Friday, November 22, 2024

`ನನ್ನ ಹೇಳಿಕೆಯಿಂದ ನೋವಾಗಿದ್ರೆ ವಿಷಾದಿಸುತ್ತೇನೆ : ಸತೀಶ್‌ ಜಾರಕಿಹೊಳಿ

ಹಿಂದೂ ಪದಕ್ಕೆ ಹೊಸ ವ್ಯಾಖ್ಯಾನ ಕೊಟ್ಟು. ಅದು ಅಶ್ಲೀಲ ಪದ ಅಂತ ನಾಲಿಗೆ ಹರಿಬಿಟ್ಟಿದ್ದ ಕಾಂಗ್ರೆಸ್‌ ನಾಯಕ ಸತೀಶ್‌ ಜಾರಕಿಹೊಳಿ ಇದೀಗ ಉಲ್ಟಾ ಹೊಡೆದಿದ್ದಾರೆ. ನನ್ನ ಹೇಳಿಕೆಗೆ ನಾನು ಬದ್ದ. ಬೇಕಾದ್ರೆ, ಚರ್ಚೆಗೆ ಬನ್ನಿ. ಸಾಬೀತು ಪಡಿಸ್ತೀನಿ ಅಂತ ಸಮರ್ಥನೆಗಿಳಿದಿದ್ದ ಸತೀಶ್‌ ಜಾರಕಿಹೊಳಿಗೆ ಇದೀಗ ಯಾರ ಮನಸ್ಸಿಗಾದ್ರೂ ನೋವಾಗಿದ್ರೆ ವಿಷಾದಿಸುತ್ತೇನೆ ಅಂದಿದ್ದಾರೆ.

ಇದು ಭಾರತವಷ್ಟೇ ಅಲ್ಲ, ವಿದೇಶದಲ್ಲೂ ಚರ್ಚೆಯಾಗ್ತಿದೆ ಅಂತ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ರು. ಸತೀಶ್‌ ಜಾರಕಿಹೊಳಿ ಜನರ ಕ್ಷಮೆ ಕೇಳ್ಬೇಕು ಅಂತ ಒತ್ತಾಯಿಸಿದ್ರು. ಅಷ್ಟೇ ಅಲ್ಲ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಭರ್ಜರಿ ಪ್ರತಿಭಟನೆ ಮಾಡುವ ಮೂಲಕ ಬಿಸಿ ಮುಟ್ಟಿಸಿದ್ರು.

ವಿಶೇಷ ಅಂದ್ರೆ, ಕೇವಲ ಬಿಜೆಪಿ ನಾಯಕರು ಅಷ್ಟೇ ಅಲ್ಲ, ಸ್ವತಃ ಕಾಂಗ್ರೆಸ್‌ ನಾಯಕರಾದ ಡಿ.ಕೆ.ಶಿವಕುಮಾರ್‌, ಸುರ್ಜೇವಾಲಾ ಹೀಗೆ ಎಲ್ಲಾ ಕಾಂಗ್ರೆಸ್‌ ನಾಯಕರೇ ಇದು ತಪ್ಪು ಅಂತ ಹೇಳಿದ್ರೂ ಕೂಡ ಸಮರ್ಥನೆ ಮಾಡಿಕೊಂಡಿದ್ದ ಸತೀಶ್‌ ಜಾರಕಿಹೊಳಿ ದಿಢೀರ್‌ ಅಂತ ವಿಷಾದಿಸುತ್ತೇನೆ ಎಂದಿದ್ಯಾಕೆ ಅನ್ನೋ ಪ್ರಶ್ನೆ ಮೂಡಿದೆ.

ಸ್ವತಃ ಕೆಪಿಸಿಸಿ ಅಧ್ಯಕ್ಷರೇ ತಪ್ಪು ಅಂದ್ರೂ ತಲೆಕೆಡಿಸಿಕೊಳ್ಳದ ಸತೀಶ್‌ ಜಾರಕಿಹೊಳಿಗೆ ಹೈಕಮಾಂಡ್‌ ಸರಿಯಾಗಿಯೇ ಬಿಸಿ ಮುಟ್ಟಿಸಿದಂತಿದೆ. ಒಂದ್ಕಡೆ, ದೇಶಾದ್ಯಂತ ರಾಹುಲ್‌ ಗಾಂಧಿ ಜನಾಭಿಪ್ರಾಯ ಮೂಡಿಸೋಕೆ ಭಾರತ್‌ ಜೋಡೋ ಯಾತ್ರೆ ಮಾಡಿಕೊಂಡು ಹೋಗ್ತಿದ್ರೆ, ಕರ್ನಾಟಕದಲ್ಲಿ ಕೈ ನಾಯಕನಿಂದ ಡ್ಯಾಮೇಜ್‌ ಆಗ್ತಿದೆ ಅನ್ನೋ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ.

ಆದ್ರೆ, ಅಷ್ಟಕ್ಕೆ ನಿಂತಿಲ್ಲ ಸತೀಶ್‌ ಜಾರಕಿಹೊಳಿ ಹೇಳಿಕೆ. ನೈಜತೆ ವಿವರಿಸದೆ, ಅವಾಂತರ ಸೃಷ್ಟಿಸಿದ್ದಾರೆ ಅಂತ ಆರೋಪ ಮಾಡಿದ್ದಲ್ಲದೆ, ಸಿಎಂಗೆ ಪತ್ರ ಬರೆದು ತನಿಖೆಗೆ ಆಗ್ರಹಿಸ್ತೀನಿ ಎಂದಿದ್ದಾರೆ.

ಯಶಸ್ವಿ `ಭಾರತ್ ಜೋಡೋ’ ಯಾತ್ರೆಯಲ್ಲಿದ್ದ ರಾಹುಲ್ ಗಾಂಧಿಯೂ ಗರಂ ಆಗಿದ್ದಾರೆ. ತಮ್ಮ ನಿಲುವಿಗೆ ಅಂಟಿಕೊಂಡಿದ್ದ ಸತೀಶ್​ಗೆ ತರಾಟೆಗೆ ತೆಗೆದುಕೊಂಡಿದೆ ಕಾಂಗ್ರೆಸ್‌ ಹೈಕಮಾಂಡ್‌. ಬಿಜೆಪಿ ಪ್ರತಿಭಟನೆಗೆ ಬ್ರೇಕ್‌ ಹಾಕೋದು ಒಂದ್ಕಡೆಯಾದ್ರೆ, ಪಕ್ಷಕ್ಕೆ ಆಗ್ತಿದ್ದ ಡ್ಯಾಮೇಜ್‌ ಕಂಟ್ರೋಲ್‌ಗೆ ವಿಷಾದನೆಯ ಅಸ್ತ್ರ ಪ್ರಯೋಗಿಸಿದಂತಿದೆ.

RELATED ARTICLES

Related Articles

TRENDING ARTICLES