Thursday, March 28, 2024

ಹೋಳಿ ಸಂಭ್ರಮ ಇರಲಿ ಆದರೆ ಎಚ್ಚರವಹಿಸುವುದು ಮರೆಯದಿರಿ

ಬಣ್ಣಗಳ ಹಬ್ಬ ಹೋಳಿ ಹಬ್ಬಕ್ಕೆ ಕೌಂಟ್ಡೌನ್ ಶುರುವಾಗಿದೆ. ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಜಾತಿ ಮತಗಳ ಭೇದವಿಲ್ಲದೆ ಓಕುಳಿಯಾಟದಲ್ಲಿ ಮಿಂದೇಳುತ್ತಾರೆ. ಯಾವುದೇ ಹಬ್ಬವೂ ತನ್ನದೇ ಆದ ಆಚಾರ ಸಂಪ್ರದಾಯಗಳನ್ನು ಹೊಂದಿರುತ್ತದೆ. ಈ ಹಬ್ಬವನ್ನು ವಸಂತ ಮಾಸದಲ್ಲಿ ಆಚರಿಸಲಾಗುತ್ತದೆ. ಚಳಿಗಾಲದ ಕೊನೆಯನ್ನು ವಸಂತದ ಆಗಮನವನ್ನು ಸಾರುವ ಹಬ್ಬವಾಗಿದೆ. ಜನರು ಬಣ್ಣಗಳನ್ನು ಪರಸ್ಪರ ಎರಚಿಕೊಳ್ಳುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ. ಹೀಗೆ ಬಣ್ಣಗಳನ್ನು ಏರಚಿಕೊಂಡು ಆಚರಿಸುವಾಗ ಹೆಚ್ಚಿನ ಗಮನ ಕೊಡಬೇಕು. ಬಣ್ಣಗಳ ಆಯ್ಕೆಯಲ್ಲಿ ಎಚ್ಚರವಹಿಸಬೇಕಾಗುತ್ತದೆ.

ಕೃತಕ ಬಣ್ಣಗಳ ಬಗ್ಗೆ ಎಚ್ಚರ ಇರಲಿ;

  • ಹೋಳಿ ಹಬ್ಬದಲ್ಲಿ ಬಣ್ಣಗಳದ್ದೇ ಕಲರವ. ಬಣ್ಣಗಳ ಪುಡಿ ಎಲ್ಲೆಲ್ಲೂ ಕಂಡುಬರುವು ದರಿಂದ ಅದು ಗಾಳಿಯಲ್ಲಿ ಬೆರೆತು ಉಸಿರಾಟದ ಮೂಲಕ ನಮ್ಮ ದೇಹ ಸೇರುತ್ತದೆ.
  • ಕೃತಕ ಬಣ್ಣಗಳಲ್ಲಿ ಅಂದರೆ ಬಣ್ಣದ ಪುಡಿಗಳಲ್ಲಿ ಹೆಚ್ಚು ರಾಸಾಯನಿಕ ಅಂಶಗಳು ಮತ್ತು ವಿಷಕಾರಿ ಅಂಶಗಳು ಇರುತ್ತವೆ. ಇವುಗಳು ಸಹಅಸ್ತಮಾ ಬರುವಂತೆ ಮಾಡ ಬಹುದಾದ ಸಾಧ್ಯತೆ ಇದೆ.
  • ಹೋಳಿ ಆಚರಣೆ ಸಮಯದಲ್ಲಿ ಮಾಸ್ಕ್ ಹಾಕುವುದನ್ನು ಮರೆಯಬೇಡಿ. ಸಾಧ್ಯವಾದರೆ ಮೂಗು ಹಾಗೂ ಬಾಯಿ ಮುಚ್ಚಿಕೊಳ್ಳುವಂತೆ ಕರ್ಚಿಫ್ ಆದರೂ ಕಟ್ಟಿಕೊಳ್ಳಿ.
  • ಬಣ್ಣದ ಪುಡಿಗಳನ್ನು ಹೆಚ್ಚಾಗಿ ಬಳಸಬೇಡಿ. ಏಕೆಂದರೆ ಇದು ಗಾಳಿಯಲ್ಲಿ ಬೆರೆತು ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ದೀರ್ಘಕಾಲ ಇಂತಹ ಗಾಳಿಯಲ್ಲಿ ಓಡಾಡಿದರೆ ಅದು ಉಸಿರಾಟದ ತೊಂದರೆ ತರುತ್ತದೆ.
    ಹೋಳಿ ಹಬ್ಬ ಆಚರಿಸುವಾಗ ಸಾಧ್ಯವಾದಷ್ಟು ಕೃತಕ ಬಣ್ಣಗಳಿಗೆ ಗುಡ್ ಬೈ ಹೇಳಿ ಹಾಗೂ ನೈಸರ್ಗಿಕ ಬಣ್ಣಗಳನ್ನು ಬಳಸಿ.
  • ಒಂದು ವೇಳೆ ಹೋಳಿ ಹಬ್ಬದ ಸಂದರ್ಭದಲ್ಲಿ ನಿಮ್ಮ ಮಗುವಿಗೆ ಅಸ್ತಮಾ ಸಮಸ್ಯೆ ಕಂಡು ಬಂದರೆ, ಸಾಧ್ಯ ವಾದಷ್ಟು ಎಚ್ಚರದಿಂದಿರಿ.
  • ಬಣ್ಣದ ಪುಡಿಗಳ ಜೊತೆ ನಿಮ್ಮ ಮಗು ಆಟವಾಡಲು ಬಿಡಬೇಡಿ. ಮಗುವಿನ ಸಂತೋಷದ ಜೊತೆಗೆ ಸುರಕ್ಷತೆಯ ಕಡೆಗೂ ಗಮನ ಹರಿಸಿ.
  • ಹೋಳಿರಂಗು, ನೀರು ಹಾಗೂ ಬೆವರು ಸೇರಿ ಚರ್ಮಕ್ಕೆ ಹಾನಿ ಉಂಟು ಮಾಡಬಹುದು. ಆ ಕಾರಣಕ್ಕೆ ಒದ್ದೆ ಬಟ್ಟೆಯಲ್ಲೇ ಸಮಯ ಕಳೆಯಬೇಡಿ. ಹೋಳಿಯಾಡಿದ ತಕ್ಷಣ ಬಟ್ಟೆ ಬದಲಿಸಲು ಮರೆಯಬೇಡಿ.
  • ಹೋಳಿಯಾಡಿ ಬಂದ ತಕ್ಷಣ ತಣ್ಣೀರಿನಲ್ಲಿ ಮೈ ಮೇಲೆ ನೀರು ಸುರಿದುಕೊಂಡು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಬೇಕು. ಇದರಿಂದ ಮೈ ಮೇಲೆ ಅಂಟಿಕೊಂಡಿರುವ ರಾಸಾಯನಿಕ ಅಂಶಗಳನ್ನು ತೊಡೆದು ಹಾಕಬಹುದು, ಬಹಳಷ್ಟು ಹೊತ್ತು ಚರ್ಮದ ಮೇಲೆ ಬಣ್ಣಗಳು ಹಾಗೇ ಅಂಟಿಕೊಡಿರಲು ಬಿಡಬೇಡಿ.

ಲೀನಾಶ್ರೀ ಪೂಜಾರಿ, ಪವರ್​ ಟಿವಿ

RELATED ARTICLES

Related Articles

TRENDING ARTICLES