Monday, December 23, 2024

ಸಿರಿ ಲಂಬೋದರ ವಿವಾಹಕ್ಕೆ ರಮೇಶ್ ಅರವಿಂದ್ ಸಾಥ್

ಎಸ್​ಎಲ್​ವಿ ಹೋಟೆಲ್ ಹೆಸ್ರು ಕೇಳೇ ಇರ್ತೀರಾ.. ಅದೇ ಟೈಟಲ್​ನಲ್ಲೊಂದು ಸಿನಿಮಾ ಕೂಡ ಬರ್ತಿದೆ. ಆದ್ರೆ ಅದು ಸಿರಿ ಲಂಬೋದರ ವಿವಾಹ. ಅದಕ್ಕೆ ಲೈಫ್ ಗುರು ರಮೇಶ್ ಅರವಿಂದ್ ಸಾಥ್ ನೀಡಿದ್ದು, ಸೃಜನಶೀಲ ಸಿನಿಮೋತ್ಸಾಹಿ ತಂಡಕ್ಕೆ ಬೆನ್ನು ತಟ್ಟಿದ್ದಾರೆ. ಟೀಸರ್ ಹೇಗಿದೆ..? ಟೀಂ ಹೇಳೋದೇನು ಅನ್ನೋದನ್ನ ಅವ್ರ ಬಾಯಿಂದಲೇ ಕೇಳಿ.

  • ರಂಗಭೂಮಿ ಕಲಾವಿದರೇ ಕೂಡಿ ಮಾಡಿರೋ ಪ್ರಯೋಗ
  • ವೇದಿಕೆಯಲ್ಲಿ ಅಪ್ಪ- ಮಗಳು.. ಹಿರಿಯ ನಟ ಹೇಳಿದ್ದೇನು..?
  • ಇದು ಮೊದಲ ಆಮಂತ್ರಣ ಎಂದ ಆ್ಯಕ್ಟರ್ ಕಮ್ ಡೈರೆಕ್ಟರ್

ಇದು ರೀಸೆಂಟ್ ಆಗಿ ರಿಲೀಸ್ ಆದ ಎಸ್​ಎಲ್​ವಿ ಚಿತ್ರದ ಟೀಸರ್ ಝಲಕ್. ಎಸ್​ಎಲ್​ವಿ ಅಂದ್ರೆ ಸಿರಿ ಲಂಬೋದರ ವಿವಾಹ ಎಂದರ್ಥ. ಅಂದಹಾಗೆ ರಮೇಶ್ ಅರವಿಂದ್ ಕೈಯಲ್ಲಿ ಟೀಸರ್ ಲಾಂಚ್ ಮಾಡಿಸೋಕೆ ಹೋದ ಡೈರೆಕ್ಟರ್ ಸೌರಭ್ ಕುಲಕರ್ಣಿ, ಬಹಳ ಕ್ರಿಯೇಟೀವ್ ಆಗಿ ಅವ್ರನ್ನೂ ಸೇರಿದಂತೆ ಟೀಸರ್​ನ ಬ್ಲೆಂಡ್ ಮಾಡಿ ರಿಲೀಸ್ ಮಾಡಿದ್ದಾರೆ.

ಎಲ್ಲಾ ರಂಗಭೂಮಿ ಕಲಾವಿದರೇ ಕೂಡಿ ಮಾಡಿರೋ ಈ ಸಿನಿಮಾದ ಟೀಸರ್ ಸಖತ್ ಇಂಪ್ರೆಸ್ಸೀವ್ ಆಗಿದೆ. ಬಾಲನಟನಾಗಿಯೇ ಕನ್ನಡಿಗರ ಮನಸ್ಸು ಗೆದ್ದಿದ್ದ ಸೌರಭ್ ಕುಲಕರ್ಣಿ, ಈ ಚಿತ್ರದ ಮೂಲಕ ಮೊದಲ ಬಾರಿ ನಿರ್ದೇಶಕನಾಗಿ ಹೊರಹೊಮ್ಮುತ್ತಿದ್ದಾರೆ. ರಮೇಶ್ ಅರವಿಂದ್ ಬರೀ ಟೀಸರ್​ಗಷ್ಟೇ ಸೀಮಿತ. ಚಿತ್ರದ ಪೋಸ್ಟರ್​ನಲ್ಲಿ ಹ್ಯಾಂಡ್ ಕಪ್ಸ್ ಹಾಗೂ ಡಾಲರ್ ಇರೋದ್ರಿಂದ ಅಸಲಿ ಮ್ಯಾಟರ್ ಬೇರೇನೇ ಇದೆ.

ಮಂಡ್ಯ ರಮೇಶ್ ಪುತ್ರಿ ದಿಶಾ ರಮೇಶ್​ ಈ ಚಿತ್ರದ ನಾಯಕನಟಿ. ಈ ಹಿಂದೆ ಬಿ ಸುರೇಶ್​ರ ದೇವರ ನಾಡಲ್ಲಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟಿದ್ದ ಈ ಅಪ್ಪಟ ಕನ್ನಡತಿ, ಬಹಳ ಗ್ಯಾಪ್​ನ ನಂತ್ರ ಇದೀಗ ಎಸ್​ಎಲ್​ವಿಯಿಂದ ಮತ್ತೆ ನೋಡುಗರ ಮುಂದೆ ಬರ್ತಿದ್ದಾರೆ. ಇನ್ನು ಅಂಜನ್ ಭಾರದ್ವಾಜ್ ನಾಯಕನಟನಾಗಿ ಪದಾರ್ಪಣೆ ಮಾಡ್ತಿದ್ದು, ಎಲ್ಲರಿಗೂ ಇದೊಂದು ವಿಶಿಷ್ಟ ಹಾಗೂ ಪ್ರಮುಖ ಸಿನಿಮಾ ಆಗಿದೆ.

ಮಗಳ ಕರಿಯರ್​ನ ಸದಾ ಪೋಷಿಸುತ್ತಾ ಬರ್ತಿರೋ ಹಿರಿಯನಟ ಮಂಡ್ಯ ರಮೇಶ್, ದಿಶಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ರು. ಮಕ್ಕಳೆಲ್ಲಾ ಸೇರಿ ಮಾಡಿರೋ ಈ ಚಿತ್ರಕ್ಕೆ ನಿಮ್ಮ ಸಹಕಾರ ಬೇಕು ಎಂದರು. ಮಗಳು ಕೂಡ ದೊಡ್ಡ ಗ್ಯಾಪ್ ಆಗಿದ್ಯಾಕೆ ಅನ್ನೋದಕ್ಕೆ ಸ್ಪಷ್ಟನೆ ನೀಡಿದ್ರು.

ಹಿರಿಯನಟ ಸುಂದರ್, ಬಾಲರಾಜವಾಡಿ, ರೋಹಿತ್ ನಾಗೇಶ್, ಶಬರಿ ಮಂಜು, ಅಶೋಕ್ ಹೀಗೆ ದೊಡ್ಡ ತಾರಾಗಣದ ಈ ಸಿನಿಮಾ ಎಂಟರ್​ಟೈನ್ಮೆಂಟ್ ಜೊತೆ ಸಸ್ಪೆನ್ಸ್ ಥ್ರಿಲ್ ಕೂಡ ನೀಡಲಿದೆ. ಸೌರಭ್​ರ ಈ ಪ್ರಯೋಗ ಟೀಸರ್​ನಿಂದಲೇ ಎಲ್ಲರ ಗಮನ ಸೆಳೆದಿದ್ದು, ಎನ್ನೆರಡು ತಿಂಗಳಲ್ಲಿ ಪ್ರಚಾರ ಕಾರ್ಯಗಳೊಂದಿಗೆ ಪ್ರೇಕ್ಷಕರನ್ನ ರಂಜಿಸೋಕೆ ಥಿಯೇಟರ್ ಅಂಗಳಕ್ಕೆ ಬರ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ  

RELATED ARTICLES

Related Articles

TRENDING ARTICLES