Sunday, January 19, 2025

ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್​ ಹಲ್ಲೆ ಪ್ರಕರಣ​​​ ಬಗ್ಗೆ ಎಸ್​.ಪಿ ಪ್ರತಿಕ್ರಿಯೆ.!

ವಿಜಯಪುರ: ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್​ ಅವರು ‌ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಉಮದಿ ಸೂಪರ್ ಮಾರ್ಕೆಟ್​ನ ಕೆಲಸಗಾರರ ಮೇಲೆ ಹಲ್ಲೆ ಮಾಡಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದ ಹಿನ್ನಲೆ ಈ ಬಗ್ಗೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹೆಚ್.ಡಿ ಆನಂದಕುಮಾರ ಮಾತನಾಡಿದ್ದಾರೆ.

ರಾಜೇಶ್ವರಿ ಗಾಯಕ್ವಾಡ್ ಭಾರತ ಕ್ರಿಕೆಟ್ ತಂಡದ ಮಹಿಳಾ ಆಟಗಾರ್ತಿ ಆಗಿದ್ದಾರೆ. ಅವರು‌‌ ಒಂದು ಮಾಲ್ ನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ ಎಂಬ ವಿಚಾರ ಗಮನಕ್ಕೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಜಿಲ್ಲೆಯ ಯಾವುದೇ ಠಾಣೆಯಲ್ಲಿ ದೂರು ಪ್ರತಿದೂರು ಯಾವುದು ದಾಖಲಾಗಿಲ್ಲ. ಈ ರೀತಿಯ ಸಣ್ಣ ಪುಟ್ಟ ಘಟನೆಗಳು ನಡೆಯುತ್ತಿರುತ್ತವೆ. ಆದರೆ ಇವರು ರಾಷ್ಟ್ರೀಯ ಆಟಗಾರ ಎಂಬ ಕಾರಣಕ್ಕೆ ಸ್ವಲ್ಪ ಸುದ್ದಿಯಾಗಿದೆ ಎಂದರು.

ಅಂತೆಯೇ ಮಾತನಾಡಿದ ಎಸ್​ಪಿ, ಈ ಬಗ್ಗೆ ಒಂದು ವೇಳೆ ದೂರು ದಾಖಲಾದರೆ, ನಮ್ಮ ದೇಶದ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಅವರು ವಿಐಪಿ ಇದ್ರೆ ಏನು ಸಾಮಾನ್ಯ ಜನರಿದ್ದರೆ ಕ್ರಮ ಜರುಗಿಸಲಾಗುವುದು ಎಂದು ಎಸ್ ಪಿ ಆನಂದಕುಮಾರ ಹೇಳಿದರು.

RELATED ARTICLES

Related Articles

TRENDING ARTICLES