Friday, December 27, 2024

ಗ್ರೌಂಡ್ ರಿಪೋರ್ಟ್ ಕಲೆ ಹಾಕಲು ಫೀಲ್ಡಿಗಿಳಿದ ಮಾಜಿ ಸಿಎಂ ಸಿದ್ದು..!

ಕೋಲಾರ: ಕೋಲಾರಕ್ಕೆ ತೆರಳುವ ಮುನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.ಎಲ್ಲರು ಒಟ್ಟಾಗಿ ಹೋಗಬೇಕು, ಅದಕ್ಕಾಗಿ ಬಸ್ಸಿನಲ್ಲಿ ಹೋಗ್ತಿದ್ದೇವೆ. ಕೋಲಾರದವರು ನನ್ನನ್ನು ಕರೆಯುತ್ತಿದ್ದಾರೆ. ಅಲ್ಲಿ ಶ್ರೀನಿವಾಸ್ ಗೌಡ ನಿಲ್ಲಲ್ಲ, ಅದಕ್ಕೆ ನೀವು ನಿಲ್ಲಿ ಅಂತಿದ್ದಾರೆ. ಅನೇಕ ಕಡೆಗಳಲ್ಲೂ ಕರೀತಿದ್ದಾರೆ.

ಅದಕ್ಕಾಗಿ ಅಲ್ಲಿ ಪರಿಶೀಲನೆ ಮಾಡಲು ಕೋಲಾರಕ್ಕೆ ಹೋಗ್ತಿದ್ದೇನೆ. ಅಂತಿಮವಾಗಿ ಹೈಕಮಾಂಡ್ ಯಾವ ತೀರ್ಮಾನ ಮಾಡುತ್ತದೋ ಅಲ್ಲಿ ಸ್ಪರ್ಧೆ ಮಾಡುತ್ತೇನೆ. ಬಾದಾಮಿ, ವರುಣಾ, ಚಾಮರಾಜಪೇಟೆಯಲ್ಲೂ ಸ್ಪರ್ಧೆಗೆ ಒತ್ತಡ ಇದೆ. ಆದರೆ ಕೋಲಾರದಲ್ಲಿ ಜಾಸ್ತಿ ಒತ್ತಡ ಇದೆ. ಅದಕ್ಕಾಗಿ ನಾನು ಇಂದು ಅಲ್ಲಿಗೆ ಹೋಗ್ತಿದ್ದೇನೆ.ಇಂದು ಅಲ್ಲಿನ ಸ್ಥಳೀಯ ನಾಯಕರ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಮಾಡುತ್ತೀನಿ.

ಇನ್ನು ಸಿದ್ದರಾಮಯ್ಯ ಪ್ರವಾಸಕ್ಕಾಗಿ ಐಷರಾಮಿ ಬಸ್ ಸಿದ್ದವಾಗಿದ್ದು, ಐಷರಾಮಿ ಬಸ್ ನಲ್ಲಿ ಕೋಲಾರಕ್ಕೆ ತೆರಳಿದ ಸಿದ್ದರಾಮಯ್ಯ.
ಸರ್ಕಾರಿ ನಿವಾಸದಿಂದ ಕೋಲಾರಕ್ಕೆ ತೆರಳಿದ ಸಿದ್ದರಾಮಯ್ಯ.ಇಡೀ ದಿನ ಕೋಲಾರದಲ್ಲಿ ಸಿದ್ದರಾಮಯ್ಯ ರೌಂಡ್ಸ್ ಮಾಡಲಿದ್ದು, ಕೋಲಾರ ಕ್ಷೇತ್ರ ಪರ್ಯಟನೆಯಲ್ಲಿ ಬ್ಯುಸಿಯಾದ ಸಿದ್ದರಾಮಯ್ಯ. 14 ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಸಿದ್ದು.

ಮಸೀದಿ, ಚರ್ಚ್, ಟೆಂಪಲ್ ರನ್ ನಡೆಸಲಿರುವ ಸಿದ್ದರಾಮಯ್ಯ, ಸಂಜೆ ಸ್ಥಳೀಯ ಮುಖಂಡರು, ಸಂಘ ಸಂಸ್ಥೆಗಳೊಂದಿಗೆ ಸಭೆ
ಗ್ರೌಂಡ್ ರಿಪೋರ್ಟ್ ಕಲೆ ಹಾಕಲು ಫೀಲ್ಡಿಗಿಳಿದ ಸಿದ್ದರಾಮಯ್ಯ.

RELATED ARTICLES

Related Articles

TRENDING ARTICLES