Monday, December 23, 2024

ಅಲಿಯಾ- ರಣ್​​​​​​ಬೀರ್ ಮನೆಗೆ ಮಹಾಲಕ್ಷ್ಮಿಯ ಆಗಮನ

ಬಾಲಿವುಡ್​​​ನ ಕ್ಯೂಟ್​ ಕಪಲ್​​ಗಳಲ್ಲಿ ಒಂದಾದ ರಣಬೀರ್​ ಹಾಗೂ ಅಲಿಯಾ ಭಟ್​ ಅಭಿಮಾನಿಗಳಿಗೆ ಗುಡ್​​ನ್ಯೂಸ್​ ಕೊಟ್ಟಿದ್ದಾರೆ. ಸದ್ಯ ಈ ಜೋಡಿಯ ಫ್ಯಾಮಿಲಿಯಲ್ಲಿ ಸಂತಸ ಮನೆ ಮಾಡಿದ್ದು ಇಡೀ ಕುಟುಂಬ ಸಂಭ್ರಮದಲ್ಲಿದೆ. ಕಪೂರ್​ ಫ್ಯಾಮಿಲಿಗೆ ಮತ್ತೊಬ್ಬ ಕ್ಯೂಟ್​​ ಹೀರೋಇನ್​ ಎಂಟ್ರಿ ಕೊಟ್ಟಿದ್ದು ರಣಬೀರ್​​ ತಂದೆಯಾಗಿ ಬಡ್ತಿ ಪಡೆದಿದ್ದಾರೆ.

  • ಮೊದಲ ಮಗುವನ್ನು ವೆಲ್ಕಮ್​ ಮಾಡಿದ ದಂಪತಿಗಳು

ಬಾಲಿವುಡ್​​. ಇದೊಂದು ಕಲರ್​ಫುಲ್​​ ಲೋಕ. ಗ್ಲಾಮರಸ್​ ಜಗತ್ತಿನ ಮಾಯಲೋಕದಲ್ಲಿ ಪ್ರೀತಿ, ಪ್ರೇಮ, ಬ್ರೇಕಪ್​​ಗಳು ವೆರಿ ಕಾಮನ್​. ಇದಕ್ಕೆ ಸಾಕ್ಷಿಯಾಗಿ ಚಿಗುರಿದ ಪ್ರೇಮಕಥೆಗಿಂತ, ಮುರಿದು ಬಿದ್ದ ಮದ್ವೆಗಳೆ ಜಾಸ್ತಿ. ಇನ್ನೂ ಪ್ರಭಾವಿ ಫ್ಯಾಮಿಲಿಯ ಸಂಬಂಧಗಳು ಅಂದ್ರೆ ಕೇಳ್ಬೇಕೆ..? ಆದ್ರೆ, ಇವೆಲ್ಲವನ್ನು ಸುಳ್ಳು ಮಾಡಿದ್ದು ಅಲಿಯಾ- ರಣಬೀರ್​​ ಮುದ್ದಾದ ಜೋಡಿ.

ಈ ವರ್ಷ ಏಪ್ರಿಲ್​ 14 ರಂದು ಸಪ್ತಪದಿ ತುಳಿದಿದ್ದ ಪ್ರೇಮಪಕ್ಷಿಗಳಿಗೆ ಆರಂಭದಲ್ಲೇ ಗುಡ್​ ನ್ಯೂಸ್​ ಸಿಕ್ಕಿತ್ತು. ಅಲಿಯಾ ತಾಯಿಯಾಗೋ ಸುದ್ದಿಯನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ರು. ಬ್ರಹ್ಮಾಸ್ತ್ರ ಚಿತ್ರದ ಶೂಟಿಂಗ್​ ಆರಂಭದಲ್ಲೇ ಚಿಗುರಿದ್ದ ಸ್ನೇಹ, ಪ್ರೀತಿಗೆ ತಿರುಗಿತ್ತು. ನಂತ್ರ ಡೇಟಿಂಗ್​​ನಲ್ಲಿದ್ದ ಜೋಡಿ ಮದ್ವೆಯಾಗಿ ಅಭಿಮಾನಿಗಳಿಗೆ ಗುಡ್​​​​ನ್ಯೂಸ್​ ಕೂಡ ಕೊಟ್ಟಿದ್ರು. ಇದೀಗ, ಮದ್ವೆಯಾದ ಏಳು ತಿಂಗಳಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿ ಅಲಿಯಾ ಮತ್ತೊಂದು ಸರ್​​ಪ್ರೈಸ್​ ಕೊಟ್ಟಿದ್ದಾರೆ.

  • ಮುದ್ದು ಮಗಳಿಗೆ ಮ್ಯಾಜಿಕಲ್​ ಗರ್ಲ್​​​ ಎಂದು ಬಿರುದು
  • ಮಗುವಿನ ಜವಾಬ್ದಾರಿ ಹೊರೋಕೆ ರಣ್​ಬೀರ್​ ರೆಡಿ..!

ಬಣ್ಣದ ಲೋಕದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇರುವ ನಡುವೆಯೇ ಅಲಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. 29ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಲಿಯಾ ಮದ್ವೆಯಾದ ಎರಡೇ ತಿಂಗಳಲ್ಲಿ ತಾಯಿಯಾದ ಸುದ್ದಿ ಕೊಟ್ರು. ಇದಕ್ಕೆ ಸೋಶೀಯಲ್​ ಮೀಡಿಯಾಗಳಲ್ಲಿ ಕಲರ್​​ಫುಲ್​ ನೆಗಟಿವ್​ ಕಮೆಂಟ್ಸ್​ ಕೂಡ ಎದುರಿಸಬೇಕಾಗಿ ಬಂತು.

ಈ ಎಲ್ಲಾ ಪ್ರತಿಕ್ರಿಯೆಗಳಿಗೂ ಮೌನವಾಗಿಯೇ ಕ್ಯೂಟ್​ ಜೋಡಿ ಉತ್ತರ ಕೊಡ್ತು. ಹೆಣ್ಣು ಮಗುವಿನ ಖುಷಿಯಲ್ಲಿರೋ ಜೋಡಿ ಈ ಹಿಂದೆಯೇ ಆರೈಕೆಯ ಬಗ್ಗೆ ಮಾತನಾಡಿ ಸುದ್ದಿಯಲ್ಲಿತ್ತು. ಮಗು ಬರುತ್ತಿರುವುದಕ್ಕೆ ರಣಬೀರ್ ತುಂಬ ಖುಷಿಯಾಗಿದ್ದಾರೆ. ಅವರು ಜವಾಬ್ದಾರಿ ತೆಗೆದುಕೊಳ್ಳಲು ರೆಡಿಯಿದ್ದಾರೆ. ನಾನು ಈ ತಿಂಗಳು ಕೆಲಸ ಮಾಡ್ತೀನಿ, ನೀನು ಮನೆಯಲ್ಲಿರು, ನೀನು ಈ ತಿಂಗಳು ಮನೆಯಲ್ಲಿರು, ನಾನು ಕೆಲಸ ಮಾಡ್ತೀನಿ ಎಂದು ನಾವಿಬ್ಬರೂ ಹೇಳಿಕೊಂಡು ಸಿನಿಮಾ ಕೆಲಸ ಮುಗಿಸುತ್ತೇವೆ” ಎಂದಿದ್ದರು.

ಬಾಲಿವುಡ್ ಮೋಸ್ಟ್‌ ಕ್ಯೂಟ್, ರೊಮ್ಯಾಂಟಿಕ್ ಆಂಡ್ ಹಾಟ್ ಕಪಲ್ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್  ಹೆಣ್ಣು ಮಗುವನ್ನು ಬರ ಮಾಡಿಕೊಂಡಿದ್ದು ಅಭಿಮಾನಿಗಳಿಗೆ ಸಂತಸಕ್ಕೆ ಕಾರಣವಾಗಿದೆ. ಆಲಿಯಾ ಭಟ್ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಕಪೂರ್ ಮತ್ತು ಭಟ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಹರಿದು ಬರುತ್ತಿದೆ.

ರಾಕೇಶ್​ ಆರುಂಡಿ, ಫಿಲ್ಮ್ ಬ್ಯುರೋ, ಪವರ್ ಟಿವಿ

RELATED ARTICLES

Related Articles

TRENDING ARTICLES