Monday, December 23, 2024

ಟ್ರೈಲರ್​ನಲ್ಲಿ ರಿವೀಲ್ ಆಯ್ತು ‘ವಿಜಯಾನಂದ’ ಸಾಮ್ರಾಜ್ಯ

ಸಿನಿಮಾ ಅನ್ನೋದೇ ಇಂಟರೆಸ್ಟಿಂಗ್. ಅದ್ರಲ್ಲೂ ಬಯೋಪಿಕ್​ಗಳು ಬೆಳ್ಳಿ ಪರದೆ ಬೆಳಗಿದ್ರೆ ಅದ್ರ ಮಜಾನೇ ಬೇರೆ. ಭಾರತೀಯ ಚಿತ್ರರಂಗದಲ್ಲಿ ಸಾಲು ಸಾಲು ಬಯೋಪಿಕ್ ಚಿತ್ರಗಳು ಬಂದು, ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ಇದೀಗ ವಿಜಯಾನಂದ ಸರದಿ. ಇಷ್ಟಕ್ಕೂ ಇಂಡಿಯಾದ ಬಿಗ್ಗೆಸ್ಟ್ ಲಾಜಿಸ್ಟಿಕ್ಸ್​​ಗೆ ನಾಂದಿ ಹಾಡಿದ ಕನ್ನಡಿಗನ ಯಶೋಗಾಥೆ ಏನು..? ವಿಜಯಾನಂದ ಟ್ರೈಲರ್ ಲಾಂಚ್ ಮಾಡಿದ ಸಿಎಂ, ಸುಧಾಕರ್ ಹೇಳಿದ್ದೇನು ಅಂತೀರಾ..? ನೀವೇ ಓದಿ.

  • ಸಿಎಂ, ಸುಧಾಕರ್ ಮೆಚ್ಚಿದ ಕನ್ನಡದ ಬಯೋಪಿಕ್ ಜರ್ನಿ..!

ಹಾಸನದ ಗೊರೂರು ಮೂಲದ ಕ್ಯಾಪ್ಟನ್ ಗೋಪಿನಾಥ್ ಕುರಿತ ಸೂರರೈ ಪೋಟ್ರು ಅನ್ನೋ ಬಯೋಪಿಕ್ ಸಿನಿಮಾ ಮೂಡಿಬಂತು. ನಟ ಸೂರ್ಯ ಮಾಡಿದ ಆ ಸಾಧಕನ ಕುರಿತ ಯಶೋಗಾಥೆ ನಿಜಕ್ಕೂ ನೋಡುಗರಿಂದ ಮೆಚ್ಚುಗೆಗೆ ಪಾತ್ರವಾಯ್ತು. ನ್ಯಾಷನಲ್ ಅವಾರ್ಡ್ಸ್ ಕೂಡ ಬಂದವು. ಇದೀಗ ಮತ್ತೊಬ್ಬ ಕನ್ನಡಿಗನ ಕುರಿತ ಸಿನಿಮಾ ಬೆಳ್ಳಿ ಪರದೆ ಬೆಳಗಲು ಸಜ್ಜಾಗಿದೆ. ಅದೇ ವಿಜಯಾನಂದ.

ಯೆಸ್.. ಇದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿಜಯ್ ಸಂಕೇಶ್ವರ್ ಅವ್ರ ಜೀವನದ ಮಜಲುಗಳ ರೋಚಕ ಕಥೆ ಇರೋ ಸಿನಿಮಾ. ಗದಗ ಮೂಲದ ಇವ್ರು 70ರ ದಶಕದಲ್ಲಿ ಲಾಜಿಸ್ಟಿಕ್ಸ್ ಇಂಡಸ್ಟ್ರಿಗೆ ಕಾಲಿಟ್ಟಾಗ ಅವ್ರಿಗೆ ಎದುರಾದ ಕಷ್ಟಗಳು, ಸಮಸ್ಯೆಗಳು, ಅವಿಗಳನ್ನ ಅವ್ರು ಹೇಗೆ ಎದುರಿಸಿದ್ರು..? ನಂತ್ರ ವಿಆರ್​ಎಲ್ ಅನ್ನೋ ದೇಶದ ಬಹುದೊಡ್ಡ ಲಾಜಿಸ್ಟಿಕ್ಸ್ ಕಂಪೆನಿ ಕಟ್ಟಿದ್ಹೇಗೆ ಅನ್ನೋದ್ರ ವೀರಗಾಥೆ ಈ ವಿಜಯಾನಂದ.

ಜಿವಿ ಅಯ್ಯರ್ ಮೊಮ್ಮಗಳು ರಿಷಿಕಾ ಶರ್ಮಾ ನಿರ್ದೇಶನದ ಈ ಸಿನಿಮಾ ರೆಟ್ರೋ ಸಾಗ ಜೊತೆ ನೋಡುಗರ ಜೀವನೋತ್ಸಾಹ ಹೆಚ್ಚಿಸೋ ಅಂತಹ ಅಂಶಗಳಿಂದ ಥ್ರಿಲ್ ಕೊಡಲಿದೆ. ಸದ್ಯ ಟ್ರೈಲರ್ ಲಾಂಚ್ ಆಗಿದ್ದು, ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಹೀಗೆ ಪ್ಯಾನ್ ಇಂಡಿಯಾ ಸದ್ದು ಮಾಡ್ತಿದೆ.

ಟ್ರಂಕ್ ಸಿನಿಮಾ ಖ್ಯಾತಿಯ ನಿಹಾಲ್ ಸದ್ಯ ವಿಜಯಾನಂದ ಚಿತ್ರದ ಕಥಾನಾಯಕ. ವಿಜಯ್ ಸಂಕೇಶ್ವರ್ ಪಾತ್ರದಲ್ಲಿ ನಿಹಾಲ್ ಪರಕಾಯ ಪ್ರವೇಶ ಮಾಡಿದ್ದು, ಟ್ರೈಲರ್ ನೋಡಿ ಸ್ವತಃ ವಿಜಯ್ ಸಂಕೇಶ್ವರ್ ಅವ್ರೇ ಶಾಕ್ ಆಗಿದ್ದಾರೆ. ಇನ್ನು ಟ್ರೈಲರ್ ಲಾಂಚ್ ಇವೆಂಟ್​ಗೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಸುಧಾಕರ್, ಸಿನಿಮಾ ಹಾಗೂ ಅವ್ರ ಸಾಧನೆಯನ್ನ ಕೊಂಡಾಡಿದ್ರು.

ಬಯೋಪಿಕ್​ ಆದ್ರೂ ಸಿನಿಮಾದಂತೆ ಬಹಳ ಟ್ವಿಸ್ಟ್ಸ್ ಅಂಡ್ ಟರ್ನ್ಸ್​ನಿಂದ ನೋಡುಗರಿಗೆ ಕಿಕ್ ಕೊಡಲಿದೆ ವಿಜಯಾನಂದ. ವಿಜಯ್ ಸಂಕೇಶ್ವರ್ ತಂದೆ ಬಿ.ಜಿ. ಸಂಕೇಶ್ವರ್ ಪಾತ್ರದಲ್ಲಿ ಎವರ್​ಗ್ರೀನ್ ಹೀರೋ ಅನಂತ್​ನಾಗ್, ದಾದಾ ರೋಲ್​ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮಿಂಚಲಿದ್ದಾರೆ. ಇವ್ರ ಪಾತ್ರಗಳು ಚಿತ್ರಕ್ಕೆ ಪ್ಲಸ್ ಆಗಲಿದ್ದು, ನಿಹಾಲ್​ಗೆ ಜೋಡಿಯಾಗಿ ಸಿರಿ ಪ್ರಹ್ಲಾದ್ ಕಾಣಸಿಗಲಿದ್ದಾರೆ.

ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದ್ದು, ಗೋಪಿ ಸುಂದರ್ ಸಂಗೀತ, ಕೀರ್ತನ್ ಪೂಜಾರಿ ಸಿನಿಮಾಟೋಗ್ರಫಿ ಚಿತ್ರದ ಗಮ್ಮತ್ತು ಹೆಚ್ಚಿಸಿವೆ. ಪ್ರಕಾಶ್ ಬೆಳವಾಡಿ, ಶೈನ್ ಶೆಟ್ಟಿ, ರಮೇಶ್ ಭಟ್, ಅರ್ಚನಾ ಕೊಟ್ಟಿಗೆ, ದಯಾಳ್ ಪದ್ಮನಾಭನ್ ಹೀಗೆ ದೊಡ್ಡ ತಾರಾಗಳ ಚಿತ್ರಕ್ಕಿದೆ. ರಿಷಿಕಾ ಶರ್ಮಾ ಹಾಗೂ ನಿಹಾಲ್​ರ ಹಗಲಿರುಳಿನ ತಪಸ್ಸಿನ ಫಲ ಈ ಸಿನಿಮಾ ರೂಪುಗೊಂಡಿದ್ದು, ವಿಆರ್​ಎಲ್ ಗ್ರೂಪ್​ನ ಆನಂದ್ ಸಂಕೆಶ್ವರ್, ಲಾಜಿಸ್ಟಿಕ್ಸ್ ಹಾಗೂ ಮಾಧ್ಯಮಲೋಕದ ಜೊತೆ ಸಿನಿಮಾಲೋಕಕ್ಕೂ ಕಾಲಿಟ್ಟಿದ್ದಾರೆ.

ಒಟ್ಟಾರೆ ಸಾಧಕರ ಕುರಿತ ವಿಜಯಗಾಥೆಗಳು ಹೀಗೆ ಸಿನಿಮಾಗಳ ಮೂಲಕ ದೊಡ್ಡ ಪರದೆಗೆ ಬಂದ್ರೆ, ನೂರಾರು ಮಂದಿಗೆ ಅವರ ಸಾಧನೆಯ ಹಾದಿ ಸ್ಫೂರ್ತಿಯಾಗಲಿದೆ. ಸದ್ಯ ವಿಆರ್​ಎಲ್​ ಛೇರ್ಮನ್​ ದೇಶ ತಿರುಗಿ ನೋಡುವಂತಹ ಮಟ್ಟಕ್ಕೆ ಬೆಳೆಯಲು ಬೆವರಿನ ಜೊತೆ ರಕ್ತ ಹರಿಸಿದ್ದಾರೆ. ಅವಮಾನ, ಅಪಮಾನಗಳನ್ನು ಎದುರಿಸಿದ್ದಾರೆ. ತಾಳ್ಮೆ, ಸಹನೆಯಿಂದ ಇಟ್ಟ ಗುರಿಯತ್ತ ಮುನ್ನುಗ್ಗಿದ ಅವ್ರ ಛಲದ ಪ್ರತೀಕ ಈ ಸಕ್ಸಸ್. ಅದ್ರ ಜರ್ನಿ ಇದೇ ಡಿಸೆಂಬರ್ 9ಕ್ಕೆ ವಿಶ್ವದಾದ್ಯಂತ ಅನಾವರಣಗೊಳ್ಳಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES