Wednesday, January 22, 2025

ರಮ್ಯಾ ಕನಸು ನನಸು.. UK ನಲ್ಲಿ ಉತ್ತರಕಾಂಡ ಶೂಟಿಂಗ್

ಸ್ಯಾಂಡಲ್​ವುಡ್​ ಬ್ಯುಟಿ ಕ್ವೀನ್​​ ರಮ್ಯಾ ಎಂಟು ವರ್ಷಗಳ ನಂತ್ರ ಚಿತ್ರರಂಗಕ್ಕೆ ಕಂಬ್ಯಾಕ್​ ಆಗಿದ್ದಾರೆ. ಯೆಸ್​​​.. ಅಂತೂ ಪದ್ಮಾವತಿಯ ಫ್ಯಾನ್ಸ್​​​​​ಗೆ ಲಡ್ಡು ಬಂದು ಬಾಯಿಗೆ ಬಿದ್ದಂತಾಗಿದೆ. ಡಾಲಿ ಜೊತೆ UK ಪಿಚ್​ನಲ್ಲಿ ಬ್ಯಾಟಿಂಗ್​ ಮಾಡೋಕೆ ರಮ್ಯಾ ಸಜ್ಜಾಗಿದ್ದಾರೆ. ಜೊತೆಗೆ ರಮ್ಯಾ ಕಂಡ ಕನಸು ಕೂಡ ನನಸಾಗಿದೆ. ಯೆಸ್​​​.. ಮೋಹಕ ತಾರೆಯ ಎಕ್ಸ್​​ಕ್ಲೂಸಿವ್​ ಸ್ಟೋರಿ​​ ಜೊತೆಗೆ ಒಂದಿಷ್ಟು ಸ್ಯಾಂಡಲ್​ವುಡ್​​​ ಅಪ್ಡೇಟ್ಸ್​​ ಕೂಡ ನೋಡ್ಕಂಡು ಬರೋಣ.

  • ಸ್ವಾತಿ ಮುತ್ತಿನ ಮಳೆಯ ವರ್ಷಧಾರೆ.. ಶೂಟಿಂಗ್​ ಪ್ಯಾಕಪ್​​

ಬರಡಾದ ಭೂಮಿಗೆ ಸ್ವಾತಿ ಮಳೆಯ ಸಿಂಚನ ಹರಿಸಿದಂತೆ ರಮ್ಯಾ ಮತ್ತೆ ಸಿನಿ ಇಂಡಸ್ಟ್ರಿಗೆ ಕಾಲಿಟ್ರು. ಸದ್ಯಾ ಆ್ಯಪಲ್​ ಬಾಕ್ಸ್​​ ನಿರ್ಮಾಣ ಸಂಸ್ಥೆಯ ಮೂಲಕ ರಾಜ್​ .ಬಿ ಶೆಟ್ಟಿ ನಿರ್ದೇಶನದಲ್ಲಿ ಸ್ವಾತಿ ಮುತ್ತಿನ ಮಳೆಗೆ ಮುನ್ನುಡಿ ಬರೆದ್ರು. ಕನಸಿನ ದೇವತೆ ಮತ್ತೆ ಬಣ್ಣ ಹಚ್ಬೇಕು ಅನ್ನೋ ಅಬಿಮಾನಿಗಳ ಕನವರಿಕೆಯ ನಡುವೆ, ಗುಡ್​ ನ್ಯೂಸ್​ ಕೂಡ ಕೊಟ್ಟು ದಿಲ್​ ಖುಷ್​ ಮಾಡಿದ್ರು.

ಯೆಸ್​​.. ರಮ್ಯಾ ಡಾಲಿ ಜೊತೆ ಉತ್ತರಾಕಂಡ ಚಿತ್ರದಲ್ಲಿ ನಾಯಕಿಯಾಗಿಯೂ ನಟಿಸ್ತಿದ್ದಾರೆ. ಇದಲ್ಲದೇ ತಮ್ಮದೇ ಬ್ಯಾನರ್​​​ನ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಶೂಟಿಂಗ್​​ ಕಂಪ್ಲೀಟ್​ ಮಾಡಿ ಕುಂಬಳಕಾಯಿ ಕೂಡ ಒಡೆದಿದ್ದಾರೆ. ಅಂತೂ ರಮ್ಯಾ ಸುವರ್ಣಯುಗ ಮತ್ತೆ ರಂಗೇರಿದೆ. ತೆರೆ ಮೇಲೆ ರಮ್ಯ ಚೈತ್ರಕಾಲ ಮರುಕಳಿಸ್ತಿದೆ. ಸ್ವಾತಿ ಮುತ್ತಿನ ಮಳೆ ಹನಿ ಚಿತ್ರದ ಕುರಿತು ಸ್ವತಃ ರಮ್ಯಾ ಟ್ವೀಟ್​ ಮಾಡಿದ್ದು, ಚಿತ್ರತಂಡದ ಫೋಟೋ ಅಟ್ಯಾಚ್​ ಮಾಡಿ ಶೂಟಿಂಗ್​ ಱಪ್​ ಅಪ್​​ ಎಂದು ಬರೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES