Thursday, December 19, 2024

ಕೆಕೆಆರ್ ತಂಡ​ ಸೇರಿದ ವೇಗಿ ಶಾರ್ದೂಲ್​ ಠಾಕೂರ್​.!​

ನವದೆಹಲಿ: ದೇಶದ ಬಹುನಿರೀಕ್ಷಿತ ಐಪಿಎಲ್​(ಇಂಡಿಯನ್​ ಪ್ರಿಮಿಯರ್​ ಲೀಗ್​) ಲೀಗ್​ ಇನ್ನೇನು ಕೆಲವೇ ತಿಂಗಳು ಬಾಕಿ ಇದೆ. ಈಗಿರೋವಾಗ ಹಲವು ತಂಡಗಳು ಕೈ ಬಿಟ್ಟ ಆಟಗಾರರನ್ನ ಕೆಲವೊಂದು ತಂಡಗಳು ಆಟಗಾರರನ್ನ ಖರೀದಿ ಮಾಡುತ್ತಿದೆ.

ಅದರಂತೆ ದೆಹಲಿ ಕ್ಯಾಪಿಟಲ್ಸ್ ತಂಡದ ವೇಗದ ಬೌಲರ್​ ಶಾರ್ದೂಲ್ ಠಾಕೂರ್ ಅವ್ರನ್ನ ಟ್ರೇಡಿಂಗ್ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ಖರೀದಿ ಮಾಡಿದ್ದು, ಮುಂದಿನ ಐಪಿಎಲ್​ನಲ್ಲಿ ಆಲ್ರೌಂಡರ್​ ಶಾರ್ದೂಲ್​ ಕೋಲ್ಕತ್ತಾ ಪರ ಆಡಲಿದ್ದಾರೆ.

ಶಾರ್ದೂಲ್ ನ. 18 ರಿಂದ ನ್ಯೂಜಿಲೆಂಡ್‌ ವಿರುದ್ಧ ನಡೆಯಲಿರುವ ಏಕದಿನ ಸರಣಿಗಾಗಿ ಭಾರತದ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಅವರನ್ನು ದೆಹಲಿ ಕ್ಯಾಪಿಟಲ್ಸ್ 10.75 ಕೋಟಿ ರೂ ನೀಡಿ ಖರೀದಿ ಮಾಡಿತ್ತು. ಟ್ರೆಂಡಿಂಗ್ ವಿಂಡೋ ಮೂಲಕ ಶಾರ್ದೂಲ್ ಖರೀದಿಗೆ ಕೋಲ್ಕತ್ತಾ, ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ಕೂಡ ಪ್ರಯತ್ನಿಸಿದವು. ಆದರೆ ಅಂತಿಮವಾಗಿ ಶಾರ್ದೂಲ್ ಕೆಕೆಆರ್ ತಂಡ ಸೇರಿದ್ದಾರೆ.

ಐಪಿಎಲ್ 2023 ರ ಟ್ರೇಡಿಂಗ್ ವಿಂಡೋ ಮಂಗಳವಾರ ಮುಚ್ಚಲಿದೆ. ಹೀಗಾಗಿ ಎಲ್ಲಾ ತಂಡಗಳು ತಮಗೆ ಬೇಕಾದ ಹಾಗೂ ಬೇಡದ ಆಟಗಾರರ ಪಟ್ಟಿಯನ್ನು ಸಿದ್ದಪಡಿಸಿಕೊಳ್ಳುತ್ತಿವೆ.

RELATED ARTICLES

Related Articles

TRENDING ARTICLES