ಬೆಂಗಳೂರು : 224 ಕ್ಷೇತ್ರಗಳನ್ನೂ ಅಕ್ರಮ ಆಗಿದೆ, ಹಿಂದುಳಿದ, ಅಲ್ಪಸಂಖ್ಯಾತರ ಓಟ್ ಡಿಲೀಟ್ ಆಗಿದೆ. ಎಲ್ಲಾ ರಾಜಕಾರಣಿಗಳ ಅಕ್ರಮ ತನಿಖೆಯಿಂದ ಹೊರ ಬರಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಒಂದು ಮನೆಯಲ್ಲಿ 1-2 ಓಟ್ ಬಿಟ್ಟು ಎಲ್ಲಾ ಡಿಲೀಟ್ ಮಾಡಿದ್ದಾರೆ. ನಾವೇನಾದ್ರು ದುರ್ಬಳಕೆ ಮಾಡಿಕೊಂಡಿದ್ರೆ ತನಿಖೆ ಮಾಡಿಸಿ, ಕ್ರಮ ಕೈಗೊಳ್ಳಿ. ಬಿಜೆಪಿಯ ಎಲ್ಲಾ ಶಾಸಕರು, ಸಚಿವರು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಇವರು EVM ಅನ್ನೇ ಹ್ಯಾಕ್ ಮಾಡ್ತಾರೆ. ಫಾರಂ 6,7,8 ಇಲ್ಲದೆ ಮತವನ್ನು ಸೇರಿಸಲು, ತೆಗೆಯಲು ಆಗಲ್ಲ. ಆದ್ರೆ ಇವರು ಎಲ್ಲೋ ಟೇಬಲ್ ಮೇಲೆ ಕುಳಿತು ಕೆಲಸ ಮಾಡಿದ್ದಾರೆ.
ಎಲ್ಲಾ ಕಾನೂನನ್ನು ಉಲ್ಲಂಘನೆ ಮಾಡಿ ಇವರು ಅಕ್ರಮ ಮಾಡಿದ್ದಾರೆ. ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭಯದಿಂದ ಈ ಕೆಲಸ ಮಾಡಿದ್ದಾರೆ. BBMP, ZP, TP ಯಾವುದೇ ಎಲೆಕ್ಷನ್ ಮಾಡಿಲ್ಲ. ಕರ್ನಾಟಕ ರಾಜ್ಯಕ್ಕೆ ಇವರು ಕಳಂಕ ತಂದಿದ್ದಾರೆ. ಇದೆಲ್ಲದರ ತನಿಖೆ ಮಾಡಬೇಕೆಂದು ನಾನು ಆಗ್ರಹಿಸುತ್ತೇನೆ ಎಂದರು.