Thursday, December 26, 2024

ಸತೀಶ್ ಜಾರಕಿಹೊಳಿ ಹೇಳಿಕೆ ಅಕ್ಷಮ್ಯ ಅಪರಾಧ; ಮಾಜಿ ಸಿಎಂ ಯಡಿಯೂರಪ್ಪ

ಬೆಂಗಳೂರು: ಹಿಂದೂ ಪದ ಅಶ್ಲೀಲ ಎಂದು ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ಸತೀಶ್ ಜಾರಕಿಹೊಳಿ ಹೇಳಿಕೆ ಅಕ್ಷಮ್ಯ ಅಪರಾಧವಾಗಿದೆ. ಅವರು ತಮ್ಮ‌ ಹೇಳಿಕೆಗೆ ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.

ಬೆಂಗಳೂರಿನ ಕಾವೇರಿ ನಿವಾಸದ ಬಳಿ ಯಡಿಯೂರಪ್ಪ ಮಾತನಾಡಿ, ಸತೀಶ್ ಜಾರಕಿಹೊಳಿ ಹಿಂದೂಗಳಿಗೆ ಅಪಮಾನ ಮಾಡಿದ್ದಾರೆ. ಹಾಗಲ್ಲ ಹೀಗೆ ಅಂತ ಮಾತಾಡೋದು ಈಗ ಸರಿಯಲ್ಲ. ಇನ್ಮುಂದೆ ಹೀಗೆ ಮಾತಾಡಲ್ಲ ಅಂತ ಸತೀಶ್ ಹೇಳಲಿ ಎಂದು ಒತ್ತಾಯ ಮಾಡಿದರು.

ಹಿಂದು ಸಮಾಜದ ಕುರಿತು ಮಾತನಾಡಿದ ಸತೀಶ್​ ಜಾರಕಿಹೊಳಿಗೆ ಜನರು ತಕ್ಕ ಪಾಠ ಕಲಿಸ್ತಾರೆ ಎಂದ ಅವರು, ಇಂದು ಸಂಜೆಗೆ ಚುನಾವಣಾ ಸಮಿತಿ ಸಭೆ ಇದೆ. ಹಾಗಾಗಿ ದೆಹಲಿಗೆ ಹೊರಟಿದ್ದೇನೆ. ನಾಳೆ ಬೆಳಗ್ಗೆ ವಾಪಸ್ ಬರ್ತೇನೆ. ವರಿಷ್ಠರ ಜತೆ ಈಗ ರಾಜ್ಯ ರಾಜಕಾರಣದ ಬಗ್ಗೆ ಮಾತಾಡುವ ಪ್ರಶ್ನೆ ಉದ್ಭವ ಆಗಲ್ಲ. ಚುನಾವಣೆ ದೃಷ್ಟಿಯಿಂದ ನಮ್ಮ ಪಕ್ಷದ ಬಗ್ಗೆ ಇವತ್ತು ಮಾತಾಡುವ ಸಂಭವ ಕಡಿಮೆ ಎಂದು ಯಡಿಯೂರಪ್ಪ ಹೇಳಿದರು.

RELATED ARTICLES

Related Articles

TRENDING ARTICLES