Monday, December 23, 2024

ಕೆಂಪೇಗೌಡರ ಪ್ರತಿಮೆ ಅನಾವರಣ ಥೀಮ್ ಪಾರ್ಕ್‌ಗೆ ಮಣ್ಣು ಮತ್ತು ಜಲ‌ ಸಮರ್ಪಣೆ..!

ಬೆಂಗಳೂರು ಗ್ರಾಮಾಂತರ: ನವಂಬರ್ 11 ಕ್ಕೆ ಮೋದಿಯಿಂದ ಕೆಂಪೇಗೌಡರ ಪ್ರತಿಮೆ ಅನಾವರಣ ಹಿನ್ನೆಲೆ. ನಾಡಿನಾದ್ಯಂತ ಸಂಗ್ರಹಿಸಿದ ಮೃತ್ತಿಕೆ ಮತ್ತು ಜಲ ಸಮರ್ಪಣೆ. ಕೆಂಪೇಗೌಡರ ಬೃಹತ್ ಪ್ರತಿಮೆಯ ಮುಂಬಾಗ ಸಮರ್ಪಣೆ.

ಥೀಮ್ ಪಾರ್ಕ್‌ ಮುಂಬಾಗ ಮಣ್ಣು ಮತ್ತು ಜಲ‌ ಹಾಕಲು ಬಂದ ಸಚಿವರು. ನಾಡಿನಾದ್ಯಂತ ಸಂಗ್ರಹಿಸಿದ ಮಣ್ಣು ಮತ್ತು ಜಲಕ್ಕೆ ಪೂಜೆ ನೆರವೇರಿಸಿ ಸಮರ್ಪಣೆ.ಸಚಿವ ಅಶ್ವತ್ ನಾರಾಯಣ, ಆರ್.ಅಶೋಕ್ ಸದಾನಂದಗೌಡ, ಎಸ್.ಆರ್.ವಿಶ್ವನಾಥ್, ಬಿ.ಎನ್.ಬಚ್ಚೇಗೌಡ ಮತ್ತು ಜಗ್ಗೇಶ್ ರಿಂದ ಸಮರ್ಪಣೆ.

ಈಗಾಗಲೆ ಕೆಂಪೇಗೌಡರ ಪುತ್ಥಳಿ ಮುಂದೆ ನಿರ್ಮಾಣವಾಗ್ತಿರೂ ಪಾರ್ಕ್. ಪಾರ್ಕ್ ಗಿಡಗಳಿಗೆ ರಾಜ್ಯದ ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಣ್ಣು ಹಾಕಿ ನಿರ್ಮಾಣ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ನಿರ್ಮಾಣವಾಗಿರೂ ಬೃಹತ್ ಪ್ರತಿಮೆ.

RELATED ARTICLES

Related Articles

TRENDING ARTICLES