Monday, February 24, 2025

ಜನ ಸೇವೆಗೆ ಸಜ್ಜಾಗಿದೆ ಅಪ್ಪಾಜಿ ಕ್ಯಾಂಟಿನ್..!

ಮಂಡ್ಯ: ಹೆಚ್.ಡಿ.ಕೋಟೆ ತಾಲೂಕಿನ ಸರಗೂರಿನಲ್ಲಿ ತಲೆ ಎತ್ತಿದ ಅಪ್ಪಾಜಿ ಕ್ಯಾಂಟಿನ್. ಈಗಾಗಲೇ ಹೆಚ್.ಡಿ.ಕೋಟೆಯಲ್ಲಿ ತೆರೆದಿರೋ ಅಪ್ಪಾಜಿ ಕ್ಯಾಂಟಿನ್.

ಮಾಜಿ ಸಿಎಂ ಕುಮಾರಸ್ವಾಮಿಯಿಂದ ಉದ್ಘಾಟನೆಯಾಗಲಿರೋ ಕ್ಯಾಂಟಿನ್, ಅಪ್ಪಾಜಿ ಕ್ಯಾಂಟಿನ್ ಹೊಂದಿರೋ ರಾಜ್ಯದ ಏಕೈಕ ತಾಲೂಕು ಹೆಚ್ ಡಿ ಕೋಟೆ. ಇದೀಗ ಸರಗೂರು ಪಟ್ಟಣದಲ್ಲಿ ಎರಡನೇ ಕ್ಯಾಂಟಿನ್ ಉದ್ಘಾಟನೆ. ಅಪ್ಪಾಜಿ ಕ್ಯಾಂಟಿನ್ ಮೂಲಕ ರಾಜ್ಯಾದ್ಯಂತ ಮನೆಮಾತಾಗಿರೋ ಕೃಷ್ಣನಾಯಕ.  ಹೆಚ್.ಡಿ.ಕೋಟೆ ಮೀಸಲು ಕ್ಷೇತ್ರದಿಂದ ಜೆಡಿಎಸ್ ಟಿಕೇಟ್ ಆಕಾಂಕ್ಷಿಯಾಗಿರೋ ಕೃಷ್ಣನಾಯಕ.

ಮಾಜಿ ಸಿಎಂ ಕುಮಾರಸ್ವಾಮಿಗೆ ಅತ್ಯಾಪ್ತರಾಗಿರೊ ಕೃಷ್ಣನಾಯಕ, ಕೋಟೆ ಕ್ಷೇತ್ರದಲ್ಲಿ ಕೃಷ್ಣನಾಯಕ ಮೇಲೆ ಒಲವು ತೋರಿಸಿರೋ ಕುಮಾರಸ್ವಾಮಿ. ಜೆಡಿಎಸ್ ವರಿಷ್ಠರಿಂದ ಗ್ರೀನ್ ಸಿಗ್ನಲ್ ಪಡೆದು ಜನ ಸೇವೆಗೆ ಮುಂದಾಗಿರೋ ಲೀಡರ್. ಟಿಕೆಟ್ ಗೊಂದಲವಿದ್ರೂ ಸಾಮಾಜಿಕ ಕಾರ್ಯದ ಮೂಲಕ ಜನಸೇವೆಯಲ್ಲಿ ಮಗ್ನರಾಗಿದ್ದಾರೆ. ಕಚೇರಿ ಕೆಲಸಕ್ಕೆ ಸರಗೂರು ಪಟ್ಟಣಕ್ಕೆ ಬರೋ ಬಡ , ಮಧ್ಯಮ ವರ್ಗದ ಜನ್ರಿಗೆ ಅಕ್ಷಯ ಪಾತ್ರೆಯಾಗಲಿರೋ ಕ್ಯಾಂಟಿನ್. ಕೇವಲ 10 ರೂಗೆ ಸಿಗಲಿರೋ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ.

RELATED ARTICLES

Related Articles

TRENDING ARTICLES