Monday, December 23, 2024

ವಿದ್ಯಾರ್ಥಿಗಳ ಸಾಮೂಹಿಕ ಕಾಪಿ ಕಳ್ಳಾಟ

ಇದು ಒಂದು ಕಾಲೇಜ್​​​ನ ಕಥೆಯಲ್ಲ. ಇದೊಂದು ದಂಧೆಯಾಗಿ ಬೆಂಗಳೂರಿನ ಹಲವು ಕಡೆ ನಡೆಯುತ್ತಿದೆ. ನಮ್ಮ ಪವರ್​​ ತಂಡ ಹಲವು ಕಾಲೇಜ್​ಗಳ ಮೇಲೆ ದಾಳಿ ನಡೆಸಿ, ಅಕ್ರಮ ಬಯಲಿಗೆಳೆದಿದೆ. ಫರ್ಹಾನ್​, ಅಲ್ ಫರ್ಹಾನ್​​, ಇಂಡಿಯನ್ ಅಕಾಡೆಮಿ ಕಾಲೇಜ್​​​ ಪರೀಕ್ಷಾ ಕೇಂದ್ರದಲ್ಲಿ ನರ್ಸಿಂಗ್ GNM ಮೊದಲ ವರ್ಷದ ಪರೀಕ್ಷೆ ನಡೆಯುತ್ತಿದ್ದು, ಅಲ್ಲೂ ಸಾಮೂಹಿಕ ಕಾಪಿ ನಡೆಯುತ್ತಿತ್ತು. ಪರೀಕ್ಷೆ ನಡೆಯುತ್ತಿದ್ರೂ ಕಾಲೇಜ್ ಸಿಬ್ಬಂದಿ ಗೇಟ್ ಲಾಕ್ ಮಾಡಿಕೊಂಡಿದ್ರು. ಪರೀಕ್ಷಾ ಕೇಂದ್ರ ಪ್ರವೇಶಿಸಿದ ಪವರ್ ತಂಡವನ್ನ ಕಾಲೇಜ್ ಸಿಬ್ಬಂದಿ ತಡೆದಿದೆ.

ಪರೀಕ್ಷಾ ಹಾಲ್​​​​​​​ಗೆ ನಮ್ಮ ತಂಡ ನುಗ್ಗಿದ ನಂತರ ಅಸಲಿ ವಿಷಯ ಹೊರಬಿದ್ದಿದೆ. ಆಶ್ಚರ್ಯ ಅಂದ್ರೆ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಕಾಲೇಜ್ ಹೆಸರೇ ಗೊತ್ತಿರಲಿಲ್ಲ. ಬೇರೆ ಬೇರೆ ರಾಜ್ಯಗಳಿಂದ ಪರೀಕ್ಷೆ ಬರೆಯಲು ಸ್ಟೂಡೆಂಟ್ಸ್​ ಬಂದಿದ್ದು, ಕಾಲೇಜ್​​ ಸಿಬ್ಬಂದಿಗಳೇ ಉತ್ತರಗಳ ಹಾಳೆಯನ್ನು ನೀಡಿದ್ರು. ಫರ್ಹಾನ್ ನರ್ಸಿಂಗ್ ಕಾಲೇಜ್​​ನಲ್ಲಿ ಪರೀಕ್ಷಾ ಮೇಲ್ವಿಚಾರಕಿ ಮೊಬೈಲ್ ಮೂಲಕ ಉತ್ತರ ಹೇಳಿಕೊಡ್ತಿ್ದು, ರೆಡ್​​ ಹ್ಯಾಂಡ್​​ ಆಗಿ SIT ಬಲೆಗೆ ಬಿದ್ದಿದ್ದಾರೆ. ಫರ್ಹಾನ್ ನರ್ಸಿಂಗ್ ಕಾಲೇಜ್​​ನ ಪರೀಕ್ಷಾ ಅಕ್ರಮ ಸಿಸಿಟಿವಿಯಲ್ಲಿ ವಿದ್ಯಾರ್ಥಿಗಳ ಸಾಮೂಹಿಕ ಕಾಪಿ ಕಳ್ಳಾಟ ಪತ್ತೆಯಾಗಿದೆ.

RELATED ARTICLES

Related Articles

TRENDING ARTICLES