ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಮಧ್ಯೆ ಜಟಾಪಟಿ ಹಾಗೂ ಆರೋಪ, ಪ್ರತ್ಯಾರೋಪ ಸಾಮಾನ್ಯವಾಗಿದೆ. ಆದ್ರೆ, ರಾಮನಗರ ವಿಷಯಕ್ಕೆ ಬಂದರೆ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಮಧ್ಯದ ಹೈಡ್ರಾಮಾ ಕೊಂಚ ಭಿನ್ನವಾಗಿಯೇ ಇರುತ್ತದೆ.
ರಾಮನಗರದಲ್ಲಿ ಇಂದು ಜಿಲ್ಲಾ ಆಸ್ಪತ್ರೆ ಉದ್ಘಾಟನೆ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಮಾತಿನ ಸಮರ ನಡೆದಿದೆ. ಬಿಜೆಪಿ ಸಚಿವ ಡಾ. ಅಶ್ವತ್ಥನಾರಾಯಣ ವಿರುದ್ಧ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಫುಲ್ ಗರಂ ಆಗಿದ್ದಾರೆ.
ರಾಮನಗರದಲ್ಲಿ ತಾರಕಕ್ಕೇರಿದ ಕ್ರೆಡಿಟ್ ವಾರ್
ರಾಮನಗರ ಜಿಲ್ಲೆ ಅಭಿವೃದ್ಧಿ ವಿಷಯದಲ್ಲಿ ಕ್ರೆಡಿಟ್ ವಾರ್ ಕಂಟಿನ್ಯೂ ಆಗುತ್ತಿದೆ. ಮೊನ್ನೆ ಮೊನ್ನೆ ತಾನೇ ಸಚಿವ ಅಶ್ವತ್ಥನಾರಾಯಣ ಹಾಗೂ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಮಧ್ಯೆ ಕ್ರೆಡಿಟ್ ವಾರ್ ನಡೆದಿತ್ತು. ಇದೀಗ ಡಿ.ಕೆ ಸುರೇಶ್ ಹಾಗೂ ಅಶ್ವತ್ಥನಾರಾಯಣ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಮಂತ್ರಿಗಳೇ, ನನಗೂ ಪ್ರೊಟೋಕಾಲ್ ಇದೆ
ಜಿಲ್ಲಾ ಆಸ್ಪತ್ರೆ ಉದ್ಘಾಟನೆ ವೇಳೆ ಆಡಳಿತರೂಢ ಬಿಜೆಪಿ ನಾಯಕರು, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ರಾಮನಗರಕ್ಕೆ ಬಂದಿದ್ದರು. ಈ ವೇಳೆ ಸಂಸದ ಡಿ.ಕೆ ಸುರೇಶ್ ಅವರು ಸಮಾರಂಭಕ್ಕೆ ಬಂದ ವೇಳೆ ಸಂಸದ ಡಿ.ಕೆ ಸುರೇಶ್ ಹಾಗೂ ಸಚಿವ ಅಶ್ವತ್ಥನಾರಾಯಣ ಮಧ್ಯೆ ಗಲಾಟೆ ನಡೆದಿದೆ.
ಸಚಿವ ಅಶ್ವತ್ಥನಾರಾಯಣ್ಗೆ ಸಂಸದ ಡಿ.ಕೆ.ಸುರೇಶ್ ತರಾಟೆ ತೆಗೆದುಕೊಂಡಿದ್ದಾರೆ. ಮಂತ್ರಿಗಳೇ ನಿಲ್ರಿ ಇಲ್ಲಿ.. ನನಗೂ ಪ್ರೊಟೋಕಾಲ್ ಇದೆ. ನಾನೊಬ್ಬ ಜನಪ್ರತಿನಿಧಿ ಇದೀನಿ ಅಂತ ಗೊತ್ತಿಲ್ವ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಏನು ನಿರ್ದೇಶನ ಕೊಡಬೇಕು ಅಂತ ಗೊತ್ತಿಲ್ವ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಶ್ವತ್ಥನಾರಾಯಣ, ಈ ಸಂದರ್ಭದಲ್ಲಿ ಗಲಾಟೆ ಬೇಡ. ಮಾತನಾಡೋಣ ಎಂದಿದ್ದಾರೆ. ಇದಕ್ಕೆ ಸಂಸದ ಡಿ.ಕೆ.ಸುರೇಶ್ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.