Saturday, January 18, 2025

ಪಂಚರತ್ನ ಕಾರ್ಯಕ್ರಮ ಯಾವ ಜಾತಿಗೋಸ್ಕರ ಅಲ್ಲ : ಹೆಚ್​.ಡಿ.ದೇವೇಗೌಡ

ಕೋಲಾರ : ಪಂಚರತ್ನ ಕಾರ್ಯಕ್ರಮ ಯಾವ ಜಾತಿಗೋಸ್ಕರ ಅಲ್ಲ, ಎಲ್ಲ ಬಡವರಿಗಾಗಿ ಈ ಪಂಚರತ್ನ ಕಾರ್ಯಕ್ರಮ ಮಾಡಲಾಗಿದೆ, ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.

ನಗರದಲ್ಲಿಂದು ಕಾರ್ಯಕ್ರಮವನ್ನು ಉದ್ಫಾಟಿಸಿ ಮಾತನಾಡಿದ ಅವರು, ಇವತ್ತು ಯಾವುದೇ ಆತಂಕವಿಲ್ಲದೆ ಕಾರ್ಯಕ್ರಮ ನಡೆಯುತ್ತಿದೆ. ಹಿಂದೆ ಮಳೆರಾಯನ ಆತಂಕದಿಂದ ಕಾರ್ಯಕ್ರಮ ನಿಂತು ಹೋಗಿತ್ತು. ಇನ್ಮುಂದೆ ಕುಮಾರಸ್ವಾಮಿ, ಇಬ್ರಾಹಿಂ, ನಿಖಿಲ್ ಕುಮಾರಸ್ವಾಮಿ, ಜಿಟಿ ದೇವೇಗೌಡ ಇದ್ದಾರೆ. ಇನ್ಮುಂದೆ ಕಾರ್ಯಕ್ರಮ ಮುಂದೂಡುವ ಅವಶ್ಯಕತೆ ಇಲ್ಲ ಎಂದರು.

ಇನ್ನು, ಪಂಚರತ್ನ ಕಾರ್ಯಕ್ರಮ ಯಾವ ಜಾತಿಗೋಸ್ಕರ ಅಲ್ಲ, ಜಾತಿ-ಬೇಧ ಇಲ್ಲ, ಎಲ್ಲರಿಗೂ ಈ ಪಂಚರತ್ನ ಕಾರ್ಯಕ್ರಮ, ಎಲ್ಲ ಬಡವರಿಗಾಗಿ ಈ ಪಂಚರತ್ನ ಕಾರ್ಯಕ್ರಮ, ಎಲ್ಲ ಹಳ್ಳಿಹಳ್ಳಿಗೂ ಈ ಕಾರ್ಯಕ್ರಮ, ವಿದ್ಯಾಭ್ಯಾಸ, ಆರೋಗ್ಯ ಹೇಗೆ ಬೇಕೊ ಹಾಗೆ ಪ್ರತಿಯೊಂದನ್ನು ಮನೆ ಮನೆ ಮುಟ್ಟಿಸಲು ಪ್ರಯತ್ನ ಮಾಡುತ್ತೇವೆ. ಮನೆ ಮನೆಗೂ ಪಂಚರತ್ನ ಕಾರ್ಯಕ್ರಮ ತಿಳಿಸಲು ನಿಮಗೆ ಹೇಳಿದ್ದಾರೆ. ಅದರಂತೆ ನೀವು ದಯಮಾಡಿ ಮಾಡಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

RELATED ARTICLES

Related Articles

TRENDING ARTICLES