Wednesday, January 22, 2025

ಸರ್ಕಾರಿ ಶಾಲಾ ಕಟ್ಟಡಕ್ಕಾಗಿ 60 ಲಕ್ಷ ದೇಣಿಗೆ ಸಂಗ್ರಹ

ಕಲಬುರಗಿ : ಇದು ಸ್ವಾಮೀಜಿಗಳು ಎಲ್ಲರಿಗೂ ಮಾದರಿಯಾದ ಸ್ಟೋರಿ.. ಅಕ್ಷರ ಜೋಳಿಗೆ ಅಭಿಯಾನದಡಿ ಊರೂರು ಸುತ್ತಿ ಜನರಿಂದ ಜೋಳಿಗೆಯಲ್ಲಿ ನೆರವು ಸಂಗ್ರಹಿಸಿ ಶಾಲಾ ಕಟ್ಟಡಕ್ಕೆ ಮುಂದಾದ ಯಶೋಗಾಥೆ..ಕಲಬುರಗಿ ಜಿಲ್ಲೆಯ ಫತ್ತರಗಿ ಗ್ರಾಮದಲ್ಲಿ ಶಿಥಿಲಗೊಂಡಿದ್ದ ಸರ್ಕಾರಿ ಶಾಲಾ ಕಟ್ಟಡದಲ್ಲೇ ಮಕ್ಕಳು ಕಲಿಯುತ್ತಿದ್ದುದನ್ನು ಅರಿತ ಕೊಪ್ಪಳದ ಗವಿ ಮಠದ ಸ್ವಾಮೀಜಿ, ಸೊನ್ನ ವಿರಕ್ತ ಮಠದ ಶ್ರೀ ಶಿವಾನಂದ ಸ್ವಾಮೀಜಿ ಗ್ರಾಮಸ್ಥರ ನೆರವಿನೊಂದಿಗೆ ಜೋಳಿಗೆ ಯಾತ್ರೆ ಕೈಗೊಂಡು ಹಣ ಸಂಗ್ರಹಿಸಿ ನೂತನ ಸರ್ಕಾರಿ ಶಾಲಾ ಕಟ್ಟಡಕ್ಕಾಗಿ ಐದು ಎಕರೆ ಜಮೀನು ಖರೀದಿಸಿದ್ದಾರೆ. ಇದರಲ್ಲಿ ಎರಡೂವರೆ ಎಕರೆ ಶಿಕ್ಷಣ ಇಲಾಖೆಗೆ ಹಾಗೂ ಇನ್ನೆರಡೂವರೆ ಎಕರೆಯನ್ನು ಇತರೆ ಸರ್ಕಾರಿ ಕಚೇರಿಗಳ ಕಟ್ಟಡಕ್ಕಾಗಿ ಸರ್ಕಾರಕ್ಕೆ ಹಸ್ತಾಂತರಿಸಿದ್ದಾರೆ.

ಈಗಿರುವ ಸರ್ಕಾರಿ ಶಾಲೆ ಧಾರ್ಮಿಕ ದತ್ತಿ ಇಲಾಖೆ ಜಾಗದಲ್ಲಿದ್ದು, ನೂತನ ಕಟ್ಟಡ ಕಾಮಗಾರಿಗೆ ಕಾನೂನಿನಲ್ಲಿ ಅವಕಾಶ‌ವಿಲ್ಲ. ಹೀಗಾಗಿ ನೂತನ ಸರ್ಕಾರಿ ಶಾಲೆ ಕಟ್ಟಡಕ್ಕಾಗಿ ಗ್ರಾಮಸ್ಥರೆಲ್ಲರೂ ಸೇರಿ ಜಮೀನು ಖರೀದಿಗೆ ನಿರ್ಣಯ ಮಾಡಿ ಸ್ವಾಮೀಜಿಗಳ ಸಮ್ಮುಖದಲ್ಲಿ ಅಕ್ಷರ ಜೋಳಿಗೆ ಆರಂಭಿಸಿದ್ರು. ಅಕ್ಷರ ಜೋಳಿಗೆ ಮೂಲಕ 60 ಲಕ್ಷಕ್ಕೂ ಅಧಿಕ ದೇಣಿಗೆ ಸಂಗ್ರಹವಾಗಿದೆ.

ಒಟ್ನಲ್ಲಿ ಒಗ್ಗಟ್ಟಿನಲ್ಲಿ ಬಲವಿದೆ ಅನ್ನೋ ಗಾಧೆ ಮಾತಿನಂತೆ ಘತ್ತರಗಿ ಗ್ರಾಮಸ್ಥರು ಒಗ್ಗೂಡಿ ಪರಸ್ಪರ ದೇಣಿಗೆಗೆ ಕೈ ಜೋಡಿಸಿ ಮಕ್ಕಳ ಶೈಕ್ಷಣಿಕ ಭವಿಷ್ಯ ಬೆಳಗಲು ಕೈಗೊಂಡಿರೋ ನಿರ್ಧಾರ ಎಲ್ಲರಿಗೂ ಮಾದರಿ.

ಅನಿಲ್‌ಸ್ವಾಮಿ ಪವರ್ ಟಿವಿ ಕಲಬುರಗಿ

RELATED ARTICLES

Related Articles

TRENDING ARTICLES