Thursday, April 25, 2024

ಸುತ್ತೋಲೆಯಲ್ಲಿ ಶಾಲೆಗಳಿಗೆ ನಿರ್ದಿಷ್ಟ ಬಣ್ಣ ಬಳಿಯಲು ಹೇಳಿಲ್ಲ; ಶಿಕ್ಷಣ ಸಚಿವ

ಬೆಂಗಳೂರು: ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸುದ್ದಿಗೋಷ್ಠಿ ನಡೆಸಿ, ಕೇಸರಿ ಬಣ್ಣ ಬಳಿಯಲು 7601 ಕೊಠಡಿಗಳಿಗೆ ಶಂಕುಸ್ಥಾಪನೆ ಆಗಿದೆ ಎಂದರು.

ಅಂತೆಯೇ ಮಾತನಾಡಿದ ಶಿಕ್ಷಣ ಸಚಿವರು,  ಶಾಲೆಗಳಿಗೆ ಕೇಸರಿ ಬಣ್ಣ ಬಳಿಯಲು ಎಲ್ಲಾ ಜಿಪಂ‌ ಸಿಇಓಗಳಿಗೆ ಉಸ್ತುವಾರಿ ಕೊಟ್ಟಿದ್ದೇವೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಶಾಲೆಗಳಿಗೆ ಅನುಕೂಲ ಆಗುವಂತೆ ಪೂರ್ಣಗೊಳಿಸಲು ಹೇಳಿದ್ದೇನೆ. ಸ್ವಾತಂತ್ರ್ಯ ದಿನದಂದು ಪ್ರಕಟಿಸಿದಂತೆ 250 ಶೌಚಾಲಯಗಳ ನಿರ್ಮಾಣಕ್ಕೂ ನಿನ್ನೆ ಸೂಚನೆ ನೀಡಿದ್ದಾರೆ. ಹೈದರಾಬಾದ್ ಕರ್ನಾಟಕಕ್ಕೆ ಇನ್ನೂ 900 ಕೊಠಡಿ ಚಾಲನೆ ನೀಡುತ್ತೇವೆ.

ಈಗಾಗಲೇ ಶಿಕ್ಷಕರ ನೇಮಕಾತಿಗೆ ಸಿಇಟಿ ಪರೀಕ್ಷೆ ಮುಗಿದಿದೆ. ಆದಷ್ಟು ಟ್ರೈನಿಂಗ್ ಬೇಗ ನೀಡಿ ಉಳಿದ ಶಾಲೆಗಳಿಗೆ ಶಿಕ್ಷಕರನ್ನ ನೇಮಕ ಮಾಡುತ್ತೇವೆ. ಮೌಲ್ಯಾಧಾರಿತ ಶಿಕ್ಷಣ ನೀಡಲು ಎರಡು ಕೊರತೆಗಳನ್ನ ನೀಗಿಸಿದ್ದೇವೆ. ಜ್ಞಾನ ಸಂಪಾದನೆ, ಮಾಡಲ್ಸ್ ಗಾಗಿ ವಿವೇಕ ಶಾಲೆಗಳ ಸ್ಥಾಪನೆ. ಕೊಠಡಿ ಸಹಿತ ಒಳ್ಳೆಯ ವಾತವರಣ ನಿರ್ಮಿಸಬೇಕು ಎನ್ನುವ ನಿಟ್ಟಿನಲ್ಲಿ ಹತ್ತು ವರ್ಷಗಳಲ್ಲಿ ಎಲ್ಲಾ ಕೊಠಡಿಗಳನ್ನ ನಿರ್ಮಿಸಲು ಗುರಿ ಇದೆ ಎಂದು ತಮ್ಮ ಸರ್ಕಾರದ ಗುರಿಯನ್ನ ಸಚಿವರು ತಿಳಿಸಿದರು.

2 ಕಿಮೀ ಒಳಗೆ ಒಂದು ಸರ್ಕಾರಿ ಶಾಲೆ ಇರಬೇಕೆಂದು ನಿಯಮ. ಕನಿಷ್ಟ ಇಬ್ಬರು ಶಿಕ್ಷಕರು ಪ್ರತಿ ಶಾಲೆಗೆ ಇರಬೇಕು. ವಿರೋಧ ಮಾಡಲಿಕ್ಕಾಗಿ ಒಂದಷ್ಟು ಜನ ಇದ್ದಾರೆ. ಕಾಂಗ್ರೆಸ್‌ ಅಂತೂ ಶಿಕ್ಷಣ ಕ್ಷೇತ್ರದಲ್ಲಿ ಅನವಶ್ಯಕ ಪಾಲಿಟಿಕ್ಸ್ ಪ್ರಯತ್ನ ಮಾಡುತ್ತಿದೆ. ಮತಗಳಿಗೆ ಪವಿತ್ರವಾದ ಶಿಕ್ಷಣ ಕ್ಷೇತ್ರದಲ್ಲೂ ರಾಜಕೀಯ ಮಾಡಲು ಮುಂದಾಗಿದೆ. ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ‌ನ ಹಿರಿಯ ನಾಯಕ ಆಡಿದ ಮಾತು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ವಿವಾದ ಸೃಷ್ಟಿ ಆಗ್ತಿದೆ ಎಂದು ಶಿಕ್ಷಣ ಸಚಿವರು ಮಾತಿನಲ್ಲಿ ಕಾಂಗ್ರೆಸ್​ಗೆ ತಿವಿದರು.

ಇನ್ನು ರಾಜ್ಯ ಸರ್ಕಾರದ ಸುತ್ತೋಲೆಯಲ್ಲಿ ಕೇಸರಿ ಬಣ್ಣ ಬಳಿಯಿರಿ ಅಂತ ಹೇಳಿಲ್ಲ. ಅಲ್ಲಿಯ ವಾತವರಣಕ್ಕೆ ತಕ್ಕಂತೆ ಕೊಠಡಿ ನಿರ್ಮಿಸಿ ವಿವೇಕ ಹೆಸರಿಡಿ ಅಂತ ಹೇಳಿದ್ದೇವೆ. ಒಂದು ವೇಳೆ ಶಿಕ್ಷಣ ಕ್ಷೇತ್ರಕ್ಕೂ ಕೇಸರಿ ಬಣ್ಣಕ್ಕೂ ಹತ್ತಿರ ಇದೆ. ಕೇಸರಿ ಬಣ್ಣ ಬಳಿದರೆ ಮಾನಸಿಕ ವಿಕಾಸ ಎಂದು ಎಕ್ಸ್‌ಪರ್ಟ್‌ಗಳು ವರದಿ ನೀಡಿದರೆ ನಾವು ಹಿಂದೇಟು ಹಾಕಲ್ಲ. ರಾಜಕೀಯ ಉದ್ದೇಶಕ್ಕಾಗಿ, ಒಂದು ಧರ್ಮದ ಓಟಿಗಾಗಿ ಈ ರೀತಿಯ ವಿರೋಧ ಸರಿಯಲ್ಲ. ಖಾಸಗಿ ಶಾಲೆಗಳಲ್ಲಿ ಕೇಸರಿ ಬಣ್ಣ, ವಿವೇಕ ಬಣ್ಣ ಬಳಿಯೋದು ಅವರವರ ವಿವೇಚನೆಗೆ ಬಿಟ್ಟಿದ್ದು, ಈಗಾಗಲೇ ವಿವೇಕಾನಂದರ ಭಾವಚಿತ್ರ ಕೆಲ ಶಾಲೆಗಳಲ್ಲಿ‌ ಇದೆ ಎಂದರು.

RELATED ARTICLES

Related Articles

TRENDING ARTICLES