Wednesday, January 22, 2025

ಮಧ್ಯ ಕೊಲಂಬಿಯಾದಲ್ಲಿ ವಿಮಾನ ಪತನ; 8 ಸಾವು

ಮಧ್ಯ ಕೊಲಂಬಿಯಾದ ಮೆಡೆಲಿನ್​ ನಗರದ ಸಮೀಪ, ಚೋಕೋದ ಪಶ್ಚಿಮ ವಿಭಾಗಕ್ಕೆ ಪ್ರಯಾಣಿಸುತ್ತಿದ್ದ ಸಣ್ಣ ವಿಮಾನವೊಂದು ಸೋಮವಾರ ಪತನಗೊಂಡಿದೆ. ದುರ್ಘಟನೆಯಲ್ಲಿ 8 ಮಂದಿ ಸಾವನಪ್ಪಿರುವುದಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಒಲಯಾ ಹೆರೆರಾ ವಿಮಾನ ನಿಲ್ದಾಣದಿಂದ ಟೇಕಾಫ್​​ ಆದ ನಂತರ ವಿಮಾನ ನೆಲಕ್ಕಪ್ಪಳಿಸಿತು. ಸಾವನಪ್ಪಿದವರಲ್ಲಿ ಆರು ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿ ಎಂದು ಗುರುತಿಸಲಾಗಿದೆ. ಅಗ್ನಿಶಾಮಕ ದಳ ಮತ್ತು ಇತರ ತುರ್ತು ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

ವಿಮಾನ ಟೇಕಾಫ್​​​ ಸಮಯದಲ್ಲೇ ಇಂಜಿನ್​ ಸಮಸ್ಯೆ ಕಾಣಿಸಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಹಾರಾಟದ ವೇಳೆ ಪೈಲಟ್​​​ ನಿಯಂತ್ರಣಕ್ಕೆ ಸಿಗದೆ ದುರಂತ ಘಟಿಸಿದೆ. ವಿಮಾನ ಬಿದ್ದಿರುವ ಸ್ಥಳದಲ್ಲಿ ಏಳು ಮನೆಗಳು ನಾಶವಾಗಿವೆ. ಆರು ಇತರ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಮೆಡೆಲಿನ್​​​ ಮೇಯರ್​​ ಡೇನಿಯಲ್​​ ಕ್ಚಿಂಟೆರೊ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES