Friday, August 22, 2025
Google search engine
HomeUncategorizedಖಾಲಿ ಕುರ್ಚಿಗಳಿಗೆ ಸಿದ್ದರಾಮಯ್ಯ ಭಾಷಣ : ಬಿಜೆಪಿಗರಿಗೆ ಆಹಾರವಾದ್ರ ಸಿದ್ದು..!

ಖಾಲಿ ಕುರ್ಚಿಗಳಿಗೆ ಸಿದ್ದರಾಮಯ್ಯ ಭಾಷಣ : ಬಿಜೆಪಿಗರಿಗೆ ಆಹಾರವಾದ್ರ ಸಿದ್ದು..!

ಬೆಂಗಳೂರು : ಬಿಜೆಪಿ ಸಮಾರಂಭಗಳಲ್ಲಿ ಬಿಜೆಪಿ ನಾಯಕರು ಖಾಲಿ ಕುರ್ಚಿಗಳಿಗೆ ಭಾಷಣ ಮಾಡುತ್ತಾರೆ ಎಂದು ಸದಾ ಟೀಕಿಸುತ್ತಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇದೀಗ ಪೇಚಿಗೆ ಸಿಲುಕಿದ್ದಾರೆ. ಧಾರವಾಡದಲ್ಲಿ ಖಾಲಿ ಕುರ್ಚಿಗಳಿಗೆ ಭಾಷಣ ಮಾಡಿ ಬಿಜೆಪಿ ನಾಯಕರಿಗೆ ಆಹಾರವಾಗಿದ್ದಾರೆ.

ಹೌದು, ಧಾರವಾಡ ನಗರದ ಕಡಪಾ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರಜಾಧ್ವನಿ ಯಾತ್ರೆಯ ಬಹಿರಂಗ ಸಾರ್ವಜನಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರು ಭಾಷಣ ಆರಂಭ ಮಾಡುತ್ತಿದ್ದಂತೆ ಕಾರ್ಯಕ್ರಮಕ್ಕೆ ಬಂದಿದ್ದ ಸಾರ್ವಜನಿಕರು ತಮ್ಮ ಆಸನದ ಕುರ್ಚಿಯನ್ನು ಬಿಟ್ಟು ಮನೆಯ ಕಡೆ ಹೆಜ್ಜೆ ಹಾಕಿದ್ದಾರೆ.

ಆರಂಭದಲ್ಲೇ ಕುರ್ಚಿ ಖಾಲಿ.. ಖಾಲಿ

ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಸಮಾವೇಶ ಎಲ್ಲಿ ನಡೆದರೂ ಅಲ್ಲಿ ಸಹಸ್ರಾರು ಸಂಖ್ಯೆಯ ಜನರು ಭಾಗವಹಿಸುತ್ತಿದ್ದರು. ಅದರಲ್ಲೂ ಸಮಾವೇಶದಲ್ಲಿ ಸಿದ್ದರಾಮಯ್ಯನವರ ಭಾಷಣ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತಿತ್ತು. ಆದರೆ, ಧಾರವಾಡದಲ್ಲಿ ಇದು ಉಲ್ಟಾ ಆಗಿದೆ. ಸಮಾರಂಭದ ಆರಂಭದಲ್ಲೇ ಜನರು ಕುರ್ಚಿ ಖಾಲಿ ಮಾಡಿ ಮನೆಯ ಕಡೆಗೆ ಹೆಜ್ಜೆ ಹಾಕಿದ ದೃಶ್ಯಗಳು ಕಂಡು ಬಂದಿದೆ.

ಖಾಲಿ ಕುರ್ಚಿಗಳ ವಿಡಿಯೋ ವೈರಲ್

ಮೊದಲು ಸಮಾವೇಶ ನಡೆದ ಸ್ಥಳದಲ್ಲಿ ಜನರು ಕಿಕ್ಕಿರಿದು ತುಂಬಿದರು. ಆದರೆ ಸಿದ್ದರಾಮಯ್ಯನವರ ಭಾಷಣ ಆರಂಭವಾಗುತ್ತಿದ್ದಂತೆ ಮಹಿಳೆಯರು ತಮ್ಮ ಖುರ್ಚಿಗಳನ್ನು ಖಾಲಿ ಮಾಡಿ ಮನೆಯ ಕಡೆ ಹೆಜ್ಜೆ ಹಾಕಿದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ 10 ಜನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ತಮ್ಮ ಶಕ್ತಿ ಪ್ರದರ್ಶನಕ್ಕೋಸ್ಕರ ಜನರನ್ನು ಸಮಾವೇಶಕ್ಕೆ ಕರೆ ತಂದಿದ್ದರು. ಸಮಾರಂಭ ತಡವಾದ ಕಾರಣ ಜನರು ಮನೆಗಳತ್ತ ತೆರಳಿದ್ದಾರೆ ಎನ್ನಲಾಗಿದೆ. ಆದರೆ, ಇದು ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ವಿರುದ್ಧ ಪ್ರಯೋಗಿಸಲು ಅಸ್ತ್ರವಾಗಿರುವುದು ವಿಪರ್ಯಾಸ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments