Wednesday, January 22, 2025

ನ. 20ಕ್ಕೆ ಹಸಮಣೆ ಏರಲಿರುವ ನಾಗ ಶೌರ್ಯ

ತೆಲುಗಿನ ಪ್ರಸಿದ್ದ ನಟ ನಾಗ ಶೌರ್ಯ ಅವರು ಬೆಂಗಳೂರು ಮೂಲದ ಹುಡುಗಿ ಜತೆ ಸಪ್ತಪದಿ ತುಳಿಯಲಿದ್ದಾರೆ. ʻಚಲೋʼ ಸಿನಿಮಾ ಮೂಲಕ ಮೊದಲ ಬಾರಿಗೆ ತೆಲುಗು ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದ ರಶ್ಮಿಕಾ ಜೊತೆಗೆ ನಾಯಕ ನಟನಾಗಿ ನಾಗ ಶೌರ್ಯ ಅಭಿನಯಿಸಿದ್ದರು.

ಇದೀಗ ನಟ ನಾಗ ಶೌರ್ಯ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಬೆಂಗಳೂರು ಮೂಲದ ಅನುಷಾ ಶೆಟ್ಟಿ ಜತೆ ಸಪ್ತಪದಿ ತುಳಿಯಲಿದ್ದು, ಸದ್ಯ ಆಮಂತ್ರಣ ಪತ್ರಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಇತ್ತೀಚೆಗಷ್ಟೆ ಬಿಡುಗಡೆಗೊಂಡ ನಾಗ ಶೌರ್ಯ ನಟನೆಯ ‘ಕೃಷ್ಣ ವೃಂದ ವಿಹಾರಿ’ ಯಶಸ್ವಿ ಪ್ರದರ್ಶನ ಕಂಡಿತ್ತು.

2018ರಲ್ಲಿ ʻಚಲೋʼ ಸಿನಿಮಾ ಮೂಲಕ ನಾಗ ಶೌರ್ಯ ಹೆಸರು ಗಳಿಸಿದ್ದರು. ಇದೀಗ ನಟ ಮದುವೆ ಇನ್ವಿಟೇಶನ್‌ ಕಾರ್ಡ್‌ಅನ್ನು ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದು, ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಕರ್ನಾಟಕ ಮೂಲದ ಇಂಟೀರಿಯರ್‌ ಡಿಸೈನರ್ ಆಗಿ ಕೆಲಸ ಮಾಡುತ್ತಿರುವ ಅನುಷಾ ಶೆಟ್ಟಿ ಜತೆ ನಾಗಶೌರ್ಯ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇನ್ನೂ ವಿಶೇಷ ಅಂದರೆ ನವೆಂಬರ್ 20ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಮದುವೆ ನಡೆಯಲಿದೆ.

RELATED ARTICLES

Related Articles

TRENDING ARTICLES