Friday, March 29, 2024

ಇಂದಿನಿಂದ ಇ-ರುಪಿ ಸೇವೆ ಆರಂಭ; ಹೇಗೆ ಕಾರ್ಯ ನಿರ್ವಹಿಸುತ್ತದೆ ಗೊತ್ತಾ.?

ನವದೆಹಲಿ: ಹಣಕಾಸು ವಹಿವಾಟು ಕ್ಷೇತ್ರದಲ್ಲಿ ಕ್ರಾಂತಿಗೆ ಮುನ್ನಡಿ ಬರೆಯಲಾಗುವ ಎನ್ನಲಾಗಿರುವ ದೇಶದ ಮೊದಲ ಇ-ರುಪಿ’ಗೆ ಇಂದು ಪ್ರಾಯೋಗಿಕವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಚಾಲನೆ ನೀಡಿದೆ.

ವಿಶ್ವಾದ್ಯಂತ ಜನರು ಕ್ರಿಪ್ಟೋ ಕರೆನ್ಸಿಯತ್ತ ಮುಖ ಮಾಡುತ್ತಿರುವ ಬೆನ್ನಲ್ಲೇ ಭಾರತದಲ್ಲೂ ಆರ್‌ಬಿಐ ಇ-ರುಪಿ ಹೆಸರಲ್ಲಿ ಡಿಜಿಟಲ್‌ ರೂಪಾಯಿಯನ್ನು ಬೆಂಗಳೂರು, ಭುವನೇಶ್ವರ, ನವದೆಹಲಿ, ಮುಂಬೈನಲ್ಲಿ ಪ್ರಾಯೋಗಿಕವಾಗಿ ಆರಂಭ ಮಾಡಲಾಗಿದ್ದು, ಎಸ್‌ಬಿಐ, ಐಸಿಐಸಿಐ ಸೇರಿ ಈ ಡಿಜಿಟಲ್‌ ಯೋಜನೆ ಜಾರಿಗೆ ನಾಲ್ಕು ಬ್ಯಾಂಕ್‌ಗಳಲ್ಲಿ ಇಂದಿನಿಂದ ಲಭ್ಯವಿರಲಿದೆ. ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ವಿವಿಧ ನಗರಗಳಿಗೆ ಇ-ರೂಪಿ ವಿಸ್ತರಣೆ ಮಾಡಲಾಗುತ್ತದೆ.

ಇ-ರೂಪಾಯಿ ಅಥವಾ ಡಿಜಿಟಲ್ ರೂಪಾಯಿ ಎಂದು ಹೇಳಲಾಗುತ್ತದೆ. -ರೂಪಾಯಿ ಅಥವಾ -ರುಪಿ ನಗದುರಹಿತ ಮತ್ತು ಇಂಟರ್‌ನೆಟ್‌ ಸಂಪರ್ಕ ರಹಿತ ಸಾಧನವಾಗಿದೆ. ಇದು ಕ್ಯೂಆರ್ ಕೋಡ್ ಅಥವಾ ಎಸ್‌ಎಂಎಸ್ ಸ್ಟ್ರಿಂಗ್ ಆಧಾರಿತ -ವೋಚರ್ ಆಗಿದ್ದು, ಫಲಾನುಭವಿಗಳ ಮೊಬೈಲ್‌ಗೆ ಕಳುಹಿಸಲಾಗುತ್ತದೆ. ಇದು ಯಾವುದೇ ಮಧ್ಯವರ್ತಿಗಳನ್ನು ಒಳಗೊಳ್ಳದೆ ಸೇವಾ ಪೂರೈಕೆದಾರರಿಗೆ ಸಕಾಲಿಕವಾಗಿ ಪಾವತಿ ಮಾಡುತ್ತದೆ.

ಇ-ರೂಪಿ ಹೀಗಿ ಕಾರ್ಯ ನಿರ್ವಹಿಸುತ್ತದೆ.?

ಇ-ರೂಪಿ ನಗದು ರಹಿತ ಹಾಗೂ ಸಂಪರ್ಕ ರಹಿತ ಡಿಜಿಟಲ್‌ ಪಾವತಿ ವ್ಯವಸ್ಥೆಯಾಗಿದೆ. ಇದು ಇ-ವೋಚರ್‌ ರೂಪದಲ್ಲಿದ್ದು, ಇದನ್ನು ಫಲಾನುಭವಿಗಳ ಮೊಬೈಲ್‌ಗೆ ಎಸ್‌ಎಂಎಸ್‌ ಅಥವಾ ಕ್ಯೂಆರ್‌ ಕೋಡ್‌ ಮಾದರಿಯಲ್ಲಿ ಕಳುಹಿಸಬಹುದು. ಇದು ಪ್ರೀಪೇಯ್ಡ್ ಇ-ಗಿಫ್ಟ್‌ ವೋಚರ್‌ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಹಣದ ವಹಿವಾಟು ವೇಳೆ ಇ-ರೂಪಿಗೆ ಇಂಟರ್‌ನೆಟ್‌ನ ಅಗತ್ಯವಿಲ್ಲ ಎನ್ನಲಾಗಿದೆ.

RELATED ARTICLES

Related Articles

TRENDING ARTICLES