Saturday, December 28, 2024

ಮಾವ ಮಾಡಿದ್ದ ಸಾಲಕ್ಕೆ ಅಳಿಯನನ್ನೇ ಕಿಡ್ನಾಪ್‌ ಮಾಡಿದ್ದ ಆರೋಪಿಗಳು

ಬೆಂಗಳೂರು : ಮಾವ ಮಾಡಿದ್ದ ಸಾಲಕ್ಕೆ ಅಳಿಯನನ್ನೇ ಕಿಡ್ನಾಪ್‌ ಮಾಡಿದ್ದ ಘಟನೆ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸ್ವರೂಪ್ ಶೆಟ್ಟಿ ಮತ್ತು ತಂಡದಿಂದ ರಾಜಶೇಖರ ಎಂಬಾತನನ್ನು ಕಿಡ್ನಾಪ್ ಮಾಡಿದ್ದು, ಲಕ್ಷ್ಮಣ್ ರೆಡ್ಡಿ ಮತ್ತು ಸ್ವರೂಪ್ ಶೆಟ್ಟಿ ಮಧ್ಯ ಹಣಕಾಸಿನ ವ್ಯವಹಾರ ನಡೆದಿತ್ತು. ಸ್ವರೂಪ್ ಶೆಟ್ಟಿ ಬಳಿ 5 ಲಕ್ಷ ಹಣ ತೆಗೆದುಕೊಂಡಿದ್ದ ಲಕ್ಷ್ಮಣ್ ರೆಡ್ಡಿ ಆದ್ರೆ 2 ಲಕ್ಷ ವಾಪಸ್ ಕೊಟ್ಟು ಉಳಿದ ಮೂರು ಲಕ್ಷ ಕೊಡದೆ ಸತಾಯಿಸುತ್ತಿದ್ದ. ಹೀಗಾಗಿ ಲಕ್ಷ್ಮಣ್ ರೆಡ್ಡಿ ಅಳಿಯ ರಾಜಶೇಖರ್ ನನ್ನ ಸ್ವರೂಪ್ ಆ್ಯಂಡ್ ಗ್ಯಾಂಗ್ ಕಿಡ್ನಾಪ್ ಮಾಡಿದ್ದಾರೆ.

ಇನ್ನು, ರಾಮಚಂದ್ರಗೆ ಕಾಲ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದು, ಕರೆ ಮಾಡಿಸಿ 50 ಸಾವಿರ ಹಣ ಅಕೌಂಟ್ ಗೆ ಹಾಕಿಸಿಕೊಂಡಿದ್ದರು. ನಂತರ ಮತ್ತೆ 2.5ಲಕ್ಷಕ್ಕೆ ಬೇಡಿಕೆ ಇಟ್ಟಿದ್ರು. ಎರಡನೇ ಬಾರಿ ಆರೋಪಿಗಳೇ ಮಾತನಾಡಿ ಹಣದ ಬೇಡಿಕೆ ಇಟ್ಟರು. ನಿಮ್ಮ ಅಳಿಯನನ್ನ ಕಿಡ್ನಾಪ್ ಮಾಡಿದ್ದೇವೆ 2.5 ಲಕ್ಷ ಹಣ ತಂದು ಕೊಡಿ ಎಂದು ಡಿಮ್ಯಾಂಡ್ ಮಾಡಿದ್ದಾರೆ.

ಸದ್ಯ ಸ್ವರೂಪ್ ಶೆಟ್ಟಿ ಮತ್ತು ಗ್ಯಾಂಗ್ ವಿರುದ್ಧ ದೂರು ನೀಡಿದ್ದು, ಬೊಮ್ಮನಹಳ್ಳಿ ಠಾಣೆಗೆ ಕಿಡ್ನಾಪ್ ಪ್ರಕರಣ ದಾಖಲಿಸಿರುವ ರಾಜಶೇಖರ್ ಮಾವ ರಾಮಚಂದ್ರ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

RELATED ARTICLES

Related Articles

TRENDING ARTICLES