Sunday, December 22, 2024

ನಾನಿಲ್ಲದಿದ್ರೆ ಜಮೀರ್ ರೈಟ್.. ರೈಟ್.. ಅಂತ ಹೇಳ್ಕೊಂಡು ಇರಬೇಕಿತ್ತು : ಎಚ್ಡಿಕೆ ವಾಗ್ದಾಳಿ

ಬೆಂಗಳೂರು : ಜೆಡಿಎಸ್ ಪಕ್ಷ ಹಾಗೂ ಮಿಷನ್ 123 ಬಗ್ಗೆ ಲಘುವಾಗಿ ಹೇಳಿಕೆ ಹರಿಬಿಟ್ಟಿರುವ ಮಾಜಿ ಸಚಿವ ಬಿ.ಝಡ್ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿರುವ ಅವರು, ನಾನು ಇಲ್ಲದಿದ್ದರೆ ಶಾಸಕ ಜಮೀರ್ ಅಹಮ್ಮದ್ ಖಾನ್ ರೈಟ್.. ರೈಟ್.. ಅಂತ ಹೇಳಿಕೊಂಡು ಇರಬೇಕಿತ್ತು ಎಂದು ಟಾಂಗ್ ಕೊಟ್ಟಿದ್ದಾರೆ.

ಕುಮಾರಣ್ಣ ದೇವ್ರು ಅಂತಾ ಹೊಗಳಿದ್ರು

ಮಿಷನ್ 123 ರಲ್ಲಿ 1 ತೆಗೆದು ಹಾಕಿ ಎಂದು ಜಮೀರ್ ಖಾನ್ ಹೇಳಿದ್ದಾರೆ. ನಾನೇ  ಇರಲಿಲ್ಲ ಅಂದರೆ ಆ ವ್ಯಕ್ತಿ ಎಲ್ಲಿ ಇರುತ್ತಿದ್ದರು. ನಮ್ಮ ಎದುರೇ ಭಾಷಣ ಮಾಡಿಕೊಂಡು ದೇವೇಗೌಡರು ದೇವರು, ಕುಮಾರಣ್ಣ ದೇವರು ಎಂದು ಹೊಗಳಿದ್ದರು. ಕಾಂಗ್ರೆಸ್ ಪಕ್ಷವನ್ನು ಹೀನಾಮಾನವಾಗಿ ತೆಗಳಿದ್ದರು. ಈಗ ನೋಡಿದರೆ ನಾಲಿಗೆ ಹರಿದುಬಿಡುತ್ತಾರೆ. ಚುನಾವಣೆ ಫಲಿತಾಂಶ ಬರಲಿ ಗೊತ್ತಾಗುತ್ತದೆ ಎಂದು ಎಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಖಾಲಿ ಕುರ್ಚಿಗಳಿಗೆ ಸಿದ್ದರಾಮಯ್ಯ ಭಾಷಣ : ಬಿಜೆಪಿಗರಿಗೆ ಆಹಾರವಾದ್ರ ಸಿದ್ದು..!

ಸುರ್ಜೆವಾಲಗೂ ಸೂಟ್ ಕೇಸ್ ಕಳಿಸ್ಬೇಕು

ಕಾಂಗ್ರೆಸ್ ಸರ್ಕಾರ ಬಂದರೆ ರಂದೀಪ್ ಸುರ್ಜೆವಾಲ ಅವರಿಗೂ ಸೂಟ್ ಕೇಸ್ ಕಳಿಸಬೇಕು. ಅದು ಕಾಂಗ್ರೆಸ್ ಪಕ್ಷದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಸ್ಕೃತಿ. ಅಲ್ಲಿ ರಾಜ್ಯದ ಉಸ್ತುವಾರಿ ನೋಡಿಕೊಳ್ಳುವವರನ್ನು ಚೆನ್ನಾಗಿ ನೋಡಿಕೊಳ್ಳುವ ಪದ್ಧತಿ ಇದೆ ಎಂದು ಕೈ ನಾಯಕರ ವಿರುದ್ಧ ಗುಡುಗಿದ್ದಾರೆ.

ಕಾಂಗ್ರೆಸ್ ಸಂಸ್ಕೃತಿಯೇ ಈಗಿರುವಾಗ 40% ಕಟ್ ಮಾಡಿ ಉಚಿತ ಖಚಿತ ಗ್ಯಾರಂಟಿ ಸ್ಲಿಮ್ ಗಳನ್ನೂ ಹೇಗೆ ಜಾರಿ ಮಾಡುತ್ತೀರಿ ಸುರ್ಜೆ ವಾಲ ಅವರೇ ಎಂದು ನಾನು ಕೇಳಬೇಕಾಗುತ್ತದೆ ಎಂದು ಟಾಂಗ್ ಕೊಟ್ಟಿದ್ದಾರೆ.

 

RELATED ARTICLES

Related Articles

TRENDING ARTICLES