Saturday, December 28, 2024

ದೇವೇಗೌಡ್ರು ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್

ಬೆಂಗಳೂರು : ಮಾಜಿ ಪ್ರಧಾನ ಮಂತ್ರಿ ಹಾಗೂ ಜೆಡಿಎಸ್ ವರಿಷ್ಠರಾದ ಎಚ್.ಡಿ ದೇವೇಗೌಡರ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಬಂದಿದ್ದು, ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ಇದು ಸಂತೋಷದ ಸುದ್ದಿ.

ಹೌದು, ಎಚ್.ಡಿ ದೇವೇಗೌಡ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಕಳೆದ ಫೆಬ್ರವರಿ 28ರಂದು ಅನಾರೋಗ್ಯ ಹಾಗೂ ಕಾಲು ಊತ ಹೆಚ್ಚು ಆಗಿದ್ದ ಕಾರಣ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ವೈದ್ಯರು ದೇವೇಗೌಡರ ಆರೋಗ್ಯ ತಪಾಸಣೆ ಮಾಡಿ, ಒಂದು ವಾರದ ಕಾಲ ವಿಶ್ರಾಂತಿ ಪಡೆಯಲು ಸೂಚನೆ ನೀಡಿದ್ದರು. ಹೀಗಾಗಿ, ವೈದ್ಯರ ನಿಗಾದಲ್ಲಿದ್ದ ದೇವೇಗೌಡರು ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ.

ದೇವೇಗೌಡರಿಂದಲೇ ಹಾಸನ ಟಿಕೆಟ್ ಘೋಷಣೆ

ಇದೀಗ ತಾನೆ ತಮ್ಮ ಬೆಂಗಳೂರಿನ ಮನೆಗೆ ವಾಪಸ್ ಆಗಿರುವ ದೇವೇಗೌಡರಿಗೆ ದೊಡ್ಡ ಜವಾಬ್ದಾರಿಗಳು ಇವೆ. ಅದರಲ್ಲಿ ಹಾಸನ ಜೆಡಿಎಸ್ ಟಿಕೆಟ್ ಕಾಳಗವೂ ಒಂದಾಗಿದೆ. ಹಾಸನ ಟಿಕೆಟ್ ಬಗ್ಗೆ ದೇವೇಗೌಡರೇ ತೀರ್ಮಾನ ಮಾಡಿ ಘೋಷಣೆ ಮಾಡಬೇಕಿದೆ.

ಪಂಚರತ್ನ ಸಮಾರೋಪದಲ್ಲಿ ಎಚ್ ಡಿಡಿ ಭಾಗಿ

ಜೆಡಿಎಸ್ ಪಕ್ಷದ ಮಹತ್ವಕಾಂಕ್ಷೆಯ ಪಂಚರತ್ನ ರಥೆಯಾತ್ರೆ ಮುಕ್ತಾಯಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈ ತಿಂಗಳ 26ರಂದು ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಇದು ನನ್ನ ರಾಜಕೀಯ ಜೀವನದ ಇತಿಹಾಸದಲ್ಲಿಯೇ ಮಹೋನ್ನತ ಸಮಾವೇಶ ಆಗಲಿದೆ. ಈವರೆಗೂ ಯಾರೂ ಮಾಡಿರದಂಥ ಸಮಾವೇಶ ಇದಾಗಿರುತ್ತದೆ ಮೈಸೂರಿನಲ್ಲಿ ಸಮಾರೋಪ ನಡೆಯಲಿದ್ದು, ಎಚ್.ಡಿ ದೇವೇಗೌಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES