Wednesday, October 30, 2024

ಟಿಪ್ಪು ಅನುಯಾಯಿಗಳಿಗೆ ಕಿರುಕುಳ, ಶಿವಾಜಿ ಮಹಾರಾಜರ ಹಿಂಬಾಲಕರಿಗಲ್ಲ.!

ಮೈಸೂರು; ಮೈಸೂರಿನಲ್ಲಿ ಗುಂಬಜ್​ ಮಾದರಿಯ ಬಸ್​ ನಿಲ್ದಾಣ ನಿರ್ಮಾಣಕ್ಕೆ ಶಾಸಕ ರಾಮದಾಸ್ ಕಿರುಕುಳ ಆಗ್ತಾ ಇದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಮೈಸೂರು ಸಂಸದ ಪ್ರತಾಪ ಸಿಂಹ ಅವರು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಗುಂಬಜ್​ ರೀತಿಯಲ್ಲಿ ಬಸ್​ ನಿಲ್ದಾಣ ನಿರ್ಮಾಣದ ವಿಚಾರದಲ್ಲಿ ಟಿಪ್ಪು ಸುಲ್ತಾನ್​ ಅನುಯಾಯಿಗಳಿಗೆ ಕಿರುಕುಳ ಆಗಬೇಕೆ ಹೊರತು ಶಿವಾಜಿ ಮಹಾರಾಜರ ಅನುಯಾಯಿಗಳಿಗಲ್ಲ. ಶಾಸಕ ರಾಮದಾಸ್ ಅವರು 29 ವರ್ಷಗಳ ಹಿಂದೆನೇ ಶಾಸಕರಾದವರು. ಪ್ರಧಾನಿ ನರೇಂದ್ರ ಮೋದಿಜೀ ಅವರಿಂದಲೇ ಮೆಚ್ಚುಗೆ ಪಡೆದುಕೊಂಡವರು. ಅವರಿಗೆ ಕಿರುಕುಳ ಕೊಡುವಷ್ಟು ದೊಡ್ಡವನಲ್ಲ ಎಂದು ಶಾಸಕ ರಾಮದಾಸ್​ ಆರೋಪಕ್ಕೆ ಪ್ರತಾಪ್​ ಸಿಂಹ ಅವರು ತಿರುಗೇಟು ನೀಡಿದರು.

ಮೈಸೂರಿನಲ್ಲಿ ಬಹಳಷ್ಟು ಜನ ರಾಜಕಾರಣಿಗಳು ಯಾರು ಇದ್ದಾರೆ. ಅವರು ಮಾಡಿರುವಂತ ದುಡ್ಡಿನಲ್ಲೇ ನನ್ನ ಸುಟ್ಟಾಕುವಂತ ಶಕ್ತಿ ಅವರಿಗಿದೆ. ಅವರಿಗೆ ಕಿರುಕುಳ ಕೊಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಅವರು ಯಾವ ಕಾರಣಕ್ಕಾಗಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಅದಕ್ಕೆ ಸಮರ್ಥನೆ ಕೊಡಲಿಕ್ಕೆ ಸಾಧ್ಯವಿಲ್ಲ. ಬಹುಶಃ ಅವರನ್ನೇ ಕೇಳಿದರೆ ಉತ್ತರ ಬರಬಹುದು ಎಂದರು.

ಅಂತೆಯೇ ಮಾತನಾಡಿದ ಅವರು, 10 ರಿಂದ 15 ಬಸ್ ನಿಲ್ದಾಣ ಕಟ್ಟಲಿ ಆದರೆ ಮೂಲ ವಿನ್ಯಾಸಕ್ಕನುಗುಣವಾಗಿ ಕಟ್ಟಲಿ ನನ್ನದೇನು ಇದರಲ್ಲಿ ತಕರಾರಿಲ್ಲ. ಇಲ್ಲಿನ ಎಲ್ಲಾ ಅಭಿವೃದ್ಧಿಯ ಹಿಂದೆ ಮಹಾರಾಜರ ಹೆಸರಿದೆ. ಅದು ಮಹಾರಾಜರ ಪರಂಪರೆಗೆ ಪೂರಕವಾಗಿರಬೇಕು. ಗುಂಬಜ್​ಗೂ-ಇಂಡೋ ಸಾರ್ಸನಿಕ್ ಕಲೆಗೂ ತುಂಬ ವ್ಯಾತ್ಯಾಸವಿದೆ ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

RELATED ARTICLES

Related Articles

TRENDING ARTICLES