Friday, January 3, 2025

ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟ ಸಿದ್ದು-ಡಿಕೆಶಿಗೆ ‘ಪರಂ’ ಪಂಚ್..!

ಬೆಂಗಳೂರು : ವಿಧಾನಸಭಾ ಚುನಾವಣೆ ಭರಾಟೆ ನಡುವೆ ಕಾಂಗ್ರೆಸ್ ಪಾಳಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು? ಎಂಬ ಬಗ್ಗೆ ಭಾರೀ ಚರ್ಚೆ ಹಾಗೂ ಗೊಂದಲ ಉಂಟಾಗಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಿಎಂ ಪಟ್ಟದ ಪ್ರಬಲ ಆಕಾಂಕ್ಷಿ ಎಂದು ಬಿಂಬಿಸಲಾಗುತ್ತಿದೆ.

ಹೌದು, ಐದು ವರ್ಷ ಯಶಸ್ವಿಯಾಗಿ ಸರ್ಕಾರ ನಡೆಸಿರುವ ಸಿದ್ದರಾಮಯ್ಯ ಸಿಎಂ ರೇಸ್ ನಲ್ಲಿ ಮುಂದಿದ್ದಾರೆ. ಇತ್ತ, ಕಾಂಗ್ರೆಸ್ ಸಂಸ್ಕೃತಿ ವಿಚಾರಕ್ಕೆ ಬಂದರೆ ಕೆಪಿಸಿಸಿ ಅಧ್ಯಕ್ಷರಾದವರಿಗೆ ಸಿಎಂ ಪಟ್ಟಾ ಖಾಯಂ ಎನ್ನುವ ಮಾತು ಕೇಳಿಬರುತ್ತಿದೆ. ಸಿದ್ದು-ಡಿಕೆಶಿ ಹೊರತುಪಡಿಸಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಸಹ ನಾನು ರೇಸ್ ನಲ್ಲಿ ಇದ್ದೇನೆ ಎಂದು ಆಗಾಗ ಹೇಳಿಕೆ ನಿಡುತ್ತಿದ್ದಾರೆ.

 

ಪಕ್ಷ ಅಧಿಕಾರಕ್ಕೆ ಬರುವ ಮೊದಲೇ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಸುತ್ತಿರುವ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರಿಗೆ ಡಾ.ಜಿ ಪರಮೇಶ್ವರ್ ಟಾಂಗ್ ಕೊಟ್ಟಿದ್ದಾರೆ.

ಯಾರಿಗೆ ಯಾವ ಹುದ್ದೆ ಅಂತ ವರಿಷ್ಟರು ಹೇಳ್ತಾರೆ

ಬೆಂಗಳೂರಿನಲ್ಲ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮೊದಲು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಬೇಕು. ಆಮೇಲೆ ಪಕ್ಷದ ವರಿಷ್ಠರು ಯಾರಿಗೆ ಏನು ಹುದ್ದೆ ನೀಡಬೇಕು ಎಂದು ತೀರ್ಮನಿಸುತ್ತಾರೆ ಎಂದು ಪರಮೇಶ್ವರ್ ಹೇಳಿದ್ದಾರೆ.

ಪಕ್ಷ ಅಧಿಕಾರಕ್ಕೆ ಮೊದಲೇ ಸ್ವಾರ್ಥ ಮಾಡಿಕೊಂಡರೆ ಪಕ್ಷ ಎಲ್ಲಿ ಅಧಿಕಾರಕ್ಕೆ ಬರಲು ಸಾಧ್ಯ? ಹೀಗಾಗಿ, ಎಲ್ಲ ನಾಯಕರು ಈಗ ಪಕ್ಷದ ಗೆಲುವಿಗೆ ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ. ಆ ಮೂಲಕ ನಾನು ಸಿಎಂ ರೇಸ್ ನಲ್ಲಿ ಇದ್ದೇನೆ, ಪಕ್ಷದ ವರಿಷ್ಠರ ನಿರ್ಧಾರ ಬರುವವರೆಗೆ ಕಾಯಿರಿ ಎಂದು ಪರೋಕ್ಷವಾಗಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES