Monday, December 23, 2024

WPL 2023 : ಹೊಸ ಜೆರ್ಸಿ ಅನಾವರಣಗೊಳಿಸಿದ RCB

ಬೆಂಗಳೂರು : ದೇಶದಲ್ಲಿ ಪುರುಷರ ಐಪಿಎಲ್ ಹಂಗಾಮಕ್ಕೂ ಮೊದಲೇ ಮಹಿಳೆಯರ ಐಪಿಎಲ್ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇದೀಗ, ಆರ್ ಸಿಬಿ ಪ್ರಾಂಚೈಸಿ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ.

ಮಾರ್ಚ್ 4ರಿಂದ ಆರಂಭವಾಗಲಿರುವ ಟೂರ್ನಿಗೆ ಆರ್ ಸಿಬಿ ಭರ್ಜರಿ ತಯಾರಿ ನಡೆಸುತ್ತಿದೆ. ಇತ್ತ, ವುಮೆನ್ಸ್ ಪ್ರೀಮಿಯರ್ ಲೀಗ್ ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾಜ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇನ್ನೂ ಆರ್ ಸಿಬಿ ತಂಡವು ಮಾರ್ಚ್ 5ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ.

ಆರ್ ಸಿಬಿ ಪ್ರಾಂಚೈಸಿಯು ಇದೀಗ ನೂತನ ಜೆರ್ಸಿ ಅನಾವರಣಗೊಳಿಸಿದೆ. ಪುರುಷರ ಜೆರ್ಸಿಯಂತೆಯೇ ಮಹಿಳಾ ತಂಡದ ಆಟಗಾರರ ಜೆರ್ಸಿಯನ್ನು ವಿನ್ಯಾಸಿಗೊಳಿಸಲಾಗಿದೆ. ಈ ಜೆರ್ಸಿಯಲ್ಲಿ ಕೆಂಪು ಹಾಗೂ ಕಪ್ಪು ಬಣ್ಣಗಳಿಂದ ಕೂಡಿದ್ದು, ಅಭಿಮಾನಿಗಳನ್ನು ಆಕರ್ಷಿಸುತ್ತಿದೆ.

ಇದನ್ನೂ ಓದಿ : ಅದ್ಭುತ : ಜಡೇಜಾ 500 ವಿಕೆಟ್.. 5,000 ರನ್

ನ್ಯೂ ಜೆರ್ಸಿಯಲ್ಲಿ ಮಂದಾನ ಮಿಂಚು

ಆರ್ ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂದಾನ ಅವರು ನೂತನ ಜೆರ್ಸಿ ಫೋಟೋ ಶೂಟ್ ನಲ್ಲಿ ಮಿಂಚಿದ್ದಾರೆ. ಜೊತೆಗೆ, ಯುವ ವಿಕೆಟ್ ಕೀಪರ್ ರಿಚಾ ಘೋಷ್, ಬೌಲರ್ ರೇಣುಕಾ ಸಿಂಗ್ ಹಾಗೂ ನ್ಯೂಜಿಲೆಂಡ್ ಆಟಗಾರ್ತಿ ಸೋಫಿ ಡಿವೈನ್ ಕೂಡ ಸ್ಮೃತಿ ಮಂದಾನ ಜೊತೆ ಕಾಣಿಸಿಕೊಂಡಿದ್ದಾರೆ.

ಹೀಗಿದೆ ಆರ್ ಸಿಬಿ ತಂಡ:

ಸ್ಮೃತಿ ಮಂದಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರೇಣುಕಾ ಸಿಂಗ್, ರಿಚಾ ಘೋಷ್, ಇಂದ್ರಾಣಿ ರಾಯ್, ದಿಶಾ ಕಸತ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಭನಾ, ಎರಿನ್ ಬರ್ನ್ಸ್, ಹೀದರ್ ನೈಟ್, ಡೇನ್ ವ್ಯಾನ್ ನಿಕೆರ್ಕ್, ಪ್ರೀತಿ ಬೋಸ್, ಪೂನಂ ಖೆಮ್ನಾರ್, ಕೋಮಲ್ ಝಂಝಾದ್, ಮೇಗನ್ ಶಟ್, ಸಹನಾ ಪವಾರ್

RELATED ARTICLES

Related Articles

TRENDING ARTICLES