Wednesday, January 22, 2025

‘ಅಣ್ಣಂಗೆ ಲವ್ ಆಗಿದೆ..’ : ಭಾವೀ ಪತ್ನಿಗೆ ಮುತ್ತು ಕೊಟ್ಟ ಅಭಿ

ಬೆಂಗಳೂರು : ಒಂದೆಡೆ ರಾಜ್ಯ ರಾಜಕೀಯ. ಮತ್ತೊಂದೆಡೆ ಚಂದನವನ. ಎರಡೂ ಕ್ಷೇತ್ರಗಳಲ್ಲೀಗ ರೆಬಲ್ ಸ್ಟಾರ್ ಅಂಬರೀಶ್ ಫ್ಯಾಮಿಲಿಯದ್ದೇ ಸದ್ದು, ಸುದ್ದಿ ಕೂಡ. ಅಂಬರೀಶ್ ಪತ್ನಿ ಸಂಸದೆ ಸುಮಲತಾ ರಾಜಕೀಯದಲ್ಲಿ ಸುದ್ದಿಯಾಗುತ್ತಿದ್ದರೆ, ಮಗ ಅಭಿಷೇಕ್ ಅಂಬರೀಶ್ ಲವ್ ಮ್ಯಾಟರ್ ನಿಂದ ಸುದ್ದಿಯಾಗುತ್ತಿದ್ದಾರೆ.

ಹೌದು, ನಟ ಅಭಿಷೇಕ್ ಅಂಬರೀಶ್ ಅವರು ಅವಿವಾ ಬಿದ್ದಪ್ಪ ಜೊತೆಗೆ ಕಳೆದ ಡಿಸೆಂಬರ್ 11ರಂದು ನಿಶ್ಚಿತಾರ್ಥ ಮಾಡಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಬಹಳ ಬಳಿಕ ಅವಿವಾ ಅವರು ಅಭಿಷೇಕ್ ಜೊತೆಗಿರುವ ಕ್ಯೂಟ್ ಫೋಟೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಮಡಿದ್ದಾರೆ.

ಇದೀಗ ಆ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದ್ದು, ‘ಅಣ್ಣಂಗೆ ಲವ್ ಆಗಿದೆ..’ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಜೊತೆಗೆ, ಈ ಕ್ಯೂಟ್ ಜೋಡಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಇತ್ತ, ಈ ಫೋಟೋ ನೋಡಿದ ಅಭಿಷೇಕ್ ಅಂಬರೀಶ್ ಅಭಿಮಾನಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ : ರಿಷಬ್ ಮಗಳ ಮುದ್ದಾದ ವಿಡಿಯೋ ವೈರಲ್

ಅವಿವಾಗೆ ಕಿಸ್ ಕೊಟ್ಟ ಅಭಿ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ನಟ ಅಭಿಷೇಕ್ ಅಂಬರೀಶ್ ತಮ್ಮ ಭಾವೀ ಪತ್ನಿ ಅವಿವಾ ಹಣೆಗೆ ಪ್ರೀತಿಯಿಂದ ಮುತ್ತಿಡುತ್ತಿರುವುದನ್ನು ಕಾಣಬಹುದು. ಈ ಫೋಟೋಗೆ ಸಾಮಾಜಿಕ ಜಾಲತಾಣದಲ್ಲಿ ತರೆಹೇವಾರಿ ಕಾಮೆಂಟ್ ಬರುತ್ತಿವೆ.

ಲಿಟಲ್ ಕ್ಯೂಟಿಗೆ ಅಭಿ ವಿಶ್

ನಾನು ನಿನ್ನನ್ನು ಪಡೆದಿದ್ದೇನೆ, ಎಂದೆಂದಿಗೂ. ಹ್ಯಾಪಿ ಬರ್ತಡೇ ಈ ವರ್ಷ ಬೆಸ್ಟ್‌ ವರ್ಷವಾಗಲಿ. ನಮ್ಮ ಜೀವನದಲ್ಲಿ ಎದುರಾಗುವ ಪ್ರತಿಯೊಂದು ಕ್ಷಣವನ್ನು ಜೊತೆಗೆ ಅನುಭವಿಸೋಣ. ಲಿಟಲ್ ಕ್ಯೂಟಿ ಎಂದು ಅಭಿಷೇಕ್ ಬರೆದುಕೊಂಡಿದ್ದಾರೆ.

ಇನ್ನೂ, ನಟ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಮುಂದಿನ ವರ್ಷ ಅಂದರೆ ಜನವರಿಯಲ್ಲಿ ಅದ್ದೂರಿಯಾಗಿ ಸಪ್ತಪದಿ ತುಳಿಯಲಿದ್ದಾರೆ.

RELATED ARTICLES

Related Articles

TRENDING ARTICLES