ್ರಶ್ನೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES