Friday, March 29, 2024

ಸಾವಿನಲ್ಲೂ ಸಾರ್ಥಕತೆ : ಐದು ಜನರ ಬಾಳಿಗೆ ಬೆಳಕಾದ ಮೈಸೂರಿನ 17 ವರ್ಷದ ಬಾಲಕ

ಬೆಂಗಳೂರು : ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಮೆದುಳು ನಿಷ್ಕ್ರಯಗೊಂಡಿದ್ದ ಬಾಲಕನ ಅಂಗಾಂಗಳನ್ನು ಕುಟುಂಬಸ್ಥರು ದಾನ ಮಾಡುವ ಮೂಲಕ ಐದು ಜನರ ಬಾಳಿಗೆ ಬೆಳಕಾಗಿದ್ದಾರೆ. ಆ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದು ಮೆಚ್ಚಗೆಗೆ ಪಾತ್ರರಾಗಿದ್ದಾರೆ.

ಅರಮನೆನಗರಿ ಮೈಸೂರಿನಲ್ಲಿ ಇಂಥದೊಂದು ಘಟನೆ ನಡೆದಿದೆ. ಮೈಸೂರಿನ ರಾಜಕುಮಾರ್​​ ರಸ್ತೆಯಲ್ಲಿ ಆಕಾಶ (17) ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಆಕಾಶ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮೈಸೂರಿನಲ್ಲಿ ಸಿಟಿ ಸ್ಕ್ಯಾನ್​ ಮಾಡಿದಾಗ ಮೆದುಳಿಗೆ ಗಂಭೀರವಾಗಿ ಪೆಟ್ಟು ಬಿದ್ದುರುವುದಾಗಿ ವೈದ್ಯರು ತಿಳಿಸಿದ್ದರು. ಬಳಿಕ ಆಕಾಶನನ್ನು ಅಪೊಲೋ ಬಿಜಿಎಸ್​ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಪೊಲೋ ಬಿಜಿಎಸ್​ನಲ್ಲಿ ಫೆಬ್ರವರಿ 28 ರಾತ್ರಿ 11.30ರ ಸುಮಾರಿನಲ್ಲಿ ಚಿಕಿತ್ಸೆ ನೀಡುತ್ತಿರುವಾಗಲೇ ಆಕಾಶನ ಮೆದಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಲಿವರ್​, ಕಿಡ್ನಿ, ಹೃದಯ ದಾನ

ಆಕಾಶ ಅಪಘಾತಕ್ಕೂ ಮುನ್ನ ಆರೋಗ್ಯವಾಗಿದ್ದ ಹಿನ್ನೆಲೆ ಹಾಗೂ ಮಾನವ ಅಂಗಾಗ ಕಸಿ ಕಾಯ್ದೆ ಅನುಸಾರ ಆಕಾಶ ಅವರನ್ನು ಎರಡು ಬಾರಿ ಪರಿಶೀಲಿಸಿದ ಬಳಿಕ ಆಕಾಶ ಅಂಗಾಂಗ ಪಡೆದುಕೊಳ್ಳಲು ವೈದ್ಯರು ನಿರ್ಧರಿಸಿದ್ದರು. ಅಂಗಾಂಗ ದಾನದ ಬಗ್ಗೆ ಆಕಾಶ ಕುಟುಂಬಕ್ಕೆ ವೈದ್ಯರು ಮನವರಿಕೆ ಮಾಡಿದ ಬಳಿಕ ದಾನ ಮಾಡಲು ಒಪ್ಪಿಕೊಂಡಿದ್ದಾರೆ. ಬುಧವಾರ ಬೆಳಗಿನ ಜಾವ ಆಕಾಶನ ಲಿವರ್​, ಕಿಡ್ನಿ, ಹೃದಯ ಕವಾಟಗಳು ಮತ್ತು ಕಾರ್ನಿಯಾಗಳನ್ನು ಕುಟುಂಬದವರು ದಾನ ಮಾಡಿದ್ದಾರೆ.

ಆಕಾಶ್ನ ಲಿವರ್​ ಮತ್ತು ಎಡ ಮೂತ್ರಪಿಂಡವನ್ನು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯಲ್ಲಿ ಕಸಿ ಮಾಡಲಾಗಿದೆ. ಬಲ ಮೂತ್ರಪಿಂಡವನ್ನು ಮೈಸೂರಿನ ಕ್ಲಿಯರ್‌ಮೆಡಿ ರೇಡಿಯಂಟ್ ಆಸ್ಪತ್ರೆಯಲ್ಲಿ ಕಸಿ ಮಾಡಲಾಗಿದೆ. ಹೃದಯ ಕವಾಟಗಳನ್ನು ಬೆಂಗಳೂರಿನ ಎನ್‌ಎಚ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಮೈಸೂರಿನ ಕೆಆರ್ ಆಸ್ಪತ್ರೆಗೆ ಕಾರ್ನಿಯಾಗಳನ್ನು ದಾನ ಮಾಡಲಾಗಿದೆ ಎಂದು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES