Wednesday, January 22, 2025

ಹೆಂಡತಿಯ ಅಕ್ಕನನ್ನ ವರಿಸಿದ 75 ರ ವಯಸ್ಸಿನ ಮಾಜಿ ಮೇಯರ್​

ಹುಬ್ಬಳ್ಳಿ; 25 ರಿಂದ 30 ವರ್ಷಕ್ಕೆ ಮದುವೆಯಾಗೋದು ಸಾಮಾನ್ಯ. ಆದ್ರೆ ಇಲ್ಲೊಬ್ಬರು 75 ರ ಇಳಿವಯಸ್ಸಿನಲ್ಲೂ ಮದುವೆಯಾಗಿದ್ದಾರೆ. ಮದುವೆಯಾದರೂ ಸಾಮಾನ್ಯದವರಲ್ಲ. ಮೇಯರ್ ಆಗಿ ಕೆಲಸ ಮಾಡಿದವರು. 75 ರ ಇಳಿ ವಯಸ್ಸಿನಲ್ಲೂ ಹೆಂಡತಿ ಸಹೋದರಿಗೆ ಅಧ್ದೂರಿಯಾಗಿ ಮಾಜಿ ಮೇಯರ್ ತಾಳಿ ಕಟ್ಟಿದ್ದಾರೆ.

ಹುಬ್ಬಳ್ಳಿಯ ಅರವಿಂದ ನಗರ ನಿವಾಸಿಯಾಸ ಡಿ.ಕೆ ಚವ್ಹಾಣ್ ಎಂಬುವರು 75 ನೇ ವರ್ಷದ ಇಳಿ ವಯಸ್ಸಿನಲ್ಲೂ ಮದುವೆಯಾಗಿದ್ದಾರೆ. ಹೌದು.. ಡಿಕೆ ಚವ್ಹಾಣ್ 2018 ರಲ್ಲಿ ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆ ಮೇಯರ್ ಆಗಿದ್ದವರು. ಸತತ ಮೂರು ಬಾರಿ ಚವ್ಹಾಣ್ ಪಾಲಿಕೆ ಸದಸ್ಯರಾಗಿದ್ದಾರೆ. ಇದೀಗ ಚವ್ಹಾಣ್ 75 ರ ಇಳಿ ವಯಸ್ಸಿನಲ್ಲಿ ಮದುವೆಯಾಗಿ ಸುದ್ದಿಯಾಗಿದ್ದಾರೆ.

ಉದ್ಯಮಿಯಾಗಿರೋ ಡಿಕೆ ಚವ್ಹಾಣ್ ನಿನ್ನೆ ಮನೆ ಮುಂದೆ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಅದು ತಮ್ಮ 75 ನೇ ವಯಸ್ಸಿನಲ್ಲಿ ಮದುವೆಯಾಗಿರೋದು ವಿಶೇಷವಾಗಿದೆ. ಡಿಕೆ ಚವ್ಹಾಣ್ ಮೊದಲ ಪತ್ನಿ ಶಾರದಾಬಾಯಿ ಕಳೆದ ಮೂರು ತಿಂಗಳ ಹಿಂದೆ ಆರೋಗ್ಯ ಸಮಸ್ಯೆಯಿಂದ ನಿಧನವಾಗಿದ್ರು‌. ಹೆಂಡತಿ ನಿಧನರಾದ ಬಳಿಕ ಡಿಕೆ ಚವ್ಹಾಣ್ ಗೆ ಕೆಲವೊಂದಿಷ್ಟು ಸಮಸ್ಯೆಗಳಾಗಿವೆ. ಹೀಗಾಗಿ ಕೆಲ ಅಪ್ತರು ಮತ್ತೊಂದು ಮದುವೆ ಯೋಚನೆ ಹೇಳಿದ್ದಾರೆ. ಕೆಲ ದಿನಗಳ ಕಾಲ ಯೋಚನೆ ಮಾಡಿದ ಮಾಜಿ ಮೇಯರ್ ಚವ್ಹಾಣ್ ತನ್ನ ಹೆಂಡತಿಯ ಅಕ್ಕ ಅನಸೂಯ ಅವರನ್ನ ಮದುವೆಯಾಗೋ ನಿರ್ಧಾರ ಮಾಡಿದ್ದಾರೆ. ಈ ವಿಷಯ ಮನೆಯವರಿಗೂ ಹೇಳಿದ್ದಾರೆ, ಮಕ್ಕಳು ಸೊಸೆಯಂದಿರೋ ಒಪ್ಪಿಗೆ ಕೊಟ್ಟ ಬಳಿಕ ಅನಸೂಯಾ ಅವರಿಗೆ ತಿಳಸಿದ್ದು, ಅವರು ಮೊದಲು ಒಪ್ಪಿರಲಿಲ್ಲವಂತೆ, ಕೊನೆಗೆ ಅನಸೂಯಾ ಒಪ್ಪಿಕೊಂಡಿದ್ದು, ನಿನ್ನೆ ಅರವಿಂದ ನಗರದ ಮನೆ ಮುಂದೆ ಡಿಕೆ ಚವ್ಹಾಣ್ ಅನಸೂಯಾ ದಂಪತಿಗಳ ಅಧ್ದೂರಿ ಮದುವೆಯಾಗಿದೆ.

ಡಿಕೆ ಚವ್ಹಾಣ್ 2107-18 ರಲ್ಲಿ ಅವಳಿ ನಗರ ಮೇಯರ್ ಆಗಿ ಕೆಲಸ ಮಾಡಿದವರು, ಸದ್ಯ ಹುಬ್ಬಳ್ಳಿಯಲ್ಲಿ ಬಿಸಿನೆಸ್ ಮಾಡ್ತೀದಾರೆ. ಮಾಜಿ ಮೇಯರ್ ಗೆ ಮೂರು ಮಕ್ಕಳಿದ್ದು, ಅವರ ಒಪ್ಪಿಗೆ ಪಡೆದೇ ಎರಡನೇ ವಿವಾಹ ವಾಗಿದ್ದಾರೆ. ಇದೀಗ ಚವ್ಹಾಣ್ ಅವರೊಂದಿಗೆ ಮದಿವೆಯಾದ ಅನಸೂಯಾ ಅವರಿಗೆ ಇದು ಮೊದಲನೇ ಮದುವೆ, ಇವರು ಕೂಡಾ ಹುಬ್ಬಳ್ಳಿ ನಿವಾಸಿಯಾಗಿದ್ದು, ತನ್ನ ತಂಗಿಯನ್ನ ಡಿಕೆ ಚವ್ಹಾಣ್ ಮದುವೆಯಾಗಿದ್ದರು, ಹೀಗಿರುವಾಗ ಅನಸೂಯಾ ಚವ್ಹಾಣ್ ಮನೆಗೆ ಬರೋದು ಹೋಗೋದು ಮಾಡ್ತಿದ್ರು. ಮೊದಲಿನಂದಲೂ ಪರಿಚಯ ಇದ್ದ ಕಾರಣ ಚವ್ಹಾಣ್ ಅವರೊಂದಿಗೆ ಮದುವೆಯಾಗಿದ್ದೇನೆ ಅನ್ನೋದು ಅನಸೂಯಾ ಮಾತಾಗಿದೆ.

ಅರವಿಂದ ನಗರದಲ್ಲಿರೋ ಚವ್ಹಾಣ್ ಮನೆ ಮುಂದೆ ಅದ್ಧೂರಿಯಾಗಿ ಪೆಂಡಾಲ್ ಹಾಕಿ ಶಾಸ್ತ್ರೋಕ್ತವಾಗಿ ಮದುವೆ ಮಾಡಲಾಗಿದೆ. ಯುವ ಜೋಡಿಗಳ ಮದುವೆ ಮೀರಿಸೋ ಹಾಗೆ ಹಿರಿ ಜೋಡಿಗಳ ಮದುವೆ ಮಾಡಲಾಗಿದೆ. ಹಿರಿ ಜೀವಗಳ ಮದುವೆಗೆ ಸೊಸೆಯಿಂದರೇ ಸಾಕ್ಷಿಯಾಗಿದ್ದಾರೆ. ಅನಸೂಯಾ ಅವರಿಗೆ ಹೊಸ ಕಾಲುಂಗರವನ್ನ ಸೊಸೆಯಿಂದಿರೇ ಹಾಕಿದ್ದು ವಿಶೇಷವಾಗಿದೆ. ನಿನ್ನೆ ಮಧ್ಯಾಹ್ನ ಶುಭ ಮುಹೂರ್ತದಲ್ಲಿ ಮಾಜಿ ಮೇಯರ್ ಡಿಕೆ ಚವ್ಹಾಣ್ ಅನಸೂಯಾ ದಂಪತಿ ಹಾರ ಬದಲಾವಣೆ ಮಾಡಿಕೊಂಡು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ‌. ಈ ಅಪರೂಪದ ಮದುವೆ ಬಗ್ಗೆ ಅನಸೂಯಾ ಹಾಗೂ ಸೊಸೆಯನಂದಿರು ಖುಷಿ ಪಟ್ಟಿದ್ದಾರೆ

ಒಟ್ಟಿನಲ್ಲಿ 75 ನೇ ವಯಸ್ಸಿನಲ್ಲಿ ಮಾಜಿ ಮೇಯರ್ ಮತ್ತೊಂದು ಮದುವೆಯಾಗಿರೋದು ವಿಶೇಷವಾಗಿದೆ.ಪತ್ನಿ ತೀರಿದ ಬಳಿ ಕಷ್ಟ ಸುಖ ಹಂಚಿಕೊಳ್ಳಲು ಯಾರೂ ಇಲ್ಲ ಅನ್ನೋ ಕೊರಗಿತ್ತು,ನನಗೂ ಸಂಗಾತಿ ಬೇಕು ಅನಸಿತ್ತು.ಹೀಗಾಗಿ ನಾನು‌ ಮದುವೆಯಾಗಿದ್ದೇನೆ,ಖುಷಿ ಇದೆ ಅನ್ನೋದು ಮಾಜಿ ಮೇಯರ್ ಮಾತು..

ಮಲ್ಲಿಕ್ ಬೆಳಗಲಿ ಪವರ್ ಟಿವಿ ಹುಬ್ಬಳ್ಳಿ

RELATED ARTICLES

Related Articles

TRENDING ARTICLES