Wednesday, January 22, 2025

ಪ್ರಭಾಸ್ ನಟನೆಯ ‘ವರ್ಷಂ’ ರೀ-ರಿಲೀಸ್

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ನಟನೆಯ ವರ್ಷಂ ಸಿನಿಮಾ ರೀ ರಿಲೀಸ್ ಆಗಿದೆ.

ಬರೋಬ್ಬರಿ 18 ವರ್ಷದ ಹಿಂದೆ ತೆರೆಗೆ ಬಂದಿದ್ದ ಈ ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡಲಾಗಿದೆ. ಮತ್ತೆ ತೆರೆ ಮೇಲೆ ತ್ರಿಷಾ ಮತ್ತು ಪ್ರಭಾಸ್ ನೋಡಿ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ. ಅನೇಕ ವರ್ಷಗಳ ಬಳಿಕ ರೀ ರಿಲೀಸ್ ಆದರೂ ಅಭಿಮಾನಿಗಳ ತೋರಿಸಿದ ಪ್ರೀತಿಗೆ ತ್ರಿಷಾ ಫುಲ್ ಖುಷ್ ಆಗಿದ್ದಾರೆ. ವಿಶೇಷ ಸಿನಿಮಾವನ್ನು ಅಭಿಮಾನಿಗಳ ಒತ್ತಾದ ಮೇರೆಗೆ ಮತ್ತೆ ರಿಲೀಸ್ ಮಾಡಲಾಗಿದೆ.

ಇನ್ನು, 18 ವರ್ಷಗಳ ಬಳಿಕ ಬಂದ ಈ ಸಿನಿಮಾಗೆ ಅಭಿಮಾನಿಗಳಿಂದ ಸಿಕ್ಕಿದ ಭರ್ಜರಿ ಪ್ರತಿಕ್ರಿಯೆಗೆ ಸಿನಿಮಾತಂಡ ಫುಲ್ ಖುಷ್ ಆಗಿದೆ. ಅಭಿಮಾನಿಗಳ ಪ್ರೀತಿಗೆ ನಟಿ ತ್ರಿಷಾ ಫುಲ್ ಖುಷ್ ಆಗಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES