ಬೆಂಗಳೂರು : ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಇಂದೋರ್ ಟೆಸ್ಟ್ ನಲ್ಲಿ ತಂಡಕ್ಕೆ ಮರಳಿರುವ ಬೌಲರ್ ಉಮೇಶ್ ಯಾದವ್ ಕಿಂಗ್ ಕೊಹ್ಲಿ ದಾಖಲೆ ಸರಿಗಟ್ಟಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಎರಡು ಸಿಕ್ಸರ್ ಸಿಡಿಸುವ ಮೂಲಕ ಬೌಲರ್ ಉಮೇಶ್ ಯಾದವ್ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಹಾಗೂ ರವಿಶಾಸ್ತ್ರಿ ದಾಖಲೆಯನ್ನು ಮುರಿದ್ದಾರೆ.
ಯುವರಾಜ್ ಸಿಂಗ್ ಹಾಗೂ ರವಿಶಾಸ್ತ್ರಿ ಇಬ್ಬರೂ ಟೆಸ್ಟ್ ನಲ್ಲಿ 22 ಸಿಕ್ಸರ್ ಗಳನ್ನು ಸಿಡಿಸಿದರೆ, ಉಮೇಶ್ ಯಾದವ್ 24 ಸಿಕ್ಸರ್ ಬಾರಿಸುವ ಮೂಲಕ ವಿರಾಟ್ ಕೊಹ್ಲಿ(24 ಸಿಕ್ಸರ್) ಅವರೊಂದಿಗೆ ಸೇರಿಕೊಂಡಿದ್ದಾರೆ.
ಮೊದಲೆರಡು ಸ್ಥಾನದಲ್ಲಿ ಸೆಹ್ವಾಗ್, ಧೋನಿ
ಇನ್ನೂ ಮೊದಲೆರಡು ಸ್ಥಾನದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಮಾಜಿ ಆಟಗಾರ ಸೆಹ್ವಾಗ್ ಇದ್ದಾರೆ. ಸೆಹ್ವಾಗ್ 91 ಸಿಕ್ಸರ್ ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಎಂ.ಎಸ್ ಧೋನಿ 78 ಸಿಕ್ಸರ್ ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಉಳಿದಂತೆ , ಸಚಿನ್ 69 ಹಾಗೂ ಕಪಿಲ್ ದೇವ್ 61 ಸಿಕ್ಸರ್ ಬಾರಿಸುವ ಮೂಲಕ ನಂತರದ ಸ್ಥಾನದಲ್ಲಿದ್ದಾರೆ.
197 ರನ್ ಗೆ ಆಸಿಸ್ ಉಡೀಸ್
ಇಂದೋರ್ ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ನ ಎರಡನೇ ದಿನ ಅತಿಥೇಯ ಆಸ್ಟ್ರೇಲಿಯಾ ತಂಡವು197 ರನ್ ಗೆ ಆಲೌಟ್ ಆಗಿದೆ. ಎರಡನೇ ದಿನವಾದ ಇಂದು ಆಸ್ಟ್ರೇಲಿಯಾ ಬ್ಯಾಟರ್ ಸ್ಮಿತ್ (26), ಹ್ಯಾಂಡ್ಸ್ ಕಂಬ್(19) , ಗ್ರೀನ್ (21), ಕ್ಯಾರಿ (3) ಸ್ಟಾರ್ಕ್ (1), ಮರ್ಫಿ (0) ಭಾರತದ ಬೌಲಿಂಗ್ ದಾಳಿಗೆ ಪೆವಿಲಿಯನ್ ಪೆರೇಡ್ ನಡೆಸಿದರು. ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ 4 ವಿಕೆಟ್, ಉಮೇಶ್ ಯಾದವ್ 3 ವಿಕೆಟ್ ಹಾಗೂ ಆರ್. ಅಶ್ವಿನ್ 3 ವಿಕೆಟ್ ಪಡೆದರು.