Monday, December 23, 2024

ಕ್ಯೂಟ್ : ರಿಷಬ್ ಮಗಳ ಮುದ್ದಾದ ವಿಡಿಯೋ ವೈರಲ್

ಬೆಂಗಳೂರು : ಸ್ಯಾಂಡಲ್ ವುಡ್ ಸ್ಟಾರ್ ನಿರ್ದೇಶಕ ಹಾಗೂ ನಟ ರಿಷಬ್​ ಶೆಟ್ಟಿ ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೂ, ಫ್ಯಾಮಿಲಿ ಜೊತೆ ಹೆಚ್ಚು ಸಮಯವನ್ನು ಕಳೆಯುತ್ತಿದ್ದಾರೆ.

ಹೌದು, ರಿಷಬ್ ಶೆಟ್ಟಿ ಪತ್ನಿ ಹಾಗೂ ಮಕ್ಕಳ ಜೊತೆಗಿನ ಮೆಮೊರೇಬಲ್​ ಮೊಮೆಂಟ್​ಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಆಗಾಗ ಶೇರ್​ ಮಾಡುತ್ತಿರುತ್ತಾರೆ. ರಿಷಬ್​ ಮಗಳ ಹುಟ್ಟುಹಬ್ಬ ನಿಮಿತ್ತ ಮುದ್ದಿನ ಮಗಳ ಕ್ಯೂಟ್​ ವಿಡಿಯೋ ರಿಷಬ್​​​ ಹಂಚಿಕೊಂಡಿದ್ದಾರೆ.

ಅಪ್ಪನಿಗೆ ಮಗಳೆಂದರೆ ತುಸು ಹೆಚ್ಚೇ ಪ್ರೀತಿ. ರಿಷಬ್​ ಶೆಟ್ಟಿಯವರಿಗೂ ಹಾಗೆಯೇ, ಮಗಳು ರಾದ್ಯಾಳನ್ನು ತುಂಬಾನೇ ಮುದ್ದು ಮಾಡುತ್ತಾರೆ. ಇದೀಗ ಮಗಳ ವಿಡಿಯೋವನ್ನು ಪೋಸ್ಟ್‌ ಮಾಡಿರುವ​ ಅವರು, ನಮ್ಮ ಪುಟ್ಟ ರಾಜಕುಮಾರಿ ಬೆಳೆಯುವುದನ್ನು ನೋಡುವುದೇ ಖುಷಿ.

ಇದನ್ನೂ ಓದಿ: ರಾಯನ್ ರಾಜ್ ಜೊತೆಗಿನ ಕ್ಯೂಟ್ ವಿಡೀಯೋ ಶೇರ್ ಮಾಡಿದ ಮೇಘನಾ

ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಇರಲಿ

ಹ್ಯಾಪಿ ಬರ್ತ್​ಡೇ ರಾದ್ಯಾ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ರಾದ್ಯಾಳ ಮೇಲೆ ಸದಾ ಇರಲಿ ಎಂದು ಶುಭ ಹಾರೈಸಿದ್ದಾರೆ. ವಿಡಿಯೋದಲ್ಲಿ ರಿಷಬ್ ಶೆಟ್ಟಿ​ ಮಗಳ ಕ್ಯೂಟ್​ ಎಕ್ಸ್​ಪ್ರೆಶನ್ಸ್​, ಮುದ್ದಾದ ನಗು, ತುಂಟಾಟವನ್ನು ಕಾಣಬಹುದು.

ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ಕಾಂತಾರ ಸಿನಿಮಾ ದೇಶ ಹಾಗೂ ವಿದೇಶದಲ್ಲಿ ಭಾರೀ ಜನಮನ್ನಣೆ ಗಳಿಸಿದೆ. ಇದೀಗ ಸಿನಿಪ್ರಿಯರು ಕಾಂತಾರ 2 ಸಿನಿಮಾ ನಿರೀಕ್ಷೆಯಲ್ಲಿದ್ದಾರೆ. ಕಾಂತಾರ ಕನ್ನಡ, ತುಳು, ಮಲಯಾಳಂ, ಹಿಂದಿ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದೆ.

RELATED ARTICLES

Related Articles

TRENDING ARTICLES