Tuesday, April 16, 2024

ನಿಮ್ಮ ಮೊಬೈಲ್ ಹೆಚ್ಚು ದಿನ ವರ್ಕ್ ಆಗಬೇಕೆಂದ್ರೆ ಹೀಗೆ ಮಾಡಿ..!

ಬೆಂಗಳೂರು : ಮೊಬೈಲ್ ಯಾರಿಗೆ ಬೇಡ, ಯಾರ ಹತ್ತಿರ ಇಂದು ಮೊಬೈಲ್ ಇಲ್ಲ ಹೇಳಿ. ಮೊಬೈಲ್ ಇಲ್ಲದೆ ಇಂದು ಸಮಯ ಕಳೆಯುವುದೇ ಕಷ್ಟ ಎಂಬಂತಾಗಿದೆ. ಆದರೆ, ನಾವು ಬಳಸುತ್ತಿರುವ ಮೊಬೈಲ್ ಹೆಚ್ಚು ದಿನ ಕೆಲಸ ಮಾಡಬೇಕು ಎಂಬ ಬಯಕೆ ಎಲ್ಲರದು.

ಹೌದು, ನಾವು ಹಲವು ಕಂಪನಿಗಳ ಹಾಗೂ ವಿವಿಧ ವಿನ್ಯಾಸದ ಮೊಬೈಲ್ ಫೋನ್ ಗಳನ್ನು ಬಳಸುತ್ತೇವೆ. ಆದರೆ, ಕೆಲವೊಮ್ಮೆ ಮೊಬೈಲ್ ಬೇಗ ತಮ್ಮ ಕೆಲಸ ನಿಲ್ಲಿಸುತ್ತವೆ. ಆಗ ನಾವು ಮೊಬೈಲ್ ಕಂಪನಿಯವರನ್ನು ಹೊಣೆಗಾರರನ್ನಾಗಿಸುತ್ತೇವೆ. ಇದು ಸಾಮಾನ್ಯ. ಅದಕ್ಕೂ ಮುಂಚೆ ನಾವು ಮೊಬೈಲ್ ಫೋನ್ ಗಳನ್ನು ಯಾವ ರೀತಿ ಬಳಸಬೇಕು? ಅದು ಹೆಚ್ಚು ದಿನ ಹೇಗೆ ಕೆಲಸ ಮಾಡುವಂತೆ ಗಮನಹರಿಸಬೇಕು? ಎಂಬುದನ್ನು ತಿಳಿದುಕೊಳ್ಳಬೇಕಿದೆ.

ಚಾರ್ಜ್ ಮಾಡುವಾಗ ಇರಲಿ ಎಚ್ಚರ

ನಾವು ಹಲವು ಬಾರಿ ಮೋಬೈಲ್ ಚಾರ್ಜ್ ಮಾಡುವುದರಿಂದ ನಮ್ಮ ಫೋನ್ ಹಾಳಾಗುತ್ತದೆ. ಹೀಗಾಗಿ, ಚಾರ್ಜ್ ಹಾಕುವಾಗ ಹೆಚ್ಚು ಗಮನಹರಿಸಬೇಕು. ಮೊಬೈಲ್ ಬ್ಯಾಟರಿ ಶೇ.20 ಕ್ಕಿಂತ ಕಡಿಮೆ ಇದ್ದಾಗ ಮಾತ್ರ ಚಾರ್ಜ್ ಮಾಡಬೇಕು. ಮುಖ್ಯವಾಗಿ ಫೋನ್‌ನೊಂದಿಗೆ ಬಂದ ಚಾರ್ಜರ್ ಮಾತ್ರ ಬಳಸಬೇಕು.

ಹೆಚ್ಚು ಸ್ಟೋರೇಜ್ ಅಗತ್ಯವಿಲ್ಲ

ಮೊಬೈಲ್ ನಲ್ಲಿ ಅಗತ್ಯಕ್ಕಿಂತ ಹೆಚ್ಚು ಸ್ಟೋರೇಜ್ ಇಟ್ಟುಕೊಳ್ಳಭಾರದು. ಮೊಬೈಲ್ ವೇಗವಾಗಿ ಕೆಲಸ ಮಾಡಲು ಕ್ರೌಡ್ ಸ್ಟೋರೇಜ್ ಮತ್ತು ಹಾರ್ಡ್ ಡಿಸ್ಕ್ ಬಳಸಬೇಕು. ಹೆಚ್ಚು ಸ್ಟೋರೇಜ್ ಇದ್ದರೆ ಮೊಬೈಲ್ ಕಾರ್ಯಕ್ಷಮತೆ ಕೂಡ ಕಡಿಮೆಯಾಗುತ್ತದೆ. ಇದರಿಂದ ನಿಮ್ಮ ಮೊಬೈಲ್ ಹೆಚ್ಚು ದಿನ ಕೆಲಸ ಮಾಡಲು ಸಾಧ್ಯವಾಗದೆ ಇರಬಹುದು.

ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ

ಮೊಬೈಲ್ ನಲ್ಲಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವಾಗ ಎಚ್ಚರಿಕೆ ವಹಿಸುವುದು ಅನಿವಾರ್ಯ. ವೆರಿಫೈಡ್ ಪ್ಲೇಸ್ಟೋರ್‌ನಿಂದ ಮಾತ್ರ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. APK ಫೈಲ್, ಬ್ಲೂಟೂತ್ ಫೈಲ್‌ಗಳನ್ನು ತೆಗೆದುಕೊಂಡರೆ ವೈರಸ್ ಅಪಾಯವಿರುತ್ತದೆ.

ಇನ್ನೂ, ವಾರದಲ್ಲಿ ಒಮ್ಮೆ ಮೊಬೈಲ್ ಫೋನ್ ಅನ್ನು ರಿಸ್ಟಾರ್ಡ್ ಮಾಡಬೇಕು. ಹೀಗೆ ಮಾಡಿದ್ದಲ್ಲಿ ಮೊಬೈಲ್ ಹ್ಯಾಂಗ್ ಆಗುವುದು ತಪ್ಪಲಿದೆ. ಜೊತೆಗೆ, ನಿಮ್ಮ ಮೊಬೈಲ್ ಹೆಚ್ಚು ದಿನಗಳ ಕಾಲ ಕೆಲಸ ಮಾಡಲು ಸಹಕಾರಿಯಾಗಲಿದೆ.

RELATED ARTICLES

Related Articles

TRENDING ARTICLES