Tuesday, January 7, 2025

ಮಗು ಚಿವುಟಿ, ತೊಟ್ಟಿಲು ತೂಗ್ತಾರೆ : ಆರಗ ಜ್ಞಾನೇಂದ್ರ

ಬೆಂಗಳೂರು : ಸತೀಶ್ ಜಾರಕಿಹೊಳಿ ಹೇಳಿರುವ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬರುವ ಪೂರ್ವ ಹಾಗೂ ಬಂದ ನಂತರವೂ ಮುಸ್ಲಿಮರಿಗೆ ದೇಶ ಒಡೆದು ಕೊಟ್ಟವರು ಕಾಂಗ್ರೆಸ್ಸಿಗರು. ಮುಸ್ಲಿಂರನ್ನು ತುಷ್ಟೀಕರಣ ಮಾಡಿ, ಹಿಂದೂ ಮುಸ್ಲಿಂ ಒಟ್ಟಿಗೆ ಬದುಕದ ರೀತಿಯಲ್ಲಿ ಮಾಡಿದ್ದಾರೆ. ಆದ್ದರಿಂದ ಜಾರಕಿಹೊಳಿ‌ ಮುಸ್ಲಿಂ ತುಷ್ಟೀಕರಣದ ಒಂದು ಭಾಗ, ಆದ್ರಿಂದ ಅವರ ಹೇಳಿಕೆಯಲ್ಲಿ ಆಚ್ಚರಿ ಏನು ಇಲ್ಲ ಎಂದರು.

ಸತೀಶ್​​​ ಜಾರಕಿಹೊಳಿ ಹಿಂದೂ ಪದದ ಅರ್ಥ ಅಶ್ಲೀಲ ಎಂಬ ವಿಚಾರಕ್ಕೆ ಕಾಂಗ್ರೆಸ್​​ ಉಸ್ತುವಾರಿ ರಣ್​​ದೀಪ್​ ಸಿಂಗ್​​​ ಸುರ್ಜೇವಾಲ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಅವರು, ಮಗು ಚೂಟೋದು ಅವರೇ, ತೊಟ್ಟಿಲು ತೂಗೋದು ಅವರೇ ಮಸೀದಿಗೆ ಹೋಗಿ ಕರ್ಚಿಫ್ ಹಾಕಿ ಕುಳಿತುಕೊಳ್ಳುವವರು ಈಗ ದೇವಸ್ಥಾನಗಳಿಗೆ ಓಡಾಡುತ್ತಿದ್ದಾರೆ. ಹಿಂದೂಗಳನ್ನು ಓಲೈಸಬೇಕು, ಮುಸ್ಲಿಂ ಅವರನ್ನು ಓಲೈಸಬೇಕು ಎಂದು ರೀತಿ ಹೇಳ್ತಾರೆ ಎಂದು ಆಗರ ಜ್ಞಾನೇಂದ್ರ ಹೇಳಿದರು.

RELATED ARTICLES

Related Articles

TRENDING ARTICLES