Sunday, December 22, 2024

ಮೂವರಿಗೆ ಚಾಕು ಇರಿತ; ಪಿಎಫ್​​ಐ ಸಂಘಟನೆ ಮೇಲೆ ಆರೋಪ

ಗದಗ: ಊಟ ಮುಗಿಸಿ ಹೊರಗೆ ಮಾತನಾಡುತ್ತ ನಿಂತಿದ್ದವರ ಮೇಲೆ ಚಾಕುವಿನಿಂದ ಚುಚ್ಚಿ ಹಲ್ಲೆಗೊಳಿಸಿದ ಘಟನೆ ನಿನ್ನೆ ತಡರಾತ್ರಿ ಗದಗ ನಗರದ ಕಿಲ್ಲಾ ಓಣಿಯಲ್ಲಿ ನಡೆದಿದೆ.

ಬೈಕ್ ನಲ್ಲಿ ಬಂದಿದ್ದ ನಾಲ್ವರಿಂದ ಚಾಕು ಇರಿತವಾಗಿದ್ದು ವಸಂತ ಬಾಕಳೆ, ಗೋಪಾಲ ಖೋಡೆ, ಮಾಧು ಬದಿ ಎನ್ನುವವರೇ ಹಲ್ಲೆಗೊಳಗಾಗಿದ್ದಾರೆ. ಹಲ್ಲೆಕೊರರ ಯಾರು ಎಂದು ಈ ತನಕ ತಿಳಿಯದಾಗಿದ್ದು ಸದ್ಯ ಗಾಯಗೊಂಡವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಏಕಾಏಕಿ ಬಂದು ಅಪರಿಚಿತರು ಚಾಕು ಇರಿದವರನ್ನ ಪಿಎಪ್​ಐ ಸಂಘಟನೆ ಕಾರ್ಯಕರ್ತರು ಅಂತಾ ಆರೋಪಿಸಲಾಗ್ತಾಯಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಪ್ರಕರಣ ಗದಗ ಶಹದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ನಡೆದಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED ARTICLES

Related Articles

TRENDING ARTICLES