ಬೆಂಗಳೂರು : ಇದೇ ವಿಡಿಯೋ..ಪಾಕ್ ಪರ ಘೋಷಣೆ ಕೂಗಿದ ಇದೇ ವಿಡಿಯೋ ಈಗ ದೇಶವಾಸಿಗಳ ಕಣ್ಣು ಕೆಂಪಾಗಿಸಿದೆ.ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಭುಗಿಲೇಳುವಂತೆ ಮಾಡಿದೆ.ಅಂದ್ಹಾಗೆ ಕಾಲೇಜಿನಲ್ಲಿ ಪಾಕ್ ಪರವಾದ ಘೋಷಣೆ ಕೂಗಿ ಇಕ್ಕಟ್ಟಿಗೆ ಸಿಲುಕಿರುವ ವಿದ್ಯಾರ್ಥಿಗಳು ಇವರೇ ನೋಡಿ.ಹೆಸರು ಆರ್ಯನ್,ರಿಯಾ ಮತ್ತು ಮತ್ತೊಬ್ಬ ಕಾನೂನು ಸಂಘರ್ಷಕ್ಕೆ ಒಳಪಟ್ಟ 17 ವರ್ಷದ ಬಾಲಕ
ಆರ್ಯನ್ ಮೊದಲ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾದ್ರೆ, ರಿಯಾ ಮತ್ತು ಮತ್ತೋರ್ವ ಬಾಲಕ ಮೊದಲ ವರ್ಷದ IS ಅಂದ್ರೆ ಇನ್ಫಾರ್ಮೇಶನ್ ಸೈನ್ಸ್ ವಿದ್ಯಾರ್ಥಿಗಳು.ಈ ಮೂವರು ಕೂಡ ಮಾರತ್ತಹಳ್ಳಿ ಸಮೀಪದ ನ್ಯೂ ಹಾರಿಜನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಾರೆ.ಆದ್ರೆ ಅದೇನಾಯ್ತೋ ಏನೋ.ನವಂಬರ್ 25 ಮತ್ತು 26 ರಂದು ನಡೆಯಲಿರುವ ಕಾಲೇಜು ಫೆಸ್ಟ್ ಸಂಬಂಧ ಮಾತುಕತೆ ನಡೆಸುತ್ತಿರುಬೇಕಾದ್ರೆ ಪಾಕ್ ಪರ ಘೋಷಣೆ ಕೂಗಿಬಿಟ್ಟಿದ್ರು.ಇವರ ಘೋಷಣೆ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಆಕ್ರೋಶ ವ್ಯಕ್ತವಾಗ್ತಿದೆ
ಘಟನೆ ಬೆಳಕಿಗೆ ಬರ್ತಿದ್ದಂತೆ ಮೂವರು ವಿದ್ಯಾರ್ಥಿಗಳ ಕಾಲೇಜಿನಿಂದ ಸಸ್ಪೆಂಡ್ ಮಾಡಿದ ಕಾಲೇಜು ಆಡಳಿತ ಮಂಡಳಿ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ತನಿಖೆಗೆ ಇಳಿದ ಎಸಿಪಿ ಕಿಶೋರ್ ಭರಣಿ ಮತ್ತು ಇನ್ಸ್ ಪೆಕ್ಟರ್ ಎಸ್.ಎಲ್.ಆರ್.ರೆಡ್ಡಿ ನೇತೃತ್ವದ ತಂಡ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ.ವಿಚಾರಣೆ ವೇಳೆ ಇದು ಉದ್ದೇಶಪೂರ್ವಕವಾದ ಹೇಳಿಕೆ ಅಲ್ಲಾ.ತಮಾಷೆ ಮಾಡಲು ಹೋಗಿ ಮಾಡಿಕೊಂಡ ಯಡವಟ್ಟು ಅನ್ನೋದು ಗೊತ್ತಾಗಿದೆ.
ಇದಾಗಿಯೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮೊಬೈಲ್ ವಶಕ್ಕೆ ಪಡೆದು ರಿಟ್ರೀವ್ ಗೆ ಕಳುಹಿಸಿದ್ದಾರೆ.ಇವರ ಹಿಂದೆ ಯಾವುದಾದರು ಸಂಘಟನೆ ಇದ್ಯಾ ಅನ್ನೋದನ್ನು ಪತ್ತೆಹಚ್ಚುತ್ತಿದ್ದಾರೆ.ಏನೇ ಹೇಳಿ ದೇಶದ ವಿಚಾರ ಬಂದಾಗ ಅದಕ್ಕೆ ಆದ ಗೌರವ ತೋರಬೇಕು.ಶತ್ರು ರಾಷ್ಟ್ರದ ಪರವಾಗಿ ಜೈಕಾರ ಕೂಗಿ ಈಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ
ಅಶ್ವಥ್ ಎಸ್. ಎನ್.ಕ್ರೈಂ ಬ್ಯೂರೋ ಪವರ್ ಟಿವಿ