ಬೆಂಗಳೂರು : ತ್ರಿಪುರಾ, ನಾಗಲ್ಯಾಂಡ್ ಹಾಗೂ ಮೇಘಾಲಯ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಕುತೂಹಲ ಕೆರಳಿಸಿದ್ದು, ತ್ರಿಪುರಾದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.
ಮೂರು ರಾಜ್ಯ ಹಾಗೂ ಅರುಣಾಚಲ ಪ್ರದೇಶದ ಲುಮ್ಲಾ ವಿಧಾನಸಭಾ ಕ್ಷೇತ್ರ, ಜಾರ್ಖಂಡ್ನ ರಾಮಗಢ, ತಮಿಳುನಾಡಿನ ಈರೋಡ್ ಪೂರ್ವ, ಪಶ್ಚಿಮ ಬಂಗಾಳದ ಸಾಗದಿರ್ಘಿ ಹಾಗೂ ಕಸ್ಬಾ ಪೇಠ್, ಮಹಾರಾಷ್ಟ್ರದ ಚಿಂಚ್ ವಾಡ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದೆ.
ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. 60 ಸ್ಥಾನಗಳ ವಿಧಾನಸಭೆಯಲ್ಲಿ ಬಿಜೆಪಿ ಪಕ್ಷ ಪ್ರಸ್ತುತ 35 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆ ಮೂಲಕ ಎದುರಾಳನ್ನು ಅಧಿಕಾರದಿಂದ ದೂರ ಇಟ್ಟಿದ್ದೆ.
ಉಳಿದಂತೆ, ಟಿಎಂಸಿ 11 ಸ್ಥಾನಗಳಲ್ಲಿ, ಕಾಂಗ್ರೆಸ್ ಪಕ್ಷ, ಲೆಫ್ಟ್ ಪಾರ್ಟಿ ಮೈತ್ರಿ 16,ಟಿಎಂಸಿ 10 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ : ಕಾಂಗ್ರೆಸ್-ಬಿಜೆಪಿ ನಾಯಕರ ಹೈಡ್ರಾಮಾ ; ಅಶ್ವತ್ಥನಾರಾಯಣ ಮೇಲೆ ಡಿ.ಕೆ ಸುರೇಶ್ ಫುಲ್ ಗರಂ
ಟಿಎಂಪಿ ಜೊತೆ ಬಿಜೆಪಿ ಮೈತ್ರಿ
ಸದ್ಯದ ಮಾಹಿತಿ ಪ್ರಕಾರ ಬಿಜೆಪಿ ಪಕ್ಷವು ಟಿಎಂಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲಿದೆ ಎಂದು ವರದಿಯಾಗಿದೆ. ಇದು ಖಚಿತವಾಗಿದ್ದೇ ಆದಲ್ಲಿ ಕನಿಷ್ಠ 46 ಸ್ಥಾನಗಳೊಂದಿಗೆ ಮಾಣಿಕ್ ಷಾ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.
ಮೇಘಾಲಯ ಅತಂತ್ರ
ಮೇಘಾಲಯ ರಾಜ್ಯದಲ್ಲಿ ಈ ಬಾರಿ ಅತಂತ್ರ ಫಲಿತಾಂಶ ಬರಲಿದೆ ಎನ್ನಲಾಗಿದೆ. ಎನ್ ಪಿಪಿ ಮೇಘಾಲಯದಲ್ಲಿ ಅತಿಹೆಚ್ಚು ಸ್ಥಾನ ಪಡೆದರೂ ಬಹುಮತ ಪಡೆಯುವುದಿಲ್ಲ. 18ರಿಂದ 20 ಸ್ಥಾನಗಳು ಲಭಿಸಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ 6ರಿಂದ 12 ಸ್ಥಾನ ಗಳಿಸುವ ಸಾಧ್ಯತೆಯಿದೆ ಎಂದು ಚುನಾವಣೋತ್ತರ ಸಮೀಕ್ಷೆಯ ತಿಳಿಸಿದೆ.