Saturday, April 20, 2024

ಹಿಂದು ಧರ್ಮ ಎನ್ನೋದು ಜೀವನ ಶೈಲಿ ಅಷ್ಟೇ; ಬಿಜೆಪಿ ರಮೇಶ್​ ಕತ್ತಿ ವಿಡಿಯೋ ವೈರಲ್​

ಬೆಳಗಾವಿ: ಹಿಂದು ಧರ್ಮ ಪದದ ಅರ್ಥ ಅಶ್ಲಿಲ ಹಾಗೂ ಹಿಂದೂ ಪರ್ಷಿಯನ್​ ಪದ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ಬೆನ್ನಲ್ಲೇಯಲ್ಲಿ ಹಿಂದು ವಿಚಾರದಲ್ಲಿ ಬೆಳಗಾವಿ ಬಿಜೆಪಿ ನಾಯಕನ ಭಾಷಣದ ವಿಡಿಯೋ ವೈರಲ್ ಆಗಿದೆ.

ಮಾಜಿ ಸಂಸದ, ಬಿಜೆಪಿ ನಾಯಕ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಭಾಷಣದ ವಿಡಿಯೋ ತುಣುಕು ವೈರಲ್ ಆಗಿದ್ದು, ಇದರಲ್ಲಿ ಹಿಂದು ಧರ್ಮ ಅನ್ನುವ ಕುರಿಚು ಚರ್ಚೆ ನಡೆಯುತ್ತಿದೆ. ಹಿಂದು ಧರ್ಮ ಅನ್ನುವಂತದ್ದು ಧರ್ಮ ಅಲ್ಲ. ಅದು ಒಂದು ನಮ್ಮ ಜೀವನ ಶೈಲಿ ಅಷ್ಟೇ, ಬಹಳಷ್ಟು ಪುಸ್ತಕಗಳನ್ನು ಓದಿದ್ದೇನೆ, ಹಿಂದು ಧರ್ಮ ಅನ್ನುವಂತದ್ದೆ ಇಲ್ಲ ಎಂದಿದ್ದಾರೆ.

ಇನ್ನು ದೇಶದಕ್ಕೆ ಹಿಂದು ಎನ್ನುವ ಹೆಸರು ಹೇಗೆ ಬಂದಿದೆ. ಭಾರತ ದೇಶ ತನ್ನನ್ನ ತಾನು ಗುರುತಿಸಿಕೊಂಡಿದ್ದು ಹಿಮಾಲಯ ಪರ್ವತ ಹಿಂದು ಮಹಾಸಾಗರಿಂದ ಹಾಗೂ ಸಿಂದೂ ನದಿಯ ಪ್ರಾಂತ್ಯ, ಸಿಂದ ಪ್ರಾಂತ್ಯದಲ್ಲಿ ಬದುಕು ಭಾವನೆಯಿಂದ. ಯುರೋಪಿಯನ್, ಬ್ರಿಟಿಷಿಯನ್ಸ್ ಅಮೇರಿಕನ್ಸ್ ಯಾವ ರೀತಿ ಕರೆಯುತ್ತಾರೆ. ಅದೆ ರೀತಿ ನಮ್ಮಲ್ಲಿನ ಸನಾತನ ಧರ್ಮದ ಮೂಲವಾಗಿ ಒಂದೆಡೆ ಹಿಮಾಲಯ ಪರ್ವತವಾಗಿದೆ ಎಂದು ಈ ವಿಡಿಯೋದಲ್ಲಿ ರಮೇಶ್​ ಕತ್ತಿ ಹೇಳಿದ್ದಾರೆ.

ಇನ್ನೊಂದೆಡೆ ಹಿಂದು ಮಹಾಸಾಗರ ಸಿಂದ ನದಿಯ ಭಾಗವಾಗಿ ಈ ಭಾಗದಲ್ಲಿ ಜನಿಸುವ ಜನಾಂಗಕ್ಕೆ ಹಿಂದು ಎಂದು ಮಾಡಿದ್ದಾರೆ. ಹಾಗಾಗಿ ಹಿಂದು ಎನ್ನುವುದು ಧರ್ಮ ಅಲ್ಲ ಇದು ರಾಷ್ಟ್ರೀಯತೆ ಅಷ್ಟೇ ಎಂದರು.

RELATED ARTICLES

Related Articles

TRENDING ARTICLES